ಆ್ಯಂಗ್ರಿ ಯಂಗ್ ಆಫ್ ತೆಲುಗು ಪವನ್ ಕಲ್ಯಾಣ್ ಈಸ್ ಬ್ಯಾಕ್ ..ಉಸ್ತಾದ್ ಭಗತ್ ಸಿಂಗ್ ಟೀಸರ್ ಫಸ್ಟ್ ಕ್ಲಾಸ್!

ಟಾಲಿವುಡ್ ಆ್ಯಂಗ್ರಿ ಯಂಗ್ ಮ್ಯಾನ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್ ಟೀಸರ್ ರಿಲೀಸ್ ಆಗಿದ್ದು, ಫುಲ್ ಟ್ರೆಂಡಾಗುತ್ತಿದೆ.  ಮತ್ತೆ ಖಾಕಿ ತೊಟ್ಟ ಗಬ್ಬರ್ ಸಿಂಗ್ ಭಗತ್‌ಸಿಂಗ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಚುನಾವಣಾ ಸಮಯದಲ್ಲಿ ಈ ಟೀಸರ್ ರಿಲೀಸ್ ಆಗಿದ್ದು ಸಿನಿಮಾ ಪವನ್ ಕಲ್ಯಾಣ್ ಚುನಾವಣಾ ಪ್ರಚಾರಕ್ಕೂ ಸಹಕಾರಿಯಾಗಲಿದೆ.

Share this Video
  • FB
  • Linkdin
  • Whatsapp

ಪವನ್ ಕಲ್ಯಾಣ್‌ ಟಿಡಿಪಿ ಮತ್ತು ಬಿಜೆಪಿ ಜೊತೆಗೂಡಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆಂಧ್ರದ ಹಾಲಿ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ಅಬ್ಬರಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು 21 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಸ್ವತಃ ಪವನ್ ಕಲ್ಯಾಣ್(Pawan Kalyan) ಪೀತಾಪುರಂ ವಿಧಾನಸಭಾ ಕ್ಷೇತ್ರದಿಂದ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಪವನ್ ಕಲ್ಯಾಣ್ ಅತ್ತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿಯೇ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’(Ustad Bhagat Singh) ಟೀಸರ್(Teaser) ಬಿಡುಗಡೆ ಆಗಿದೆ. ಗಬ್ಬರ್ ಸಿಂಗ್ ನಿರ್ದೇಶಕ ಹರೀಶ್ ಶಂಕರ್ ಅವರೇ ಈ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ, ಡಿಎಸ್ಪಿ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಪವನ್ ಗೆ ಕನ್ನಡದ ನಟಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’, ‘ಗಬ್ಬರ್ ಸಿಂಗ್ 2’ ಸಿನಿಮಾಗಳ ಯಶಸ್ಸು ಕಂಡಿದ್ದು, ಅದೇ ಸೂತ್ರವನ್ನಿಟ್ಟುಕೊಂಡು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: Shruti Haasan: ಟಾಕ್ಸಿಕ್‌ನಲ್ಲಿ ಕರೀನಾ ನಟಿಸೋದು ನಿಜ ಎಂದ ಯಶ್ ಟೀಂ..! ಯಶ್ ಸಿನಿಮಾದಲ್ಲಿ ಕಮಲ್ ಹಾಸನ್ ಪುತ್ರಿ ..!

Related Video