ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!
ತನ್ನ ತಾಯಿ ವಯಸ್ಸಿನ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿ ವಿಕೃತಿ ಮೆರೆದಿದ್ದ ಸಯ್ಯದ್. ಈ ರೀತಿ ಸೈಕೋ ವರ್ತನೆಗೆ ಇಡೀ ಮುಳಬಾಗಿಲು ನಗರವೇ ಬೆಚ್ಚಿಬಿದ್ದಿದ್ದು, ಈ ಮನುಷ್ಯ ರೂಪದ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಜನರು ಆಗ್ರಹಿಸಿದ್ದಾರೆ.
ಕೋಲಾರ(ಅ.12): ಅದೊಂದು ಸುಂದರ ಕುಟುಂಬ ಗಂಡ ಹೆಂಡತಿ ಮತ್ತು ನಾಲ್ಕು ಮಕ್ಕಳು. ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಗಂಡನ ಮನೆಗೆ ಸೇರಿದ್ದಾರೆ. ಇನ್ನೂ ಇಬ್ಬರು ಗಂಡು ಮಕ್ಕಳು ಹೆತ್ತವರ ಜೊತೆಯೇ ಇದ್ದಾರೆ.ಆದ್ರೆ ಆ ಮನೆಯ ಒಡತಿ 20 ವರ್ಷದ ಹಿಂದೆ ಮಾನಸಿಕ ಅಸ್ವಸ್ಥಳಾಗ್ತಾಳೆ. ಆಕೆಯನ್ನ ಮಕ್ಕಳು ಅಂದಿನಿಂದ ಕೂಡಿ ಹಾಕಿರ್ತಾರೆ. ಎಲ್ಲೂ ಹೊರಗೆ ಬಿಟ್ಟಿರಲಿಲ್ಲ. ಆದ್ರೆ ಆವತ್ತು ಆಕೆಯನ್ನ ನೋಡಲು ಸಹೋದರಿ ಬಂದಿದ್ದಳು.. ಅಕ್ಕ ಓಡಾಡಿಕೊಂಡು ಬರಲಿ ಅಂತ ಆಕೆ ರೂಮ್ ಬಾಗಿಲು ತೆರೆದಳು. ಮನೆಯ ಅಕ್ಕಪಕ್ಕವೇ ಓಡಾಡಿಕೊಂಡಿದ್ದ ಆ ಅಸ್ವಸ್ಥೆ ಇದ್ದಕ್ಕಿದ್ದಂತೆ ಮಿಸ್ಸಿಂಗ್ ಆಗಿದ್ಲು. ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ಆದ್ರೆ ಎರಡು ದಿನಗಳ ನಂತರ ಆಕೆ ಹೆಣವಾಗಿ ಸಿಕ್ಕಿದ್ದಳು. ಆಕೆಯನ್ನ ಯಾರೋ ಕೊಲೆ ಮಾಡಿ ಅತ್ಯಾಚಾರ ಮಾಡಿದ್ರು. ಅಷ್ಟಕ್ಕೂ ಆ ಮಾನಸಿಕ ಅಸ್ವಸ್ಥೆಯನ್ನ ಕೊಂದಿದ್ಯಾರು? ಒಂದು ಡೆಡ್ಲಿ ಮರ್ಡರ್ ಆ್ಯಂಡ್ ರೇಪ್ ಕಥೆಯೇ ಇವತ್ತಿನ ಎಫ್.ಐ.ಆರ್.
ತನ್ನ ತಾಯಿ ವಯಸ್ಸಿನ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿ ವಿಕೃತಿ ಮೆರೆದಿದ್ದ ಸಯ್ಯದ್. ಈ ರೀತಿ ಸೈಕೋ ವರ್ತನೆಗೆ ಇಡೀ ಮುಳಬಾಗಿಲು ನಗರವೇ ಬೆಚ್ಚಿಬಿದ್ದಿದ್ದು, ಈ ಮನುಷ್ಯ ರೂಪದ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಜನರು ಆಗ್ರಹಿಸಿದ್ದಾರೆ.
ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?
ಆಕೆ ಒಂಟಿ ಜೀವನ ನಡೆಸುತ್ತಿದ್ದವಳು.ಗಂಡ 6 ವರ್ಷದ ಹಿಂದೆ ತೀರಿ ಹೋದ ಮೇಲೆ ಆಕೆ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆಕೆಯ ಮಗು ಕೊಲೆಯಾಗಿಬಿಡುತ್ತೆ.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು ಒಬ್ಬ ಸೈಕೋ... ಆತ ಆ ಮಗುವನ್ನ ಕೊಂದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ.. ಅಷ್ಟಕ್ಕೂ ಆ ಕಿರಾತಕ ಮಗುವನ್ನ ಕೊಂದಿದ್ದೇಕೆ ಗೊತ್ತಾ..? ಆ ಮಗುವಿನ ತಾಯಿಗಾಗಿ.
ಪ್ರೀತಿಸಿದಾಕೆಯನ್ನ ಮದುವೆ ಮಾಡಿಕೊಳ್ಳಲೆಬೇಕು ಅಂತ ಹಠಕ್ಕೆ ಬಿದ್ದಿದ್ದ ನಬಿ ಜಗತ್ತಿನ ಬಗ್ಗೆ ಇನ್ನು ಏನು ಅರಿಯದ 11 ವರ್ಷದ ಬಾಲಕನನ್ನ ಕೊಲೆ ಮಾಡಿ ಪಾಪದ ಕೆಲಸ ಮಾಡಿ ಕಂಬಿ ಎಣಿಸುತ್ತಿದ್ದಾನೆ.