Asianet Suvarna News Asianet Suvarna News

Sreeleela in Pushpa 2: ಪುಷ್ಪ2 ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸುತ್ತಾರಾ ಶ್ರೀಲೀಲಾ ?

ಪುಷ್ಪ ಸಿನಿಮಾದಲ್ಲಿ ಊ ಅಂಟಾವ ಹಾಡು ಎಷ್ಟು ಫೇಮಸ್ಸಾಯ್ತು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನಾಯಕಿ ಸಮಂತಾ 5 ಕೋಟಿ ಸಂಭಾವನೆ ಪಡೆದು ಅಲ್ಲೂ ಅರ್ಜುನ್ ಜೊತೆ ಈ ಹಾಡಿಗೆ ಸ್ಟೆಪ್‌ ಹಾಕಿದ್ದರು. ಹಾಡು ಕೂಡ ವಿಶ್ವದಲ್ಲೆ ಜನಪ್ರಿಯ ನಂ.1 ಹಾಡೆಂಬ ಖ್ಯಾತಿಗೂ ಒಳಗಾಯಿತು. ಇದೀಗ ಸಮಂತಾ ಹಾದಿಯಲ್ಲೇ ಹೊರಟಿದ್ದಾರೆ ಶ್ರೀಲೀಲಾ.

ಸದ್ಯ ಇದೀಗ ಸೌತ್ ಸೆನ್ಸೇಷನ್ ನಟಿ ಅಂದ್ರೆ ಶ್ರೀಲೀಲಾ. ಟಾಲಿವುಡ್(Tollywood) ನಂ1 ನಟಿಯಾಗಿ ಖ್ಯಾತಿಗಳಿಸಿರೋ ಶ್ರೀಲೀಲಾ(Sreeleela) ಡಾನ್ಸ್‌ಗೆ ಫಿದಾ ಆಗದೆ ಇರೋ ಪ್ರೇಕ್ಷಕರೇ ಇಲ್ಲ. ಮಹೇಶ್ ಬಾಬುನೆ ಶ್ರೀಲೀಲಾ ಡಾನ್ಸ್‌ಗೆ ಫಿದಾ ಆಗಿದ್ದರು. ಗುಟಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಡಾನ್ಸ್ ಆ ರೇಂಜಿಗಿತ್ತು. ಅಂಥದ್ದು ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪ 2ನಲ್ಲಿ(Pushpa 2 movie) ಇದೀಗ ಶ್ರೀಲೀಲಾ ಸೊಂಟ ಬಳುಕಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಪುಷ್ಪಾ 2ನ ಒಂದೇ ಒಂದು ಸ್ಪೆಷಲ್ ಸಾಂಗಿಗೆ ಶ್ರೀಲೀಲಾ 2 ಕೋಟಿ ಸಂಭಾವನೆ ಕೇಳಿದ್ದಾರೆನ್ನಲಾಗಿದೆ. ಅಂದಹಾಗೆ ಸುಕುಮಾರ್ ನಿರ್ದೇಶನದ ಪುಷ್ಪಾ2 ಮೇಲೆ ಬಾರೀ ನಿರೀಕ್ಷೆ ಇದೆ. ಅಲ್ಲೂ ಅರ್ಜುನ್ ರಶ್ಮಿಕಾ ನಟನೆಯ ಈ ಸಿನಿಮಾಗೆ ಇದೀಗ ಶ್ರೀಲೀಲಾ ಐಟಂ ಸಾಂಗ್ ಮಾಡಿದ್ರೆ ಡಬಲ್ ಧಮಾಖದಂತೆಯೆ ಆಗುತ್ತದೆ. 

ಇದನ್ನೂ ವೀಕ್ಷಿಸಿ:  'ಬಿಲ್ಲ ರಂಗ ಬಾಷಾ' Big ಅಪ್‌ಡೇಟ್‌! ಯಾವಾಗಿನಿಂದ ಚಿತ್ರೀಕರಣ ಆರಂಭ ಗೊತ್ತಾ?