Asianet Suvarna News Asianet Suvarna News

ಹಿಂದಿಯಲ್ಲಿ ಕೆಜಿಎಫ್-2 ಎದುರು RRR ದಾಖಲೆ ಧೂಳಿಪಟ.!

ಯಶ್ ಕೆಜಿಎಫ್-2 ಸಿನಿಮಾ ಒಂದೇ ವಾರಲ್ಲಿ ಇದುವರೆಗೂ ಯಾರೂ ಮಾಡಿರದ ಸಾಧನೆ ಮಾಡಿದೆ. ಕೆಜಿಎಫ್ ಚಾಪ್ಟರ್-2 ಗಲ್ಲಾಪೆಟ್ಟಿಗೆಯಲ್ಲಿ ಒಂದೇ ವಾರಕ್ಕೆ 800 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡಿದೆ. ಅಷ್ಟೆ ಅಲ್ಲ ಈಗ ರಾಕಿ ಚಿತ್ತ 1000 ಕೋಟಿಯತ್ತ ನೆಟ್ಟಿದೆ. 

KGF 2 ನೋಡಿ ಅಲ್ಲು ಅರ್ಜುನ್ ದಿಲ್ಖುಷ್! ತೆರೆ ಮೇಲೆ ಒಂದಾಗ್ತಾರಾ ಪುಷ್ಪರಾಜ್- ರಾಕಿ ಭಾಯ್.?

ವಿಶ್ವದಾದ್ಯಂತ ಕೆಜಿಎಫ್-2 ತೂಫಾನ್ ಕಂಟಿನ್ಯೂ ಆಗಿದೆ. ರಾಕಿಯ ಆರ್ಭಟ, ಅಬ್ಬರಕ್ಕೆ ಗಲ್ಲಾಪೆಟ್ಟಿಗೆ ಬೆಚ್ಚಿದೆ. ಸುತ್ತಿಗೆ ಹಿಡಿದ ಸುಲ್ತಾನನ ಸುನಾಮಿಗೆ ಎಲ್ಲಾ ದಾಖಲೆಗಳು ಪುಡಿಗಟ್ಟುತ್ತಿವೆ. ಬಾಲಿವುಡ್, ಟಾಲಿವುಡ್ನ ಹಲವು ಬಾಕ್ಸಾಫೀಸ್ ಕಲೆಕ್ಷನ್ಗಳನ್ನ ಅಳಿಸಿಹಾಕಿದ್ದು, ಯಶ್ ತನ್ನ ಅಧಿಪತ್ಯ ಸ್ಥಾಪಿಸಿದ್ದಾರೆ. ಈಗ ಯಶ್ ಕಣ್ಣಿಟ್ಟಿರೋದು ಒನ್ ಆ್ಯಂಡ್ ಓನ್ಲಿ ರಾಜಮೌಳಿಯ RRR ಸಿನಿಮಾದ ಮೇಲೆ. 

ಯಶ್ಗೆ RRR ದಾಖಲೆ ಬ್ರೇಕ್ ಮಾಡೋದಕ್ಕೆ ಇನ್ನೂ ಮೂರೇ ಹೆಜ್ಜೆ ಇದೆ. ಯಾಕಂದ್ರೆ RRR ಸಿನಿಮಾ ಬಿಡುಗಡೆ ಆಗಿ 28 ದಿನದಲ್ಲಿ 1100 ಕೋಟಿ ಕಲೆಕ್ಷನ್ ಮಾಡಿದೆ. ಕೆಜಿಎಫ್-2 ರಿಲೀಸ್ ಆಗಿ 8 ದಿನದಲ್ಲಿ 800 ಕೋಟಿ ಕಲೆಕ್ಷನ್ ಮಾಡಿ RRR ರೆಕಾರ್ಡ್ ಬ್ರೇಕ್ ಮಾಡೋಕೆ ಮೂರೇ ಹೆಜ್ಜೆ ಅಂತ ರಾಕಿ ಡೈರೆಕ್ಟಾಗೆ ಗುರಿ ಇಟ್ಟಿದ್ದಾರೆ. 

RRR ಸಿನಿಮಾ ಹಿಂದಿಯಲ್ಲಿ ಇದುವರೆಗೆ 260 ಕೋಟಿ ಗಳಿಸಿದೆ. ಆದ್ರೆ ಕೆಜಿಎಫ್- ಚಾಪ್ಟರ್ 2 ಬರೀ 8 ದಿನದಲ್ಲಿ 280 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಯಶ್ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ಆಗಿದ್ದಾರೆ. 
 
Video Top Stories