Asianet Suvarna News Asianet Suvarna News

ಮಾಜಿ ಪತಿಯನ್ನು ಆತ್ಮೀಯವಾಗಿ ಅಪ್ಪಿಕೊಂಡ ಮಲೈಕಾ ಅರೋರ: ನೆಟ್ಟಿಗರು ಏನಂದ್ರು ಗೊತ್ತಾ?

ಬಾಲಿವುಡ್ ನಟಿ ಮಲೈಕಾ ಅರೋರ, ಏರ್‌ಪೋರ್ಟ್‌ನಲ್ಲಿ ಮಾಜಿ ಪತಿಯನ್ನು ತಬ್ಬಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
 

ಮಾಜಿ ಪತಿಯನ್ನು ಮಲೈಕಾ ಅರೋರಾ ತಬ್ಬಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಅಮೆರಿಕದಲ್ಲಿ ಮಗ ಅರ್ಹಾನ್ ಖಾನ್ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಮಗನನ್ನು ಬೀಳ್ಕೊಡಲು  ಅರ್ಬಾಜ್ ಖಾನ್ ಹಾಗೂ ಮಲೈಕ್ ಏರ್‌ ಪೋರ್ಟ್‌ಗೆ ಬಂದಿದ್ದರು. ಈ ವೇಳೆ ವಾಪಸ್ ಬರುವಾಗ ಇಬ್ಬರು ಅಪ್ಪಿಕೊಂಡಿದ್ದಾರೆ. ವಿಡಿಯೋ ನೋಡಿದ ಜನರು, ಗಂಡ-ಹೆಂಡತಿ ಅಂದ್ರೆ ಹೀಗೆ ಇರಬೇಕು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಬಾಲಿವುಡ್‌ ಮಂದಿ ಗಂಡ ಹೆಂಡತಿ, ಬಾಯ್ ಫ್ರೆಂಡ್‌, ಗರ್ಲ್‌ ಫ್ರೆಂಡ್‌ ಸಂಬಂಧ ಮುರಿದು ಹೋದ್ರೂ ಹಾಗೂ ಡಿವರ್ಸ್‌ ಆದ್ರೂ ಎಕ್ಸ್‌ ಜೊತೆ ತಿರುಗಾಡುತ್ತಾರೆ‌ ಇದೆಲ್ಲ ಕಾಮನ್‌ ಆಗಿಬಿಟ್ಟಿದೆ ಎಂದು ಇನ್ನೊಂದಿಷ್ಟು ಜನ ಹೇಳುತ್ತಿದ್ದಾರೆ.

Video Top Stories