ಕಲ್ಕಿ ಭೈರವನ ಬುಜ್ಜಿ ಮೇಲೆ ಯಶ್‌ ಸವಾರಿ? ಪ್ರಭಾಸ್ ಬುಜ್ಜಿ ಬೆಂಗಳೂರಿಗೂ ಬರ್ತಿದೆ ನೋಡಿ!

ಬೆಂಗಳೂರಿಗೂ ಭೈರವನ ಬುಜ್ಜಿ ವಾಹನ ಬರಲಿದ್ದು, ಪ್ರಭಾಸ್ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಸಹ ಈ ಬುಜ್ಜಿ ಮೇಲೆ ಸವಾರಿ ಮಾಡಲಿದ್ದಾರೆ ಎನ್ನಲಾಗಿದೆ.
 

First Published May 29, 2024, 10:47 AM IST | Last Updated May 29, 2024, 10:48 AM IST

ಜೂನ್ 27 ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಕಲ್ಕಿ 2898 AD' ಚಿತ್ರ(Kalki) ತೆರೆಗೆ ಬರಲಿದೆ. ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವ ಕಾರಣ ಕಲ್ಕಿ ತಂಡ ಸತತ ಪ್ರಚಾರದಲ್ಲಿ ಪಾಲ್ಗೊಳ್ಳಲಿದೆ. ಈಗಾಗಲೇ ರಾಮೋಜಿ ಫಿಲಂ ಸಿಟಿಯಲ್ಲಿ ಭೈರವ ಪ್ರಭಾಸ್ ಬುಜ್ಜಿ(Bujji) ಈವೆಂಟ್ ಮಾಡಿ ಸರ್ಪ್ರೈಸ್ ನೀಡಿತ್ತು. ಚಿತ್ರದಲ್ಲಿ ಬುಜ್ಜಿ ಎನ್ನುವ ಸಣ್ಣ ರೋಬೊ ಕೂಡ ನಾಯಕ ಭೈರವನ(Bhairava) ಜೊತೆ ಇರುತ್ತದೆ. ಅದಕ್ಕೆ ಒಂದು ಕಾರು ಮಾದರಿಯ ವಾಹನ ಇರಲಿದೆ. ಆ ಬುಜ್ಜಿ ಕಾರ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿತು. ಬುಜ್ಜಿ ಪಾತ್ರಕ್ಕೆ ಕೀರ್ತಿ ಸುರೇಶ್ ವಾಯ್ಸ್ ನೀಡಿದ್ದಾರೆ. ಇನ್ನು ಅದ್ಧೂರಿ ಈವೆಂಟ್‌ನಲ್ಲಿ ನಟ ಪ್ರಭಾಸ್ ಆ ವಾಹನ ಏರಿ ಹಂಗಾಮಾ ಮಾಡಿದ್ದರು. 3 ಚಕ್ರಗಳ ಆ ವಾಹನದ ಡಿಸೈನ್, ಬೆಲೆ, ಲುಕ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ಈ ಕಾರನ್ನು ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರಿಗೂ (Bengaluru)ಈ ವಾಹನ ಬರಲಿದ್ದು ಪ್ರಭಾಸ್ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಸಹ ಈ ಬುಜ್ಜಿ ಮೇಲೆ ಸವಾರಿ ಮಾಡಲಿದ್ದಾರೆ ಎನ್ನಲಾಗಿದೆ. ಟ ಪ್ರಭಾಸ್ ಹಾಗೂ ಯಶ್ ನಡುವೆ ಉತ್ತಮ ಒಡನಾಟವಿದೆ. ಹೊಂಬಾಳೆ ಸಂಸ್ಥೆ 'ಕಲ್ಕಿ 2898 AD' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದರೂ ಅಚ್ಚರಿ ಪಡಬೇಕಿಲ್ಲ.ಈ ಮೂಲಕ ಪರಸ್ಪರ ಗೆಳೆಯರ ಪ್ರಚಾರಕ್ಕೆ ಸಾಥ್ ನೀಡುತ್ತಾರೆನ್ನಲಾಗಿದೆ.

ಇದನ್ನೂ ವೀಕ್ಷಿಸಿ:  Devara movie: 'ದೇವರ'ದಲ್ಲಿ ಎನ್‌ಟಿಆರ್ ಮೆಗಾಫೈಟ್.. 10 ಸಾವಿರ ಮಂದಿ ಜೊತೆ ಹೊಡೆದಾಟ..!

Video Top Stories