Ramayana: ಯಶ್ 'ರಾಮಾಯಣ'ದ ಬಗ್ಗೆ ಬಂತು ಮತ್ತೊಂದು ಸುದ್ದಿ..! ತಮ್ಮನಾಗಿ ಅಭಿನಯಿಸುತ್ತಾರ ವಿಜಯ್ ಸೇತುಪತಿ..?

ರಾಕಿಂಗ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ ಮತ್ತೊಂದ್ ಕಡೆ ಯಶ್ ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ ರಾಮಾಯಣ ಚಿತ್ರದಲ್ಲಿ ನಟಿಸುತ್ತಾರೆ ಅಂತ ಬಿಟೌನ್ ಕನ್ಫರ್ಮ್ ಮಾಡ್ತಿದೆ.

First Published Jan 29, 2024, 10:31 AM IST | Last Updated Jan 29, 2024, 10:32 AM IST


ಬಾಲಿವುಡ್ ಜಗತ್ತಿನಿಂದ ರಾಮಾಯಣ ಸಿನಿಮಾ(Ramayana Movie) ಬಗ್ಗೆ ಮತ್ತೊಂದು ಸುದ್ದಿ ಬಂದಿದೆ. ಇಲ್ಲಿ ಯಶ್ (Yash) ರಾವಣ ಆಗೋದು ಪಕ್ಕಾ ಅಂತ ಹೇಳಲಾಗಿದೆ. ಅದೇ ತರ ರಾವಣನ ತಮ್ಮ ವಿಭೀಷಣ(Vibhishana) ರೋಲ್ ಮಾಡೋಕು ಟ್ಯಾಲೆಂಟೆಡ್ ನಟ ಬೇಕು. ಹೀಗಾಗಿ ರಾವಣ ಆಗಿರೋ ಯಶ್ ತಮ್ಮನಾಗಿ ನಟಿಸೋಕೆ ಅಂದ್ರೆ ವಿಭೀಷಣನ ರೋಲ್ ಮಾಡೋಕೆ ನಟ ವಿಜಯ್ ಸೇತುಪತಿಗೆ(Actor Vijay Sethupathi) ಆಫರ್ ಮಾಡಿದ್ದಾರಂತೆ. ನಿರ್ದೇಶಕ ನಿತೇಶ್ ತಿವಾರಿ 'ರಾಮಾಯಣ'ದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದ್ರೆ ಸೀತಾದೇವಿಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ. ಹನುಮಾನ್ ಪಾತ್ರ ಮಾಡಲು ಸನ್ನಿ ಡಿಯೋಲ್ ರನ್ನ ಸಂಪರ್ಕಿಸಲಾಗಿದೆ. ಈಗ  ರಾವಣನ(Ravana) ಸಹೋದರನ ಪಾತ್ರದಲ್ಲಿ ನಟಿಸೋಕೆ ತಮಿಳು ನಟ ವಿಜಯ್ ಸೇತುಪತಿಗೆ ಗಾಳ ಹಾಕಲಾಗಿದೆಯಂತೆ. ವಿಭೀಷಣ ರೋಲ್ ಮಾಡೋದಕ್ಕೆ ವಿಜಯ್ ಸೇತಿಪತಿ ಒಪ್ಪಿದ್ದಾರೆ ಅಂತ ಹೇಳಲಾಗ್ತಿದೆ. ನಟ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ರಾಮಾಯಣವನ್ನು ತೆರೆ ಮೇಲೆ ತಂದು ಜನರಿಂದ ಸಕತ್ ಆಗಿ ಉಗಿಸಿಕೊಂಡಿದ್ದ ಬಾಲಿವುಡ್ ಜಗತ್ತು. ಈ ಬಾರಿ ಆ ತಪ್ಪನ್ನು ಮಾಡದಂತೆ ನೋಡಿಕೊಳ್ಳುತ್ತಿದೆ. ಇದಕ್ಕಾಗಿ ಭಾರತೀಯ ಸಿನಿಮಾ ಜಗತ್ತಿನ ಘಟನಾಘಟಿ ಕಲಾವಿಧರನ್ನ ಆಯ್ಕೆ ಮಾಡಿಕೊಳ್ಳಲಾಗ್ತಿದೆ. ಈಗ ವಿಜಯ್ ಸೇತುಪತಿ ಎಂಟ್ರಿ ರಾಮಾಯಣ ಸಿನಿಮಾ ಮೇಲೆ ಮತ್ತೊಂದು ನಿರೀಕ್ಷೆ ಹುಟ್ಟುವಂತೆ ಮಾಡಿದೆ. 

ಇದನ್ನೂ ವೀಕ್ಷಿಸಿ:  Kaatera : ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಸೆಲೆಬ್ರೇಷನ್..! ಇಲ್ಲಿ ನಟ ದರ್ಶನ್ ತಾಳ್ಮೆಯ ಪಾಠ..!

Video Top Stories