Shruti Haasan: ಟಾಕ್ಸಿಕ್‌ನಲ್ಲಿ ಕರೀನಾ ನಟಿಸೋದು ನಿಜ ಎಂದ ಯಶ್ ಟೀಂ..! ಯಶ್ ಸಿನಿಮಾದಲ್ಲಿ ಕಮಲ್ ಹಾಸನ್ ಪುತ್ರಿ ..!

ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿ. ಯಶ್ ಈಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ರಾಕಿ ನಿಂತ್ರು ಕುಂತ್ರು ಮನಸ್ಸಿನಲ್ಲಿ ಓಡುತ್ತಿರೋದು ಟಾಕ್ಸಿಕ್ ಸಿನಿಮಾ. ಈ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಬಗ್ಗೆ ನಿನ್ನೆಯಷ್ಟೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿತ್ತು. ಟಾಕ್ಸಿಕ್‌ನಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅಂತ ಸುದ್ದಿ ಹಬ್ಬಿದೆ.

Share this Video
  • FB
  • Linkdin
  • Whatsapp

ಬಾಲಿವುಡ್ ಬ್ಯೂಟಿ ಕರೀನಾ ಕಪೂರ್(Kareena Kapoor Khan) ನಾನು ಸೌತ್‌ನ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಅಂತ ಹೇಳಿದ್ರು. ಆದ್ರೆ ಅದು ಟಾಕ್ಸಿಕ್ ಸಿನಿಮಾ(Toxic movie) ಅಂತ ಎಲ್ಲೂ ಹೆಸರು ಹೇಳಿರಲಿಲ್ಲ. ಭಟ್ ಈಗ ಬೇಬೋ ಯಶ್(Yash) ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂತ ರಾಕಿಯ ಆಪ್ತ ಸ್ನೇಹಿತರೇ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಕನ್ಫರ್ಮ್ ಮಾಡಿದ್ದಾರೆ. ಇದರ ಜೊತೆಗೆ ಟಾಕ್ಸಿಕ್‌ಗೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಕೂಡ ಎಂಟ್ರಿ ಕೊಟ್ಟಿದ್ದಾರೆ.ಯಶ್ ಸಿನಿಮಾದಲ್ಲಿ ಹೀರೋಯಿನ್ ಆಗೋ ಆಸೆ ಸ್ಟಾರ್ ನಟಿಯರಲ್ಲಿದೆ. ಆದ್ರೆ ಆ ಚಾನ್ಸ್ ಎಲ್ಲರಿಗೂ ಸಿಗಬೇಕಲ್ವಾ. ಭಟ್ ಈ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಸೌತ್ ಸುಂದ್ರಿ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್(Shruti Haasan). ಪ್ರಭಾಸ್ ಜೊತೆ ಸಲಾರ್‌ನಲ್ಲಿ ಮಂಚಿದ್ದ ಶೃತಿ ಹಾಸನ್ ಈಗ ಯಶ್ರ ಟಾಕ್ಸಿಕ್‌ಗೆ ಕಿಕ್ ಕೊಡೋಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನೂ ಯಶ್ರ ಆಪ್ತ ಬಳಗವೇ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಹೇಳಿದ್ರು. ಟಾಕ್ಸಿಕ್‌ಗೆ ಬೇಬೋ ಕರೀನಾ ಕಪೂರ್ ಹಾಗು ಶೃತಿ ಹಾಸನ್ ಎಂಟ್ರಿ ಆಗಿದೆ. ಇದರ ಜೊತೆಗೆ ಮತ್ತೊಬ್ಬ ಬಿಗ್ ಸ್ಟಾರ್ ಇರಲಿದ್ದಾರೆ. ಆದ್ರೆ ಈ ಹೆಸರನ್ನ ಅಫೀಷಿಯೆಲ್ ಆಗೇ ಚಿತ್ರತಂಡ ಅನೌನ್ಸ್ ಮಾಡುತ್ತಂತೆ.

ಇದನ್ನೂ ವೀಕ್ಷಿಸಿ: ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಪ್ಪು ಮೆರಗು! ಬೊಂಬೆ ಹೇಳುತೈತೆ ಹಾಡಿನಿಂದ RCB ಪ್ರೋಗ್ರಾಂ ಶುರು

Related Video