ಅಲಿಯಾ- ರಣಬೀರ್ ಕಪೂರ್ ಮದುವೆಯಲ್ಲಿ ಮಿಂಚಿದ ಬಿಟೌನ್‌ ತಾರೆಯರು.!

ಆಲಿಯಾ ಭಟ್ ರಣಬೀರ್ ಮದುವೆ ವೀಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಈ ಜೋಡಿ ಪಂಜಾಬಿ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪಂಜಾಬಿನ ರಾಜ ರಾಣಿಯಂತೆ ಸಿದ್ಧರಾಗಿದ್ದ ರಣಬೀರ್, ಆಲಿಯಾ ಸರಳ ಸುಂದರವಾಗಿ ವಿವಾಹ ಆಗಿದ್ದಾರೆ. 

Share this Video
  • FB
  • Linkdin
  • Whatsapp

ಆಲಿಯಾ ಭಟ್ ರಣಬೀರ್ (Alia Bhatt Ranbir Kapoor) ಮದುವೆ ವೀಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಈ ಜೋಡಿ ಪಂಜಾಬಿ (Punjab) ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪಂಜಾಬಿನ ರಾಜ ರಾಣಿಯಂತೆ ಸಿದ್ಧರಾಗಿದ್ದ ರಣಬೀರ್, ಆಲಿಯಾ ಸರಳ ಸುಂದರವಾಗಿ ವಿವಾಹ ಆಗಿದ್ದಾರೆ. ಈ ಜೋಡಿ ಮದುವೆ ಆದ ಬಳಿಕ ಮಾಧ್ಯಮಗಳಿಗೆ ಎದುರಾಗಿತ್ತು. ರಣಬಿರ್ ಆಲಿಯಾ ಮದುವೆ ಮಂಟಪದಿಂದ ಹೊರ ಬರುತ್ತಿದ್ದಂತೆ ಕ್ಯಾಮೆರಾಗಳು ಪಟ್ ಪಟ್ ಪಟ್ ಅಂತ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ರಣಬೀರ್ ಕಪೂರ್ ಆಲಿಯಾಳನ್ನ ಎತ್ತಿಕೊಂಡು ತನ್ನ ಮನೆಯೊಳಗೆ ನಡೆದ್ರು.

ಕೆಜಿಎಫ್ -2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್, ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!

ಕಪೂರ್ ಕುಟುಂಬದ ಕುಡಿಯ ಮದುವೆ ಅಂದ್ರೆ ಸುಮ್ಮನೇನಾ.? ಅದೊಂತರಾ ಆಸ್ಥಾನದ ರಾಜ ರಾಣಿಯ ಮದುವೆ ಇದ್ದಂತೆ. ಹಾಡು ಹರಟೆ ನೃತ್ಯ ಎಲ್ಲವೂ ಇರುತ್ತೆ. ರಣಬೀರ್ ಆಲಿಯಾ ಮದುವೆಯಲ್ಲಿ ಈ ಜೋಡಿ ಭರ್ಜರಿ ಡಾನ್ಸ್ ಮಾಡಿದೆ. ಅಷ್ಟೆ ಅಲ್ಲ ಮದುವೆಗೆ ಬಂದಿದ್ದ ಗೆಸ್ಟ್ಗಳು ಕೂಡ ಕುಣಿಸು ಕುಪ್ಪಳಿಸಿದ್ದಾರೆ. 

ರಣಬೀರ್ ಆಲಿಯಾ ಮದುವೆಗೆ ಕೆಲವೇ ಕೆಲವರನ್ನ ಮಾತ್ರ ಆಹ್ವಾನಿಸಲಾಗಿತ್ತು. ಹೀಗಾಗಿ ಬಾಲಿವುಡ್‌ನ ಕೆಲವೇ ಕೆಲವು ತಾರೆಯರು ಮಾತ್ರ ಮದುವೆಗೆ ಹಾಜರಾಗಿದ್ರು. ಸೈಫ್ ಅಲಿ ಖಾನ್ ಕರೀನಾ ಕಪೂರ್, ಕರೀಶ್ಮಾ ಕಪೂರ್, ಕರಣ್ ಜೋಹರ್ ಸೇರಿದಂತೆ ಕೆಲ ಸ್ಟಾರ್ಗಳು ಭಾಗಿ ಆಗಿದ್ದು, ಮದುವೆಯಲ್ಲಿ ಮಿರ ಮಿರ ಅಂತ ಮಿಂಚಿದ್ರು. ಸಧ್ಯ ಮುದವೆ ಮುಗಿಸಿರೋ ಆಲಿಯಾ ರಣಬೀರ್ ಹನಿಮೂನ್ ಪ್ಲಾನ್ ಮಾಡುತ್ತಿದ್ದಾರೆ. 

Related Video