Asianet Suvarna News Asianet Suvarna News

ಮೂರೇ ದಿನದಲ್ಲಿ 400 ಕೋಟಿ ಕಲೆಕ್ಷನ್..ಪ್ರಭಾಸ್‌ಗೆ ಮತ್ತೊಂದು ಬಿಗ್ ಹಿಟ್ !

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಕಲ್ಕಿ 2898 ಎಡಿ ರಿಲೀಸ್ ಆದ ಮೊದಲ ದಿನದಿಂದ ಈಗಿನವರೆಗೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಸದ್ಯ ಕಲ್ಕಿ ಸಿನಿಮಾ ಬಿಡುಗಡೆ ಆಗಿ ಮೂರು ದಿನ ಮುಗಿದಿದ್ದು, ಮೂರನೇ ದಿನ ಸಿನಿಮಾ ಅದ್ಧೂರಿ ಕಲೆಕ್ಷನ್ ಮಾಡಿದೆ. ಮೂರು ದಿನಕ್ಕೆ ನಾನ್ನೂರ ಹದಿನೈದು ಕೋಟಿ ಕಲೆಕ್ಷನ್ (Collection) ಮಾಡಿದೆ. ಅಂದ ಹಾಗೆ ಸಿನಿಮಾದ ಬಿಡುಗಡೆ ಆದ ಮೂರನೇ ದಿನ ಅಂದರೆ ಶನಿವಾರ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಬಿಡುಗಡೆ ಆದ ದಿನ ಭಾರತದಲ್ಲಿ 95.30 ಕೋಟಿ ರೂಪಾಯಿ ಹಣಗಳಿಸಿತ್ತು. ಆ ಮೂಲಕ ಈ ಹಿಂದೆ ಮೊದಲ ದಿನ ಅತಿ ಹೆಚ್ಚು ಹಣಗಳಿಸಿ ದಾಖಲೆ ಮಾಡಿದ್ದ ಕೆಲವು ಸಿನಿಮಾಗಳ ದಾಖಲೆಯನ್ನು ಮುರಿದಿತ್ತು. ಆದರೆ ಎರಡನೇ ದಿನದ ಗಳಿಕೆಯಲ್ಲಿ ತುಸು ಇಳಿಮುಖ ಕಂಡು ಬಂದಿತ್ತು. ಅಂದರೆ ಎರಡನೇ ದಿನ ಭಾರತದಲ್ಲಿ 54 ಕೋಟಿ ಹಣವನ್ನು ಗಳಿಸಿ 200 ಕೋಟಿ ಗಳಿಕೆ ಮಾಡಿದೆ. ಪ್ರಭಾಸ್‌ ನಟನೆ (Prabhas) ಮೂರನೇ ದಿನ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ಶನಿವಾರದಂದು ಭಾರತದ ಬಾಕ್ಸ್ ಆಫೀಸ್‌ನಲ್ಲಿ 67.1 ಕೋಟಿ ರೂಪಾಯಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಎರಡನೇ ದಿನಕ್ಕೆ ಹೋಲಿಸಿದರೆ ಶನಿವಾರ ಕಲೆಕ್ಷನ್ನಲ್ಲಿ 50% ಏರಿಕೆಯಾಗಿದೆ. ಶನಿವಾರ ವೀಕೆಂಡ್ ಆಗಿದ್ದ ಕಾರಣ ಕೆಲಕ್ಷನ್ನಲ್ಲಿ ಏರಿಕೆಯಾಗಿದೆ. ಆ ಮೂಲಕ ‘ಕಲ್ಕಿ 2898 ಎಡಿ’ ಸಿನಿಮಾವು ಭಾರತದಲ್ಲಿ ಕೇವಲ ಮೂರು ದಿನಕ್ಕೆ 200 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಮೂರು ದಿನದಲ್ಲಿ ‘ಕಲ್ಕಿ’ ಸಿನಿಮಾ ಸುಮಾರು 225 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜಗತ್ತಿನಾದ್ಯಂತ ಕೇವಲ ಮೂರು ದಿನಗಳಲ್ಲಿ 415 ಕೋಟಿ ಕಲೆಕ್ಷನ್  ಮಾಡಿ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.

ಇದನ್ನೂ ವೀಕ್ಷಿಸಿ:  ಬಘೀರ ಶೂಟಿಂಗ್ ಹಿಂದೆ ಹೇಗಿದೆ ಶ್ರೀಮುರಳಿ ಶ್ರಮ..? ಈ ವರ್ಷ ರಿಲೀಸ್ ಆಗುತ್ತೆ ಹೊಂಬಾಳೆಯ ಮತ್ತೊಂದು ಸಿನಿಮಾ !

Video Top Stories