ಸ್ವಾಮೀಜಿಯ ಸಾವಿಗೆ ಕಾರಣವಾಯ್ತಾ ಆ ವಿಡಿಯೋ? ಹನಿಟ್ರ್ಯಾಪ್‌ಗೆ ಒಳಗಾದ್ರಾ ಬಂಡೆ ಮಠದ ಸ್ವಾಮೀಜಿ?

ಡೆತ್‌ನೋಟೇ ಸುಳ್ಳು ಅಂತ ಈಗ ಪೊಲೀಸರು ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಎಫ್‌ಐಆರ್‌ಗೂ ಸ್ವಾಮೀಜಿಯ ಕೊಠಡಿಯಲ್ಲಿ ಸಿಕ್ಕಿದೆ ಅಂತ ಹೇಳ್ಲಾಗುತ್ತಿರುವ ಡೆತ್‌ನೋಟ್‌ಗೂ ಅಜಗಜಾಂತರ ವ್ಯತ್ಯಾಸವಿದೆ. 

Share this Video
  • FB
  • Linkdin
  • Whatsapp

ರಾಮನಗರ(ಅ.27): ಸ್ವಾಮೀಜಿಗಳ ಸಾವಿನ ಸುತ್ತ ಈಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಹಲವು ಜನ ಹಲವಾರು ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದ್ರೆ ಅದಕ್ಕೆಲ್ಲಾ ಕಾರಣವಾಗಿರೋದು ಅವರ ಕೊಠಡಿಯಲ್ಲಿ ಸಿಕ್ಕ ಮೂರು ಪುಠಗಳ ಡೆತ್ ನೋಟ್. ಆದ್ರೆ ಆ ಡೆತ್‌ನೋಟೇ ಸುಳ್ಳು ಅಂತ ಈಗ ಪೊಲೀಸರು ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಎಫ್‌ಐಆರ್‌ಗೂ ಸ್ವಾಮೀಜಿಯ ಕೊಠಡಿಯಲ್ಲಿ ಸಿಕ್ಕಿದೆ ಅಂತ ಹೇಳ್ಲಾಗುತ್ತಿರುವ ಡೆತ್‌ನೋಟ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಇದೆಲ್ಲದ್ರ ಮಧ್ಯೆ ಸ್ವಾಮೀಜಿಯ ಒಂದು ಚಾಟಿಂಗ್ ವಿಡಿಯೋ ಈಗ ವೈರಲ್ ಆಗಿದ್ದು ಶ್ರೀಗಳ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಎಲ್ಲಾ ಅನುಮಾನಗಳ ಕಂಪ್ಲೀಟ್ ಮತ್ತು ಇನ್ಸೈಡ್ ಡಿಟೇಲ್ಸ್ ತಿಳಿದುಕೊಳ್ಳೋದೇ ಇವತ್ತಿನ ಎಫ್ಐಆರ್.

ಯಾವಾಗ ಈ ರೀತಿಯ ಡೆತ್ ನೋಟ್ ಒಂದು ಹರಿದಾಡೋದಕ್ಕೆ ಶುರುವಾಯ್ತೋ ಮಠದ ಭಕ್ತರಲ್ಲಿ ಮತ್ತು ಜನರಲ್ಲಿ ಶ್ರೀಗಳ ಸಾವಿನ ಬಗ್ಗೆ ಅನುಮಾನ ಪಡೋಕೆ ಶುರು ಮಾಡಿದ್ರು. ಡೆತ್ ನೋಟ್‌ನಲ್ಲಿ ಗೊತ್ತಿಲ್ಲದ ಮಹಿಳೆಯೊಬ್ಬಳ ದೂರವಾಣಿ ಕರೆ ಬಗ್ಗೆ ಉಲ್ಲೇಖವಾಗಿದ್ದು.. ಇದೇ ಫೋನ್ ಕರೆಯಿಂದ ಶ್ರೀಗಳು ನೇಣಿಗೆ ಕೊರಳೊಡ್ಡಿದ್ರಾ ಅನ್ನೋ ಅನುಮಾನವೂ ಆವೇಳೆಯಲ್ಲಿ ಎಲ್ಲರಿಗೂ ಅನಿಸಿತ್ತು. ಆದ್ರೆ ಈ ಅನುಮಾನಗಳು ಹೆಚ್ಚಾಗ್ತಿದ್ದಂತೆ ರಾಮನಗರದ ಪೊಲೀಸರು ಒಂದು ಪ್ರೆಸ್ ಮೀಟ್ ಮಾಡಿದ್ರು. ಆದ್ರೆ ಆ ಸುದ್ದಿಗೋಷ್ಟಿಯಲ್ಲಿ ಪೊಲೀಸರು ಕೊಟ್ಟ ಮಾಹಿತಿ ಜನರಲ್ಲಿ ಮತ್ತಷ್ಟು ಅನುಮಾನಗಳನ್ನ ಮೂಡಿಸೋದಕ್ಕೆ ಶುರುವಾಯ್ತು. ಕಾರಣ ಅವರು ಹೇಳಿದ್ದೇ ಒಂದು ಎಫ್ಐಆರ್‌ನಲ್ಲಿ ದಾಖಲಾಗಿದ್ದಿದ್ದೇ ಇನ್ನೊಂದು.

