ಅಪಾರ್ಟ್ಮೆಂಟ್ನಲ್ಲಿ ಅಸ್ಸಾಮಿ ಸುಂದರಿಯ ಡೆಡ್ ಬಾಡಿ: ಬ್ರೇಕ್ ಅಪ್ ಅಂದವಳಿಗೆ ಮಚ್ಚು ಬೀಸಿದ ಪಾಗಲ್ ಪ್ರೇಮಿ!
ಆಕೆಯನ್ನ ಅಷ್ಟು ಬರ್ಬರವಾಗಿ ಕೊಂದಿದ್ದಾನೆ ಅಂದ್ರೆ ಆತನ ಮನಸ್ಥಿತಿ ಹೇಗಿರಬೇಡ... ಆದ್ರೆ ಆತ ಮಾಯಾಳನ್ನ ಕೊಂದಿದ್ದೇಕೆ..? ಆಕೆಗೂ ಈತನಿಗು ಏನ್ ಸಂಬಂಧ..? ಇದೆಲ್ಲವನ್ನ ತಿಳಿಯಬೇಕಾದ್ರೆ ಮೊದಲು ಅವನು ಸಿಗಬೇಕು.
ಬೆಂಗಳೂರು(ನ.27): ಅವಳು ದೂರದ ಅಸ್ಸಾಂನವಳು. ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲೇ ಕೆಲಸ ಗಿಟ್ಟಿಸಿಕೊಂಡು ತನ್ನ ಪಾಡಿಗೆ ತಾನು ಇದ್ದಳು. ಆದರೆ ಇವತ್ತು ಅದೇ ಯುವತಿ ಇಂದಿರಾನಗರದ ಸರ್ವೀಸ್ ಅಪಾರ್ಟ್ಮೆಂಟ್ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಾಳೆ. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಮುಗಿಸಿದ್ದಾನೆ. ಆಕೆಯ ಎದೆಯನ್ನೇ ಸೀಳಿಬಿಟ್ಟಿದ್ದಾನೆ. ಅಷ್ಟಕ್ಕೂ ಆಕೆಯನ್ನ ಕೊಂದೋರು ಯಾರು? ಯಾಕಾಗಿ ಕೊಂದ್ರು. ಆ ಅಪಾರ್ಟ್ಮೆಂಟ್ನಲ್ಲಿ ಆವತ್ತು ನಡೆದಿದ್ದಾದರೂ ಏನು?. ಒಬ್ಬ ಸುಂದರ ಯುವತಿಯ ಮರ್ಡರ್ ಮಿಸ್ಟರಿಯೇ ಇವತ್ತಿನ ಎಫ್.ಐ.ಆರ್.
ಕಾರಣ ಏನೇ ಇರಲಿ.. ಆಕೆಯನ್ನ ಅಷ್ಟು ಬರ್ಬರವಾಗಿ ಕೊಂದಿದ್ದಾನೆ ಅಂದ್ರೆ ಆತನ ಮನಸ್ಥಿತಿ ಹೇಗಿರಬೇಡ... ಆದ್ರೆ ಆತ ಮಾಯಾಳನ್ನ ಕೊಂದಿದ್ದೇಕೆ..? ಆಕೆಗೂ ಈತನಿಗು ಏನ್ ಸಂಬಂಧ..? ಇದೆಲ್ಲವನ್ನ ತಿಳಿಯಬೇಕಾದ್ರೆ ಮೊದಲು ಅವನು ಸಿಗಬೇಕು.
ಕೇವಲ ರೂ. 1.5 ಲಕ್ಷಕ್ಕೆ ಸುಪಾರಿ ಕೊಟ್ಟು ಗಂಡನನ್ನು ಪರಲೋಕಕ್ಕೆ ಕಳಿಸಿದ ಪತ್ನಿ!
ಅದು ಎರಡು ವರ್ಷದ ಪ್ರೀತಿ.. ಒದುವಾಗಿ ಪರಿಚಯವಾಗಿ ಪ್ರೇಮಿಗಳಾಗಿದ್ರು.. ಆದ್ರೆ ಆ ಪ್ರೇಮಕ್ಕೆ ಎರಡು ವರ್ಷವಾಗ್ತಿದ್ದಂತೆ ಪ್ರೇಯಸಿಗೆ ಆತ ಬೇಡವಾದ.. ಹೀಗಾಗಿ ಹಿಂದೆ ಮುಂದೆ ನೋಡದೇ ಬ್ರೇಕ್ ಅಪ್ ಅಂದುಬಿಟ್ಟಳು.. ಆತನೋ ಹುಚ್ಚ... ನೀನೇ ಬೆಕು ನೀನೇ ಬೇಕು ಅಂತ ಹಿಂದೆ ಬಿಳೋದಕ್ಕೆ ಶುರು ಮಾಡಿದ.. ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ.. ಆದ್ರೆ ಆತ ಏನ್ ಮಾಡಿದ್ರೂ ಈಕೆ ಮಾತ್ರ ಬದಲಾಗಲಿಲ್ಲ.. ಇನ್ನೇನು ಎಲ್ಲವೂ ಮುಗೀತು ಅನ್ನುವಷ್ಟರಲ್ಲೇ ಆ ಹುಚ್ಚ ತನ್ನ ಪ್ರೇಯಸಿಗೆ ಮಚ್ಚು ಬೀಸಿಬಿಟ್ಟಿದ್ದಾನೆ.
ಸದ್ಯದಲ್ಲೇ ಆ ಪಾಗಲ್ ಪ್ರೇಮಿ ತಗ್ಲಾಕಿಕೊಳ್ತಾನೆ.. ಆದ್ರೆ ಲವ್ವು ಗಿವ್ವು ಏನೂ ಬೇಡ ಅಂತ ತನ್ನ ಪಾಡಿಗೆ ತಾನು ಇದ್ದ ಗಾನವಿ ಇವತ್ತು ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದಾಳೆ.