ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ಕಾಲಿವುಡ್ ಸ್ಟಾರ್ ವಿಶಾಲ್..?

ಪುನೀತ್ ಹೆಸರಿನಲ್ಲಿ ಗಿಡಗಳನ್ನು ನೆಟ್ಟು  ವಿಶಾಲ್ ಕನ್ನಡಿಗರ ಮನಸ್ಸನ್ನೂ ಗೆದ್ದಿದ್ದಾರೆ. ಆದ್ರೆ ಈ ಮಧ್ಯೆ ವಿಶಾಲ್ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಂತಿದೆ. ಯಾಕಂದ್ರೆ ವಿಶಾಲ್ ಮಾಡಿರೋ ಇನ್ಶ್ಯಾ ಅಲ್ಲಾಹ್ ಅನ್ನೋ ಕಮೆಂಟ್ ಈಗ ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ಅನ್ನೋ ಅನುಮಾನ ಹುಟ್ಟುಹಾಕಿದೆ.

Share this Video
  • FB
  • Linkdin
  • Whatsapp

ಕಾಲಿವುಡ್ (Kollywood) ಸ್ಟಾರ್ ವಿಶಾಲ್ (Vishal) ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಪ್ರೀತಿಯ ನಟರಾಗಿ ಉಳಿದಿದ್ದಾರೆ. ಕನ್ನಡದ ಹೆಮ್ಮೆಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದು ಓದಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೇ, ಪುನೀತ್ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ವಿಶಾಲ್ ಕನ್ನಡಿಗರ ಮನಸ್ಸನ್ನೂ ಗೆದ್ದಿದ್ದಾರೆ. ಆದ್ರೆ ಈ ಮಧ್ಯೆ ವಿಶಾಲ್ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಂತಿದೆ. ಯಾಕಂದ್ರೆ ವಿಶಾಲ್ ಮಾಡಿರೋ ಇನ್ಶ್ಯಾ ಅಲ್ಲಾಹ್ ಅನ್ನೋ ಕಮೆಂಟ್ ಈಗ ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ಅನ್ನೋ ಅನುಮಾನ ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲಿಯಾ - ರಣಬೀರ್ ಕಪೂರ್ ಮದುವೆಯಲ್ಲಿ ಮಿಂಚಿದ ಬಿಟೌನ್ ತಾರೆಯರು.!

ವಿಶಾಲ್ ಸಹೋದರಿ (Sister) ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ವಿಶಾಲ್, ‘ನಾನು ಮತ್ತೆ ಅಂಕಲ್ ಆಗಿರುವೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ. ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ.? ವಿಶಾಲ್ ಧರ್ಮ ಯಾವ್ದು ಅಂತ ನೆಟ್ಟಿಗರು ಹಲವು ಪ್ರಶ್ನೆಗಳನ್ನ ವಿಶಾಲ್ ಮುಂದಿಡುತ್ತಿದ್ದಾರೆ. ಆದ್ರೆ ಇದಕ್ಕೆ ವಿಶಾಲ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

Related Video