ಕೇವಲ ರೂ. 1.5 ಲಕ್ಷಕ್ಕೆ ಸುಪಾರಿ ಕೊಟ್ಟು ಗಂಡನನ್ನು ಪರಲೋಕಕ್ಕೆ ಕಳಿಸಿದ ಪತ್ನಿ!

ಒಂದು ಸುಂದರ ಕುಟುಂಬದಲ್ಲಿ ನಡೆದ ಗಂಡನ ಸುಪಾರಿ ಕೊಲೆ ಮತ್ತು ಕೊಲೆಗಾರ ಯಾರು ಎಂಬುದರ ಬಗ್ಗೆ ಕಥೆ. ಗಂಡನನ್ನು ಕೊಲ್ಲಲು ಸುಪಾರಿ ಕೊಟ್ಟವರು ಯಾರು ಮತ್ತು ಅವರ ದ್ವೇಷಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

Share this Video
  • FB
  • Linkdin
  • Whatsapp

ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು. ಗಂಡ ಕೃಷಿಕನಾಗಿದ್ದರೆ ಹೆಂಡತಿ ಧರ್ಮಸ್ಥಳದ ಸಂಘದಲ್ಲಿ ಕೆಲಸ ಮಾಡ್ತಿದ್ದಳು. ಮಕ್ಕಳು ಶಾಲೆಗೆ ಹೋಗುತ್ತಿದ್ದವು. ಆದರೆ, ಆವತ್ತೊಂದು ದಿನ ಮನೆಯ ಮುಂದೆ ಇದ್ದ ಜಗುಲಿ ಮೇಲೆ ಮಲಗಿದ್ದ ಗಂಡ ಬೆಳಗಾಗುವಷ್ಟರಲ್ಲಿ ಹೆಣವಾಗಿ ಹೋಗಿದ್ದನು. ಯಾರು ಕೊಲೆ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎನ್ನುವುದು ನಿಗೂಢವಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಅದೊಂದು ಸುಪಾರಿ ಕೊಲೆ ಅಂತ. ಅಷ್ಟಕ್ಕೂ ಆ ಬಡಪಾಯಿಯನ್ನ ಕೊಲ್ಲುವ ಸುಪಾರಿ ಕೊಟ್ಟಿದ್ದು ಯಾರು? ಅಂಥಹ ದ್ವೇಷ ಯಾರಲ್ಲಿತ್ತು? ಎನ್ನುವುದೇ ಇವತ್ತಿನ ಎಫ್‌ಐಆರ್...

ಬಂಗಾರದಂಥ ಗಂಡ ಮತ್ತು ಮಕ್ಕಳು ಇದ್ರೂ ಮತ್ತೊಬ್ಬನ ಸಂಗ ಬಯಸಿದ ಹೆಂಡತಿ ಮಾಡಬಾರದನ್ನ ಮಾಡಿ ಇವತ್ತು ಜೈಲಿಗೆ ಸೇರಿದ್ದಾಳೆ. ಇದೀಗ ಅವಳ ಮೂರು ಮಕ್ಕಳು ಅನಾಥವಾಗಿವೆ. ಸಹೋದರರಿಬ್ಬರು ಕುಡಿತದ ಚಟಕ್ಕೆ ಬಲಿಯಾಗಿ ಊರಿನ ಜನರ ಪಾಲಿಗೆ ವಿಲನ್​​ ಆಗಿದ್ದವರು. ಆದರೆ, ಇವತ್ತು ಅಣ್ಣನೇ ತಮ್ಮನ ಹೆಣ ಹಾಕಿದ್ದಾನೆ. ಕುಡಿದು ಪಕ್ಕದವರ ಮನೆ ಇಣುಕಿ‌ ನೋಡಿದ ತಮ್ಮನಿಗೆ ಅಣ್ಣ ಚಾಕು ಹಾಕಿ ಕೊಂದು ಬಿಟ್ಟಿದ್ದಾನೆ. ನೋಡಿದ್ರಲ್ಲಾ.. ಎಣ್ಣೆ ಏಟು ಎಷ್ಟೆಲ್ಲಾ ಮಾಡಿಸಿಬಿಡುತ್ತೆ ಅಂತ. ಇವತ್ತು ಕುಡಿದ ಮತ್ತಲ್ಲಿ ಅಣ್ಣನೇ ತಮ್ಮನ ಕೊಲೆ ಮಾಡಿ ಜೈಲಿಗೆ ಹೋದ್ರೆ ಆತನ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

Related Video