Asianet Suvarna News Asianet Suvarna News

ಬಘೀರ ಶೂಟಿಂಗ್ ಹಿಂದೆ ಹೇಗಿದೆ ಶ್ರೀಮುರಳಿ ಶ್ರಮ..? ಈ ವರ್ಷ ರಿಲೀಸ್ ಆಗುತ್ತೆ ಹೊಂಬಾಳೆಯ ಮತ್ತೊಂದು ಸಿನಿಮಾ !

ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾನ್ಸ್‌ಗೆ ರೋರಿಂಗ್ ಸುದ್ದಿಯೊಂದು ಬಂದಿದೆ. ಶ್ರೀಮುರಳಿ ಸಿನಿಮಾ ನೋಡಿ ಮೂರು ವರ್ಷ ಆಯ್ತು, ಮುರುಳಿ ನಟಿಸಿದ್ದ ಕೊನೆ ಸಿನಿಮಾ ಮದಗಜ. ಆ ನಂತರ ರೋರಿಂಗ್ ಸ್ಟಾರ್ ಯಾವ್ ಸಿನಿಮಾಗೂ ಸೈನ್ ಹಾಕಲಿಲ್ಲ. ಯಾಕಂದ್ರೆ ಮುರಳಿ ಮುಂದೆ ಇದ್ದಿದ್ದು ಒಂದೇ ಕಥೆ ಅದು ಬಘೀರನ ಕಥೆ.

ಬಘೀರ ಶೂಟಿಂಗ್ ಮಿಷನ್ ಕಂಪ್ಲೀಟ್ ಆಗಿದೆ. ಎದ್ದು ಬಿದ್ದು ಸತತ ಮೂರು ವರ್ಷ ಟೈಂ ಮಾಡಿಕೊಂಡು ಬಘೀರನ ಚಿತ್ರೀಕರಣ ಮಾಡಿದ್ದ ನಿರ್ದೇಶಕ ಡಾಕ್ಟರ್ ಸೂರಿ ಹಾಗು ನಟ ಶ್ರೀಮುರಳಿ (Srimurali) ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಆಗಿದ್ದಾರೆ. ಬಘೀರ(Bagheera movie) ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರೋ ಮಲ್ಟಿ ಲಾಂಗ್ವೇಜ್ ಸಿನಿಮಾ. ಇದು ಆಕ್ಷನ್, ಸಸ್ಪೆನ್ಸ್  ಸ್ಟೋರಿಯ ಮೂವಿ. ಈ ಬಘೀರ ಚಿತ್ರೀಕರಣ ಶುರುವಾಗಿದ್ದು 2022ರಲ್ಲಿ. ಆದ್ರೆ ಶೂಟಿಂಗ್ (Shooting) ಮುಗಿದಿದ್ದು 2024 ಜೂನ್ 25ಕ್ಕೆ, ಅಂದ್ರೆ ಬರೋಬ್ಬರಿ ಎರಡೂವರೆ ವರ್ಷ ಭಗೀರ ಚಿತ್ರೀಕರಣ ನಡೆದಿದೆ. ಈ ಸಿನಿಮಾದ ಶೂಟಿಂಗ್ಗೆ ಎರಡುವರೆ ವರ್ಷ ಹಿಡಿದಿದ್ದು ಯಾಕೆ ಗೊತ್ತಾ.? ಶೂಟಿಂಗ್ ಮಾಡುವಾಗ ಶ್ರೀಮುರಳಿ ಪದೇ ಪದೇ ಇಂಜುರಿ ಮಾಡಿಕೊಂಡಿದ್ದು. ಬಘೀರ ಸಿನಿಮಾ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಶ್ರಮ ಹೇಗಿದೆ ಗೊತ್ತಾ.? ಅದನ್ನ ಕೇಳಿದ್ರೆ ನಿಜಕ್ಕು ಆಶ್ಚರ್ಯ ಆಗುತ್ತೆ. ಈ ಸಿನಿಮಾ ಶೂಟಿಂಗ್ ಮಾಡುವಾಗ ತನ್ನ ಬಲಗಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದ ಶ್ರೀಮುರಳಿ ಸತತನ ಐದು ತಿಂಗಳು ಬೆಡ್ ರೆಸ್ಟ್ ಮಾಡಿದ್ರು. ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ರು. ಮತ್ತೆ ರೆಡಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ರು. ಬಸ್ ಚೇಸಿಂಗ್ ಚಿತ್ರೀಕರಣದ ವೇಳೆ ಓಡಿ ಬಂದು ಬಸ್ ಹತ್ತಿಕೊಳ್ಳುವಾಗ ಬ್ಯಾಲೆನ್ಸ್ ತಪ್ಪಿ ಮತ್ತೆ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ರು. ಆ ಬಳಿಕ ಮತ್ತೆ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬೇಕಾಗಿತ್ತು. ನಟ ಶ್ರೀಮುರಳಿ ಬಘೀರನಿಗಾಗಿ ಮೂರು ವರ್ಷ ಡೆಡಿಕೇಟ್ ಮಾಡಿದ್ದಾರೆ. ಈ ಸಿನಿಮಾದ ಹಿಂದಿರೋ ದೊಡ್ಡ ಶಕ್ತಿ ಹೊಂಬಾಳೆ ಫಿಲ್ಮ್ಸ್‌. ಭಾರತೀಯ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನ ಕೊಡುತ್ತಿರೋ ಹೊಂಬಾಳೆ (Hombale films) ಈ ವರ್ಷವೇ ಸಿನಿಮಾ ರಿಲೀಸ್ ಮಾಡೋದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದೆ.

ಇದನ್ನೂ ವೀಕ್ಷಿಸಿ:  ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ಓದೋ 5 ಪುಸ್ತಕಗಳು ಯಾವುವು? 

Video Top Stories