Nabha Natesh : ಕನ್ನಡ ನಟಿಗೆ ತೆಲುಗು ಹೀರೋ ಹೀಗಂದ್ರಾ? ನಟನಿಗೆ ಸಖತ್‌ ಆಗಿ ಕ್ಲಾಸ್ ತಗೊಂಡಾ ನಟಿ !

ತೆಲುಗು ಹಾಸ್ಯ ನಟ ಪ್ರಿಯದರ್ಶಿ ಪುಲಿಕೊಂಡ ನಭಾ ಪೋಸ್ಟ್ ಮೆಚ್ಚಿ ಕಾಮೆಂಟ್ ಮಾಡಿ, "ವಾಹ್ ಸೂಪರ್ ಡಾರ್ಲಿಂಗ್, ಸಖತ್ ಆಗಿ ಇದ್ದೀಯಾ?" ಎಂದು ಬರೆದಿದ್ದಾರೆ. 

First Published Apr 20, 2024, 10:43 AM IST | Last Updated Apr 20, 2024, 10:44 AM IST

ಕನ್ನಡದ ನಟಿ ನಭಾ ನಟೇಶ್(Nabha Natesh) ಒಂದು ವಿಡಿಯೋ ಹಾಕಿದ್ದಕ್ಕೆ ತೆಲುಗು ನಟ ಸೂಪರ್‌ ಡಾರ್ಲಿಂಗ್‌(Darling) ಎಂದು ಹೇಳಿದ್ದಾರೆ. ಇದಕ್ಕೆ ನಭಾ ನಟೇಶ್‌ ಫುಲ್‌ ಕೋಪ ಮಾಡಿಕೊಂಡು, ಹಲೋ ಮಿಸ್ಟರ್‌ ನೀವು ನನಗೆ ಪರಿಚಯ ಇದ್ದರೇ ಹಾಗೆಲ್ಲ ಹಾಕಬೇಕು. ಪರಿಚಯ ಇಲ್ಲದೆ ಹಾಗೆಲ್ಲ ಹೇಳಿದ್ರೆ, ಕಾನೂನು ಪ್ರಕಾರ ಅಪರಾಧ ಎಂದು ಹೇಳುವ ಮೂಲಕ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ನಭಾ ಡಬ್‌ಸ್ಮ್ಯಾಶ್ ನೋಡಿದ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆಲುಗು ಹಾಸ್ಯ ನಟ ಪ್ರಿಯದರ್ಶಿ ಪುಲಿಕೊಂಡ(Priyadarshi Pulikonda) ಕೂಡ ನಭಾ ಪೋಸ್ಟ್ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. "ವಾಹ್ ಸೂಪರ್ ಡಾರ್ಲಿಂಗ್, ಸಖತ್ ಆಗಿ ಇದ್ದೀಯಾ?" ಎಂದು ಬರೆದಿದ್ದಾರೆ. 

ಇದನ್ನೂ ವೀಕ್ಷಿಸಿ:  Druva sarja: ಬಿಡುಗಡೆಗೆ ರೆಡಿ ಧ್ರುವನ ಕೆಡಿ, ಮಾರ್ಟಿನ್..! ಇವೆರಡರಲ್ಲಿ ಯಾವ ಸಿನಿಮಾ ಮೊದಲು ರಿಲೀಸ್..?

Video Top Stories