Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಮಂಗಳವಾರ, ದಶಮಿ ತಿಥಿ, ವಿಶಾಖ ನಕ್ಷತ್ರ.

ಉತ್ತರಾಯಣವನ್ನು ಬಹಳ ಶ್ರೇಷ್ಠ ಕಾಲ ಎಂದು ಪರಿಗಣಿಸಲಾಗುತ್ತದೆ. ಇದನ್ನು ದೇವತೆಗಳ ಹಗಲು ಎಂದು ಕರೆಯಲಾಗುತ್ತದೆ. ದಕ್ಷಿಣಾಯನವನ್ನು ದೇವತೆಗಳ ರಾತ್ರಿ ಎಂದು ಕರೆಯಲಾಗುತ್ತದೆ. ಮೇಷ ರಾಶಿಯವರಿಗೆ ಬಂಧು-ಮಿತ್ರರ ಸಹಕಾರ ಇರಲಿದೆ. ಕೃಷಿಕರಿಗೆ ಅನುಕೂಲ. ನೀರಿನ ಸೌಕರ್ಯ, ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ದುರ್ಗಾ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಧೈರ್ಯ ಸಾಹಸಗಳ ದಿನ. ವೃತ್ತಿಯಲ್ಲಿ ಅನುಕೂಲ. ದೇಹಕ್ಕೆ ಪೆಟ್ಟಾಗಲಿದೆ. ಸುಬ್ರಹ್ಮಣ್ಯ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ: ಉಚಿತ ಬಸ್ ಪ್ರಯಾಣದಿಂದ ನಷ್ಟಕ್ಕೆ ಜಾರಿತಾ ಸಾರಿಗೆ ಇಲಾಖೆ? ಬಸ್ ದರ ಏರಿಕೆಗೆ ತಯಾರಿ!

Related Video