Asianet Suvarna News Asianet Suvarna News

ಅಭಿಮಾನಿಗಳನ್ನು ಭೇಟಿಯಾದ ರಾಕಿಂಗ್ ಸ್ಟಾರ್: ಯಶ್ ನೋಡಲು ಮುಗಿ ಬಿದ್ದ ಫ್ಯಾನ್ಸ್

ಬೆಂಗಳೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳನ್ನು ಭೇಟಿಯಾಗಿದ್ದು, ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳನ್ನು  ಭೇಟಿಯಾಗಿದ್ದಾರೆ. ರಾಕಿಭಾಯಿಯನ್ನು ನೋಡಲು ರಾಜ್ಯದ ಮೂಲೆಮೂಲೆಗಳಿಂದ  ಸಾವಿರಾರು ಫ್ಯಾನ್ಸ್‌ ಆಗಮಿಸಿದ್ದರು.ಹುಟ್ಟುಹಬ್ಬದಲ್ಲಿ ಯಶ್ ಫ್ಯಾನ್ಸ್'ನ್ನು ಭೇಟಿ ಆಗಿರಲಿಲ್ಲ. ಆದ್ದರಿಂದ ಇಂದು ಯಶ್‌ ಭೇಟಿ ಮಾಡಲು ಫ್ಯಾನ್ಸ್ ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್ ಮನೆ ಮುಂದೆ ಅಭಿಮಾನಿಗಳ ಸಾಲು ಕಿಲೋಮೀಟರ್ ಉದ್ದ ಇತ್ತು. ಯಶ್ ಜತೆ ಫೋಟೋ ತೆಗಿಸಿಕೊಂಡು ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇನ್ನು ಯಶ್ ಮುಂದಿನ ಸಿನಿಮಾ ಆದಷ್ಟು ಬೇಗ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
 

Video Top Stories