Asianet Suvarna News Asianet Suvarna News

ಕೆಜಿಎಫ್-2 ದಾಖಲೆಗೆ ಪಠಾಣ್ ಕಂಠಕ: 5 ದಿನದಲ್ಲಿ 250 ಕೋಟಿ ಬಾಚಿಕೊಂಡ ಶಾರೂಖ್ ಸಿನಿಮಾ!

ಭಾರತೀಯ ಚಿತ್ರರಂಗದಲ್ಲಿ ಅತಿ ಕಡಿಮೆ ಸಮಯದಲ್ಲಿ 250 ಕೋಟಿ ಗಳಿಕೆ ಕಂಡ ಖ್ಯಾತಿ ಶಾರುಖಾನ್ ದೀಪಿಕ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ದೊರಕಿದೆ.  ಬಾಯ್ಕಾಟ್ ಬೆದರಿಕೆಯ ನಡುವೆಯೂ ವಿವಾದಗಳ ವಿರೋಧಗಳ ನಡುವೆಯೂ ಶಾರುಖಾನ್ ಸಿನಿಮಾ ಬುದುವಾರವೇ ರಿಲೀಸ್ ಆಯ್ತು. 

‘ಪಠಾಣ್’ .. ಸದ್ಯ ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರ್ತಿರೋ ಒಂದೇ ಹೆಸರು.. ಅದು ಪಠಾಣ್ ಸಿನಿಮಾದ ಕಲೆಕ್ಷನ್ ತಗ್ಗುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಮೊದಲ ಐದು ದಿನ ಅಬ್ಬರದ ಕಲೆಕ್ಷನ್ ಮಾಡಿದ್ದ ಈ ಚಿತ್ರ ಸೋಮವಾರವೂ ಬಾರೀ ಕಲೆಕ್ಷನ್ನಿಂದ ಮುನ್ನುಗ್ಗುತ್ತಿದೆ. ಮೊದಲೆಲ್ಲ ಒಂದು ಸಿನಿಮಾ 100 ಕೋಟಿ ಮಾಡಿದ್ರೆ ಅದೆ ದೊಡ್ಡ ದಾಖಲೆ ಆದ್ರೆ ಈಗ 1000 ಕೋಟಿಗಳ ಲೆಕ್ಕಾಚಾರ. ಒಂದು ಪ್ರಾದೇಶಿಕ ಸಿನಿಮಾ ಕೂಡ 100 ಕೋಟಿ ದಾಟಿ 100 ಕೋಟಿಗಳನ್ನ ಗಳಿಸಿದ್ದೆ ಇದಕ್ಕೆ ಉದಾಹರಣೆ. ಕೆಜಿಎಫ್2 1200 ಕೋಟಿ ಗಳಿಸೋ ಮೂಲಕ ಈ ಲೆಕ್ಕಾ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗು ಮಾಡಿತ್ತು. 

ಇದೀಗ ಪಠಾಣ್ ಗಳಿಕೆ ಮತ್ತು ದಾಖಲೆ ಬಗ್ಗೇನೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.  ಅಂದಹಾಗೆ ಭಾರತೀಯ ಚಿತ್ರರಂಗದಲ್ಲಿ ಅತಿ ಕಡಿಮೆ ಸಮಯದಲ್ಲಿ 250 ಕೋಟಿ ಗಳಿಕೆ ಕಂಡ ಖ್ಯಾತಿ ಶಾರುಖಾನ್ ದೀಪಿಕ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ದೊರಕಿದೆ.  ಬಾಯ್ಕಾಟ್ ಬೆದರಿಕೆಯ ನಡುವೆಯೂ ವಿವಾದಗಳ ವಿರೋಧಗಳ ನಡುವೆಯೂ ಶಾರುಖಾನ್ ಸಿನಿಮಾ ಬುದುವಾರವೇ ರಿಲೀಸ್ ಆಯ್ತು. ಮೊದಲ ದಿನವೇ 55 ಕೋಟಿ, ಎರಡನೇ ದಿನಕ್ಕೆ 68 ಕೋಟಿ , ಮೂರನೇ ದಿನಕ್ಕೆ 38 ಕೋಟಿ, ಶನಿವಾರ 51 ಕೋಟಿ, ಬಾನುವಾರ 58  ಕೋಟಿ ಹೀಗೆ 5 ದಿನದಲ್ಲಿ 270 ಕೋಟಿಗೂ ಅಧಿಕ ಕಲೆಕ್ಷನ್ ಮಾಡೊ ಮೂಲಕ ಫಾಸ್ಟೆಸ್ಟ್ 250 ಕ್ರೋರ್ ಕ್ಲಬ್ ಸೇರಿದ ಸಿನಿಮಾ ಅನ್ನೋ ರೆಕಾರ್ಡನ್ನು ಮಾಡಿದೆ. 6 ದಿನಕ್ಕೆ 300 ಕೋಟಿ ಕ್ರಾಸ್ ಮಾಡಿದೆ  ಪಠಾಣ್. 

ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

ಶಾರೂಖಾನ್ ಜೊತೆ ಸಲ್ಮಾನ್ ಕೂಡ ಸಿನಿಮಾದಲ್ಲಿ ನಟಿಸಿರೋದು ಪ್ರೇಕ್ಷಕನಿಗೆ ಥ್ರಿಲ್ ನೀಡಿದೆ. ಸಿನಿಮಾ  ಸಿನಿಮಾ ಮೇಕಿಂಗ್ ಕೂಡ ಅದ್ದೂರಿಯಾಗಿದ್ದು ಈ ಮಟ್ಟಿಗಿನ ಕಲೆಕ್ಷನ್ಗೆ ಕಾರಣ ಎನ್ನಲಾಗಿದೆ. ಹಾಗಾದರೆ ಕನ್ನಡದ ಕೆಜಿಎಫ್ ಮತ್ತು ಬಾಹುಬಲಿ  ಮತ್ತು ದಂಗಲ್ ಯಾವ ಸ್ಥಾನದಲ್ಲಿವೆ. ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಚಿತ್ರಗಳು ಇವೇ ಆಗಿದ್ದು ಯಾವ ಯಾವ ಸ್ಥಾನದಲ್ಲಿವೆ ನೋಡೋಣ. ಕೆಜಿಎಫ್-2 2ನೇ ಸ್ಥಾನದಲ್ಲಿದ್ದು ಪ್ರಶಾಂತ್ ನೀಲ್, ನಿರ್ದೇಶಿಸಿ ಹೊಂಬಾಳೆ ನಿರ್ಮಾಣ ಮಾಡಿ ಯಶ್ ನಟಿಸಿದ್ದ ಕೆಜಿಎಫ್ ಇಲ್ಲೀವರೆಗೆ ಅತಿ ಕಡಿಮೆ ಸಮಯದಲ್ಲಿ 250 ಕೋಟಿ ಗಳಿಸಿದ ಭಾರತೀಯ ಚಿತ್ರ ಎಂಬ ರೆಕಾರ್ಡ್ ಮಾಡಿತ್ತು. ಯಶ್ ಹೆಸರಲ್ಲೆ ಇತ್ತು ಆ ದಾಖಲೆ. ಈಗ ಅದು ಪಠಾಣ್ ಶಾರೂಖ್ ಹೆಸರಿಗೆ ಬದಲಾಗಿದೆ. ಇನ್ನು ರಾಜಮೌಳಿ ನಿರ್ದೇಶಿಸಿ ಪ್ರಭಾಸ್ ನಟಿಸಿದ್ದ ಬಾಹುಬಲಿ ಸಿನಿಮಾ 8 ದಿನಗಳಲ್ಲಿ 250 ಕೋಟಿ ಗಳಿಸೊ ಮೂಲಕ 3ನೇ ಸ್ಥಾನದಲ್ಲಿದೆ. 

ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾ 10 ದಿನಗಳಲ್ಲಿ 250 ಕೋಟಿ ಕಲೆಕ್ಷನ್ ಮಾಡಿ 4 ನೇ ಸ್ಥಾನದಲ್ಲಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಈ 4 ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳೆ. ಬಹುಭಾಷೆಯಲ್ಲಿ ತೆರೆಕಂಡವು. ಆದರೆ ಬಾಲಿವುಡ್ನಲ್ಲಿ ಈ ಸಿನಿಮಾಗಳು ಅತಿ ಕಡಿಮೆ ಸಮಯದಲ್ಲಿ ವೇಗವಾಗಿ 250 ಕೋಟಿ ಗಳಿಸಿದ ಟಾಪ್ 4 ಚಿತ್ರಗಳಾಗಿವೆ.  5 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಶಾರೂಖಾನ್ ಜೀರೋ ಸಿನಿಮಾ ಬಾಕ್ಸಾಫೀಸ್ನಲ್ಲು 0 ದಾಖಲೆ ಮಾಡಿತ್ತು. ಅದೇ ಶಾರೂಖಾನ್ ಈಗ ಪಠಾಣ್ ಸಿನಿಮಾದಿಂದ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಾ ಮತ್ತೆ ಹೀರೋ ಆಗಿದ್ದಾರೆ. ಅದಕ್ಕೆ ಹೇಳಿದ್ದು ಸಕ್ಸಸ್ ಯಾರಪ್ಪನ ಆಸ್ತಿ ಅಲ್ಲ .. ಇವತ್ತು ಇವರದ್ದು ನಾಳೆ ಇನ್ನೊಬ್ಬರದ್ದು. ಪ್ರಿಶ್ರಮ ಪ್ರತಿಭೆ ಅದೃಷ್ಟ ಮೂರೂ ಯಾವಾಗ ಒಟ್ಟಿಗೆ ಯಾರಪಾಲಿಗೆ ದೊರೆಯುತ್ತೋ ಅವರೆ ಕಲೆಕ್ಷನ್ ಕಿಂಗ್ ನೆಕ್ಟ್ಸ್ ಈ ರೆಕಾರ್ಡ್ ಯಾರು ಮುರಿಯುತ್ತಾರೋ ವೈಟ್ ಅಂಡ್ ವಾಚ್.

Video Top Stories