ನ್ಯಾಶನಲ್ ಕ್ರಶ್ ರಶ್ಮಿಕಾಗೆ ಮತ್ತೆ ಡೀಪ್ ಫೇಕ್ ಕಾಟ! ಬಿಕಿನಿ ತೊಟ್ಟು ಜಲಪಾತದ ಪಕ್ಕದಲ್ಲಿ ನಿಂತ ನಟಿ..!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಬಿಕಿನಿ ತೊಟ್ಟು ಜಲಪಾತದ ಪಕ್ಕದಲ್ಲಿ ನಿಂತು ರಶ್ಮಿಕಾ ಪೋಸ್ ಕೊಟ್ಟಿರೋದು. 

Share this Video
  • FB
  • Linkdin
  • Whatsapp

ಕೆಂಬಣ್ಣದ ಬಿಕಿನಿಯಲ್ಲಿ(Bikini), ಜಲಪಾತದ(Waterfall) ಪಕ್ಕದಲ್ಲಿ ಥೇಟ್ ರಶ್ಮಿಕಾ ಮಂದಣ್ಣ(Rashmika Mandanna) ಮುಖಚಹರೆ ಇರೋ ಈ ವಿಡಿಯೋ. ರಶ್ಮಿಕಾ ಲೈಫ್‌ನಲ್ಲಿ ಕಾಣಸಿಕ್ಕ ಡೀಪ್ ಫೇಕ್‌ನ(Deepfake video) ಮತ್ತೊಂದು ಅಧ್ಯಾಯ. ರಶ್ಮಿಕಾರ ಮುಖವನ್ನ ಮಾರ್ಫಿಂಗ್(Morphing) ಮಾಡಿದ ನಕಲಿ ವಿಡಿಯೋ ಇದು. ಈ ವಿಡಿಯೋದ ಮೂಲ ಯಾವ್ದು ಅಂತಾ ಹುಡುಕಿದಾಗ ಸಿಕ್ಕಿದ್ದು ಕೊಲಂಬಿಯಾದ ಲಿಂಕ್. ಸ್ಯಾಂಟ್ಯಾಂಡರ್ ಮೂಲದ ಮಾಡೆಲ್ ಡೇನಿಯಲಾ ವಿಲ್ಲಾರ್ರಿಯಲ್ ವಿಡಿಯೋಗೆ ರಶ್ಮಿಕಾ ಮುಖ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ರಶ್ಮಿಕಾರ ಡೀಪ್ ಫೇಕ್ನ ಅಸಲಿ ವೀಡಿಯೋ ಇದು. ರಶ್ಮಿಕಾಗೆ ಡೀಪ್ ಫೇಕ್ ಕಾಟ ಇದೇ ಮೊದಲಲ್ಲ. ಕಳೆದ ಬಾರಿಯೂ ರಶ್ಮಿಕಾ ಮಂದಣ್ಣ ‘ಡೀಪ್’ ದುನಿಯಾದ ಕಳ್ಳಾಟಕ್ಕೆ ತುತ್ತಾಗಿದ್ರು. ರಶ್ಮಿಕಾಗೆ ಡೀಪ್ ಫೇಕ್ ಮಾಡಿದ ಆರೋಪದಲ್ಲಿ 23 ವರ್ಷದ ನವೀನ್ ಎಂಬಾತನನ್ನ ಪೊಲೀಸ್ರು ಬಂಧಿಸಿದ್ದಾಗಿದೆ. ಇದೀಗ ಮತ್ತೆ ಅಂಥಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಕಲ್ಕಿ ಭೈರವನ ಬುಜ್ಜಿ ಮೇಲೆ ಯಶ್‌ ಸವಾರಿ? ಪ್ರಭಾಸ್ ಬುಜ್ಜಿ ಬೆಂಗಳೂರಿಗೂ ಬರ್ತಿದೆ ನೋಡಿ!

Related Video