Druva sarja: ಬಿಡುಗಡೆಗೆ ರೆಡಿ ಧ್ರುವನ ಕೆಡಿ, ಮಾರ್ಟಿನ್..! ಇವೆರಡರಲ್ಲಿ ಯಾವ ಸಿನಿಮಾ ಮೊದಲು ರಿಲೀಸ್..?

ಧ್ರುವ ನಟಿಸಿದ ಕೊನೆ ಸಿನಿಮಾ ಪೊಗರು. ಆ ನಂತ್ರ ಈ ಅದ್ಧೂರಿ ಹುಡುಗ ವರ್ಷಕ್ಕೊಂದು ಸಿನಿಮಾ ಕೊಡುತ್ತೇನೆ ಅಂತ ಹೇಳಿದ್ರು. ಆದ್ರೆ ಆ ಮಾತು ಬರೀ ಮಾತಾಗೇ ಉಳಿತು ಧ್ರುವನ ಯಾವ್ ಸಿನಿಮಾನೂ ಬಿಡುಗಡೆ ಆಗಲೇ ಇಲ್ಲ. ಭಟ್ ಈ ವರ್ಷ ಧ್ರುವ ಸರ್ಜಾ ಫ್ಯಾನ್ಸ್‌ಗೆ ಸಿನಿಮಾ ಹಬ್ಬವಿದೆ. ಯಾಕಂದ್ರೆ ಧ್ರುವನ ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿ ನಿಂತಿವೆ.

Share this Video
  • FB
  • Linkdin
  • Whatsapp

ಧ್ರುವ ಸರ್ಜಾ(Druva Sarja) ನಟನೆಯ ಎರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಆದ್ರೆ ಆ ಎರಡು ಸಿನಿಮಾ ತಂಡಗಳ ಮಧ್ಯೆ ನಾನಾ ನೀನಾ ಅಂತ ಫೈಟ್ ಶುರುವಾಗಿದೆ. ಯಾಕಂದ್ರೆ ಕೆಡಿ ಸಿನಿಮಾ(KD Movie) ತಂಡ ಮದಲು ನಾವ್ ತೆರೆ ಮೇಲೆ ಬರುತ್ತೇನೆ ಅನ್ನುತ್ತಿದ್ದಾರೆ. ಅತ್ತ ಕಡೆ ಇಲ್ಲ ಇಲ್ಲ ಇದು ಸಾಧ್ಯನೆ ಇಲ್ಲ ನಾವೇ ಮದಲು ಬರ್ತೇವೆ ಅಂತ ಮಾರ್ಟಿನ್ ಟೀಂ ಹಠ ಹಿಡಿದು ಕುಳಿತಿದೆ. ಕೆಡಿ ಸಿನಿಮಾ ಶೂಟಿಂಗ್ ಶುರುವಾಗಿದ್ದು 2023ರಲ್ಲಿ. ಈ ಸಿನಿಮಾ ಶೂಟಿಂಗ್ಅನ್ನ ನಾನ್ ಸ್ಟಾಪ್‌ನಲ್ಲಿ ಮಾಡಿ ಮುಗಿಸಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್(Director Jogi Prem). ಆದ್ರೆ ಮಾರ್ಟಿನ್ ಸಿನಿಮಾ(Martin Movie) ಶುರುವಾಗಿದ್ದು 2021ರಲ್ಲಿ ಈ ಸಿನಿಮಾದ ಕೆಲಸಗಳು ಈಗಲೂ ನಡೆಯುತ್ತಲೇ ಇವೆ. ನಿರ್ದೇಶಕ ಎ.ಪಿ. ಅರ್ಜುನ್ ಮಾರ್ಟಿನ್ ಸಿನಿಮಾ ಕಂಪ್ಲೀಟ್ ಮಾಡೋಕೆ ಮೂರುವರೆ ವರ್ಷ ಸಮಯ ತೆಗೆದುಕೊಂಡಿದ್ದಾರೆ. ಹೀಗಾಗಿ ಮೊದಲು ಶುರುವಾಗಿದ್ದ ನಮ್ಮ ಸಿನಿಮಾ ಹೀಗಾಗಿ ನಾವೇ ಮೊದಲು ತೆರೆ ಮೇಲೆ ಬರುತ್ತೇವೆ ಅಂತ ಮಾರ್ಟಿನ್ ಟೀಂ ಹಠ ಹಿಡಿದು ಕೂತಿದೆ. ಎಲೆಕ್ಷನ್ ಬಿಸಿ ಕಡಿಮೆ ಆಗುತ್ತಿದ್ದಂತೆ ಮಾರ್ಟಿನ್ ರಿಲೀಸ್ ಮಾಡೋದಾಗಿ ನಿರ್ಮಾಪಕ ಉದಯ್ ಕೆ ಮೆಹ್ತಾ ಹೇಳುತ್ತಿದ್ದಾರೆ. ಸದ್ಯ ಮಾರ್ಟಿನ್ ಪೋಸ್ಟ್ ಪ್ರೊಡಕ್ಷನ್ ಟೇಬಲ್ ಮೇಲಿದೆ. ಹೀಗಾಗಿ ಧ್ರುವ ಸರ್ಜಾ ಫ್ಯಾನ್ಸ್‌ಗೆ ಯಾವ್ ಸಿನಿಮಾ ಮೊದಲು ಸಿಗುತ್ತೆ ಅನ್ನೋದೆ ಈಗ ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ವೀಕ್ಷಿಸಿ:  Kiara Advani: ಯಶ್ ನಟನೆಯ ಟಾಕ್ಸಿಕ್‌ನಲ್ಲಿ ಕಿಯಾರಾ..ಇದು ನಿಜಾನ..? ಮತ್ತೆ ಮುಂದಕ್ಕೆ ಹೋಯ್ತು ಟಾಕ್ಸಿಕ್ ಶೂಟಿಂಗ್ ಟೇಟ್..!

Related Video