ಬಾಲಿವುಡ್‌ಗೆ ಸೌತ್ ಚಿತ್ರ ಸಡ್ಡು: ಅಕ್ಷಯ್ ಕುಮಾರ್ ಮುಂದೆ ಕಮಾಲ್ ಮಾಡಿದ ಕಮಲ್ ಹಾಸನ್

ವಿಶ್ವದಾದ್ಯಂತ ಸೌತ್ ಸಿನಿಮಾಗಳ ಕಾರುಬಾರು ಜೋರಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಕ್ಷಿಣದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದು ಬಾಹುಬಲಿ, ಕೆಜಿಎಫ್ , ಪುಷ್ಪ ಸಿನಿಮಾದ ನಂತ್ರ ಮತ್ತೊಮ್ಮೆ  ಬಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ ಸೌತ್ ಚಿತ್ರ. 

Share this Video
  • FB
  • Linkdin
  • Whatsapp

ವಿಶ್ವದಾದ್ಯಂತ ಸೌತ್ ಸಿನಿಮಾಗಳ ಕಾರುಬಾರು ಜೋರಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಕ್ಷಿಣದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದು ಬಾಹುಬಲಿ, ಕೆಜಿಎಫ್ , ಪುಷ್ಪ ಸಿನಿಮಾದ ನಂತ್ರ ಮತ್ತೊಮ್ಮೆ ಬಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ ಸೌತ್ ಚಿತ್ರ.

Add Asianetnews Kannada as a Preferred SourcegooglePreferred

777 Charlie ಚಾರ್ಲಿ -ಧರ್ಮನ ಕಥೆ ಕಮಡು ಕಣ್ಣೀರಾಕಿದ ದೆಹಲಿ ಜನರು

ಬಾಲಿವುಡ್ ಗೆ ಸೌತ್ ನ ವಿಕ್ರಮ್ ಚಿತ್ರ ಸೆಡ್ಡು ಹೊಡೆದು ನಿಂತಿದೆ. ವಿಕ್ರಮ್ ಸಿನಿಮಾ ಎದುರಿಗೆ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾವನ್ನ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿಸಿದೆ. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಗಳಿಕೆಯಲ್ಲಿ ವಿಕ್ರಮ್ ಗಿಂತ ಹಿಂದಿದೆ. ಹಾಗಾಗಿ, ಬಿಟೌನ್ ಮತ್ತೊಮ್ಮೆ ಆತಂಕ ಎದುರಿಸಬೇಕಾಗಿದೆ.

ಗಲ್ಲಿ ಗಲ್ಲಿಯಲ್ಲಿ ರಾ ರಾ ರಕ್ಕಮ್ಮ, ಮಕ್ಕಳಲ್ಲಿಯೂ ಹೆಚ್ಚಾಗಿದೆ ಕ್ರೇಜ್...!

ಬಹು ನಿರೀಕ್ಷಿತ ವಿಕ್ರಮ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ವಿಶ್ವಾದ್ಯಂತ 58ಕೋಟಿ ಗಳಿಕೆ ಮಾಡಿದೆ. ನಾಲ್ಕೈದು ದಿನಗಳಲ್ಲಿ ವಿಕ್ರಮ್ ಚಿತ್ರ 100 ಕೋಟಿ ಕ್ಲಬ್ ಸೇರಲಿದೆ ಅನ್ನೋದು ಸಿನಿಮಾ ಪಂಡಿತರ ಮಾತು,.ವಿಕ್ರಮ್ ಮೂರು ಭಾಷೆಯಲ್ಲಿ ತೆರೆಗೆ ಬಂದಿದ್ದು ತಮಿಳಿನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇನ್ನು ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಮೊದಲ ದಿನ 10 ಕೋಟಿ 70 ಲಕ್ಷ ಕಲೆಕ್ಷನ್ ಮಾಡಿದೆ...ಅದ್ಯಾಕೋ ಅಕ್ಷಯ್ ಸಿನಿಮಾಗೆ ಪ್ರೇಕ್ಷಕರು ನೀರಸ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

Related Video