ಅಂಬಾನಿ ಮದುವೆಯಲ್ಲಿ ರಾಕಿಭಾಯ್ ಹವಾ ನೋಡಿ..! ಜವಾನ್ ಡೈರೆಕ್ಟರ್ ಅಟ್ಲಿ ಜೊತೆ ಸಿನಿಮಾ ಫಿಕ್ಸ್ ಆಯ್ತಾ..?

ಅಂಬಾನಿ ಪುತ್ರವ ವಿವಾಹಕ್ಕೆ ಇದೇ ಮೊದಲ ಬಾರಿಗೆ ಕೆಜಿಎಫ್ ಕಿಂಗ್ ನಮ್ಮ ರಾಕಿಂಗ್ ಸ್ಟಾರ್ ಯಶ್‌ ಹಾಗೂ ರಾಧಿಕ ಕೂಡ ಸಾಕ್ಷಿಯಾದರು. 
 

First Published Jul 16, 2024, 9:06 AM IST | Last Updated Jul 16, 2024, 9:06 AM IST


ಬಾಲಿವುಡ್ ಕಪಲ್ ಜೊತೆ ನಮ್ಮ ಸ್ಯಾಂಡಲ್‌ವುಡ್‌ ಸ್ಟಾರ್  ದಂಪತಿಯನ್ನು ಅದರಲ್ಲೂ ಅಂಬಾನಿ ಮದುವೆಯಲ್ಲಿ ನೋಡಿ ನಮ್ಮ ಕನ್ನಡ ಸಿನೀರಸಿಕರು ವಾವಾ ಎಂದರು. ನೋಡಿ ಅಂಬಾನಿ ಮದುವೆಯಲ್ಲಿ(Ambani son wedding) ನಮ್ಮ ರಾಕಿಭಾಯ್ ಹವಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಯಶ್ (Yash) ಹೊಸ ಹೇರ್ ಸ್ಟೈಲ್ ಅಂಬಾನಿ ಮದುವೆ ಮನೆಗೆ ಎಂಟ್ರಿ ಕೊಡುವಾಗಲೇ ರಿವೀಲ್ ಆಗಿತ್ತು. ಆನಂತರ ಯಶ್  ಮದುವೆಯಲ್ಲಿ ಗಣ್ಯರ ಜೊತೆ ಕುಳಿತು ಮಾತನಾಡುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಈಗ ನ್ಯಾಷನಲ್ ಲೆವೆಲ್‌ನಲ್ಲಿ ಚರ್ಚೆಯಾಗುತ್ತಿರೋ ವಿಚಾರವೆಂದರೆ ಇದೇ ಆಗಿದೆ. ಅಂಬಾನಿ ಮದುವೆಯಲ್ಲಿ ರೌಂಡ್ ಟೇಬಲ್‌ನಲ್ಲಿ ಕುಳಿತ ಯಶ್ ರಾಧಿಕ (Radhika Pandit) ದಂಪತಿ  ವಿಡಿಯೋ ವೈರಲ್ ಆಗುತ್ತಿದ್ದಂತೆ. ಯಶ್  ಪಕ್ಕದಲ್ಲೇ ಕುಳಿತ ಜವಾನ್ ನಿರ್ದೇಶಕ ಅಟ್ಲಿ(Atlee Kumar) ಜೊತೆ ಯಶ್  ಡೀಪ್ ಡಿಸ್ಕಷನ್ನಲ್ಲಿರುವಂತೆ ಕಾಣುತ್ತದೆ. ಶಾರುಖಾನ್ ಅಭಿನಯ ಜವಾನ್ ಸಿನಿಮಾ ನಿರ್ದೇಶಕ  ಅಟ್ಲಿ ನಮ್ಮ ಸೌತ್‌ನವರೆ. ತಮಿಳೂ ನಿರ್ದೇಶಕ  ಅಟ್ಲಿ  Theri (2016), Mersal (2017) and Bigil  ಚಿತ್ರಗಳನ್ನೂ ನಿರ್ದೇಶಿಸಿದ್ದರು. ಇಲ್ಲೀವರೆಗೆ ನಿರ್ದೇಶಿಸಿದ ಎಲ್ಲ ಸಿನಿಮಾಗಳು ಬಿಗ್ ಹಿಟ್ ಚಿತ್ರಗಳೆ. ಇದೀಗ ಯಶ್ ಮ್ತತು ನಿರ್ದೇಶಕ  ಅಟ್ಲಿ ಡೀಪ್ ಡಿಸ್ಕಷನ್‌ಲ್ಲಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟ್ಲೀ ಯಶ್ ಸಿನಿಮಾ ಮಾಡಿದ್ರೆ ಹೇಗಿರಬಹುದು ಕ ಆಲ್ರೆಡಿ ಡಿಸ್ಕಷನ್ ಮಾಡ್ತಿರಬಹುದು, ಅಂತೆಲ್ಲ ಚರ್ಚೆಯಾಗುತ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..

Video Top Stories