777 Charlie ಚಾರ್ಲಿ-ಧರ್ಮನ ಕಥೆ ಕಂಡು ಕಣ್ಣೀರಾಕಿದ ದೆಹಲಿ ಜನರು

777 ಚಾರ್ಲಿ ಸದ್ಯ ಭಾರತೀಯ ಸಿನಿಮಾರಂಗದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ. ಚಾರ್ಲಿ ಸಿನಿಮಾಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ದು, ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ. 

Share this Video
  • FB
  • Linkdin
  • Whatsapp

777 ಚಾರ್ಲಿ (777 Charlie) ಸದ್ಯ ಭಾರತೀಯ ಸಿನಿಮಾರಂಗದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ. ಚಾರ್ಲಿ ಸಿನಿಮಾಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ದು, ಮನುಷ್ಯ ಮತ್ತು ನಾಯಿಯ (Dog) ಭಾವನಾತ್ಮಕ ಸಂಬಂಧವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ. ಆದ್ರೆ ಫಿಕ್ಸ್ ಆಗಿರೋ ರಿಲೀಸ್ ಡೇಟ್ ಗೂ ಮುನ್ನವೇ ಹಲವು ಸಿಟಿಯಲ್ಲಿ 777ಚಾರ್ಲಿ ಸಿನಿಮಾ ಪ್ರಿಮಿಯರ್ ಶೋ ಆಗಿದೆ. ದೆಹಲಿಯ ಸಿನಿಮಾ ಪ್ರೇಮಿಗಳು ಚಾರ್ಲಿ ಕಥೆ ಕಂಡು ಎಮೋಷನಲ್ ಆಗಿದ್ದಾರೆ.

777 ಚಾರ್ಲಿ ಸಿನಿಮಾದ ಪ್ರಚಾರವನ್ನ ದೊಡ್ಡಮಟ್ಟದಲ್ಲಿ ಮಾಡ್ತಿದೆ ಸಿನಿಮಾ ಟೀಂ .ಈಗಾಗಲೇ ಥಿಯೇಟರ್ ಮುಂದೆ ದೊಡ್ಡ ಕಟೌಟ್ಗಳು ರಾರಾಜಿಸುತ್ತಿದ್ದು ರಕ್ಷಿತ್ ಗೆ ಸಿನಿಮಾದಲ್ಲಿ ಸಾಥ್ ಕೊಟ್ಟಿರೋ ಶ್ವಾನ ಚಾರ್ಲಿಯ ಕಟೌಟ್ ಥಿಯೇಟರ್ ಮುಂದೆ ನಿಲ್ಲಿಸಲಾಗುತ್ತಿದೆ. ಥಿಯೇಟರ್ ಮುಂದೆ ಸಿನಿಮಾದ ನಾಯಕ -ನಾಯಕಿಯ ಕಟೌಟ್ ನಿಲ್ಲಿಸೋದು ಕಾಮನ್, ಆದ್ರೆ ಚೈನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಚಾರ್ಲಿ ಕಟೌಟ್ ನಿಲ್ಲಿಸಲಾಗಿದೆ. ಸದ್ಯ ಕುಳಿತಿರುವ ಚಾರ್ಲಿ ಕಟೌಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೆಹಲಿಯಲ್ಲಿ ನಡೆದಿದ 777 ಚಾರ್ಲಿ ಪ್ರೀಮಿಯರ್‌ಶೋ ನಲ್ಲಿ ಲೋಕಸಭಾ ಸದಸ್ಯೆ, ಪ್ರಾಣಿ ಪರ ಹೋರಾಟಗಾರ್ತಿ ಮನೇಕಾ ಗಾಂಧಿ ಚಿತ್ರ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

Related Video