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹನಿಟ್ರ್ಯಾಪ್, ರಾಜಕಾರಣಿ ಡೀಲ್, ಮುಂದೆ ನಡೆದದ್ದು ಘೋರ!

ಇಷ್ಟೆಲ್ಲಾ ವ್ಯತ್ಯಾಸಗಳು ಎಫ್ಐಆರ್‌ನಲ್ಲಿ ಮತ್ತು ಪೊಲೀಸರ ಹೇಳಿಕೆಗಳಲ್ಲಿ ಕಂಡು ಬಂದ್ರೆ ಯಾರಿಗೆ ತಾನೇ ಅನುಮಾನ ಬರೋದಿಲ್ಲ. ಪೊಲೀಸರು ಇಲ್ಲಿ ಯಾರನ್ನೋ ಸೇವ್ ಮಾಡಲು ಹೊರಟಿದ್ದಾರೆ ಅಂತ ಅನ್ನಿಸಲ್ವಾ..? ಆದ್ರೆ ಇಷ್ಟೆಲ್ಲಾ ಆಗ್ತಿರುವಾಗ್ಲೇ ಸ್ವಾಮೀಜಿಗಳ ಚಾಟಿಂಗ್ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಆ ವಿಡಿಯೋಗೂ ರೆಕ್ಕೆ ಪುಕ್ಕ ಬೆಳೆದುಕೊಂಡಿದೆ. 

ಪೊಲೀಸರು ಹೇಳ್ತಿರೋದೇ ಒಂದು ಎಫ್‌ಐಆರ್‌ನಲ್ಲಿರೋದೇ ಒಂದು. ಇನ್ನೂ ಸ್ವಾಮೀಜಿ ಆತ್ಮಹತ್ಯೆ ನಂತರ ಅವರ ಸಾವಿನ ಬಗ್ಗೆ ಒಂದೊಂದು ಕಥೆಗಳು ಒಂದೊಂದು ರೀತಿಯಲ್ಲಿ ಹರಿದಾಡ್ತಿದೆ. ಇನ್ನೂ ಈ ಎಲ್ಲಾ ಅಂತೆ ಕಂತೆಗಳ ನಡುವೆ ಶ್ರೀಗಳ ಚಾಟಿಂಗ್ ವಿಡಿಯೋ ಒಂದು ವೈರಲ್ ಆಗ್ತಿದೆ. ಈ ವಿಡಿಯೋವನ್ನ ನೋಡ್ತಿದ್ರೆ ಅವರು ಹನಿಟ್ರ್ಯಾಪ್ಗೆ ಒಳಗಾದ್ರಾ ಅನ್ನೋ ಅನುಮಾನವೂ ಹುಟ್ಟಿಕೊಳ್ತಿದೆ. ಅಷ್ಟೇ ಅಲ್ಲ ಇದಕ್ಕೆ ಸಂಬಂಧಿಸಿದಂತೆ 10 ದಿನಗಳ ಹಿಂದೆ ಸ್ವಾಮೀಜಿಗೆ ಒಂದು ಫೋನ್ ಕಾಲ್ ಬಂದಿದ್ದು, ಕಾಲ್ ಮಾಡಿದವರು ಅದೇ ವಿಡಿಯೋವನ್ನ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ. 

ಇದನ್ನೆಲ್ಲಾ ನೋಡ್ತಿದ್ರೆ ಶ್ರೀಗಳ ಸೂಸೈಡ್ ಕೇಸ್ ಬಗ್ಗೆ ಹಲವು ಅನುಮಾನಗಳು ಮೂಡೋದು ಸಹಜ. ಆದ್ರೆ ಈ ಅನುಮಾನಗಳನ್ನ ಪರಿಹರಿಸಬೇಕಾಗಿರೋದು ಪೊಲೀಸರು. ಪೊಲೀಸರಿಂದ ಮಾತ್ರವೇ ಸ್ವಾಮೀಜಿಗಳ ಸಾವಿಗೆ ನಿಖರ ಕಾರಣ ಗೊತ್ತಾಗೋದು. 

Related Video