Pushpa 2: ಪುಷ್ಪ-2 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತಾ..? ಟೀಂ ಹರಿಬಿಟ್ಟ ವಿಡಿಯೋದಲ್ಲಿ ಏನಿದೆ..?

ಪುಷ್ಪ 2 ಸಿನಿಮಾ ಬಿಡುಗಡೆ ಡೇಟ್ ಪೋಸ್ಟ್ ಪೋನ್ ಆಗುತ್ತಿದೆ ಹೇಳಲಾಗುತ್ತಿದೆ. ಈ ಬಗ್ಗೆ ಈಗ ಪುಷ್ಪ2 ಟೀಂ ಸ್ಪಷ್ಟನೆ ಕೊಟ್ಟಿದೆ. 
 

Share this Video
  • FB
  • Linkdin
  • Whatsapp

2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪುಷ್ಪ 2’(Pushpa 2 Movie) ಮೈನ್ ಸ್ಟ್ರೀಮ್‌ನಲ್ಲಿದೆ. ಅಲ್ಲು ಅರ್ಜುನ್ (Allu Arjun) ಪುಷ್ಪರಾಜ್ ಆಗಿ ಏನ್ ಮಾಡ್ತಾರೆ ಅನ್ನೋ ಬೆಟ್ಟದಂತಾ ಕುತೂಹಲ ಪುಷ್ಪ2 ಹುಟ್ಟುಹಾಕಿದೆ. ಈ ಸಿನಿಮಾ ಬಿಡುಗಡೆ ದಿನಾಂಕ ಇದೇ ಆಗಸ್ಟ್ 15 ಅಂತ ಫಿಕ್ಸ್ ಆಗಿದೆ. ಆದ್ರೆ ಇತ್ತೀಚೆಗೆ ಪುಷ್ಪ2 ಬಿಡುಗಡೆ ದಿನಾಂಕದ ಬಗ್ಗೆ ಒಂದು ಗಾಳಿಸುದ್ದಿ ಹಬ್ಬಿದೆ. ಕಾರಣಾಂತರಗಳಿಂದ ‘ಪುಷ್ಪ 2’ ಬಿಡುಗಡೆ ಡೇಟ್ ಪೋಸ್ಟ್ ಪೋನ್ ಆಗುತ್ತಿದೆ ಹೇಳಲಾಗುತ್ತಿದೆ. ಈ ಬಗ್ಗೆ ಈಗ ಪುಷ್ಪ2 ಟೀಂ ಸ್ಪಷ್ಟನೆ ಕೊಟ್ಟಿದೆ. ಪುಷ್ಪ2 ಶೂಟಿಂಗ್ ತಡ ಆಗ್ತಿರೋದು ನಿಜ. ಆದ್ರೆ ನಿರ್ದೇಶಕ ಸುಕುಮಾರ್ ಅನೌನ್ಸ್ ಮಾಡಿದ ಡೇಟ್ಗೆ ಸಿನಿಮಾ ರಿಲೀಸ್ (Release) ಮಾಡೋಕೆ ಪ್ಲ್ಯಾನ್ ಮಾಡಿರೋದು ನಿಜ. ಆದ್ರೆ ಆಗಸ್ಟ್ 15ಕ್ಕೆ ಪುಷ್ಪ2 ರಿಲೀಸ್ ಆಗೋ ಜಾಗದಲ್ಲಿ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ತೆರೆ ಕಾಣುತ್ತೆ ಅಂತ ಟಾಕ್ ಆಗಿತ್ತು. ಆದ್ರೆ ಅದು ನಿಜವಲ್ಲ, ಪುಷ್ಪ-2 ರಿಲೀಸ್ ಡೇಟ್ ಮುಂದಕ್ಕೆ ಹೋಗಿಲ್ಲ. ‘ಇಲ್ಲಿ ಎಲ್ಲವೂ ನಡೆಯೋದು ಪುಷ್ಪ ರೂಲ್ ಮೇಲೆ’ 15 ಆಗಸ್ಟ್ 2024 ಪುಷ್ಪ ದಿ ರೂಲ್ ರಿಲೀಸ್ ಆಗುತ್ತೆ ಅನ್ನೋ ಸಂದೇಶ ಇರೋ ಅಲ್ಲು ಅರ್ಜುನ್ರ ವೀಡಿಯೋ ರಿಲೀಸ್ ಮಾಡಿ ಬಿಡುಗಡೆ ದಿನಾಂಕ ಮುಂದೂಡಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಪುಷ್ಪ2 ವರ್ಕ್ ಮುಗಿಸಿಕೊಳ್ಳಲು ‘ಪುಷ್ಪ 2’ ತಂಡಕ್ಕೆ 6 ತಿಂಗಳಿಗೂ ಹೆಚ್ಚು ಟೈಮ್ ಇದೆ. ಅಷ್ಟರೊಳಗೆ ಎಲ್ಲ ಕೆಲಸಗಳು ಮುಗಿಸಿ ಜುಲೈ ವೇಳೆಗೆ ಸಿನಿಮಾದ ಫಸ್ಟ್ ಕಾಪಿ ಸಿದ್ಧವಾಗಲಿದೆ. ಹಾಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Ramayana: ಯಶ್ 'ರಾಮಾಯಣ'ದ ಬಗ್ಗೆ ಬಂತು ಮತ್ತೊಂದು ಸುದ್ದಿ..! ತಮ್ಮನಾಗಿ ಅಭಿನಯಿಸುತ್ತಾರ ವಿಜಯ್ ಸೇತುಪತಿ..?

Related Video