ಆರ್ಯನ್ ಖಾನ್‌ ಫೋಟೋ ಶೇರ್‌ ಮಾಡಿದ ಪಾಕ್ ನಟಿ; ಏನ್ ನಡಿತಿದೆ ಎಂದ ನೆಟ್ಟಿಗರು

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಸ್ಟೈಲಿಶ್ ಫೋಟೋಶೂಟ್ ಮಾಡಿಸಿ ಸದ್ದು ಮಾಡಿದ್ದ ಆರ್ಯನ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆರ್ಯನ್ ಖಾನ್ ಇನ್ನು ಸಿನಿಮಾರಂಗದಲ್ಲಿ ಆಕ್ಟೀವ್ ಆಗಿಲ್ಲ ಆಗಲೇ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಸ್ಟೈಲಿಶ್ ಫೋಟೋಶೂಟ್ ಮಾಡಿಸಿ ಸದ್ದು ಮಾಡಿದ್ದ ಆರ್ಯನ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆರ್ಯನ್ ಖಾನ್ ಇನ್ನು ಸಿನಿಮಾರಂಗದಲ್ಲಿ ಆಕ್ಟೀವ್ ಆಗಿಲ್ಲ ಆಗಲೇ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. ಇದಾಗ ಮತ್ತೆ ಆರ್ಯನ್ ಖಾನ್ ಸುದ್ದಿಯಾಗಿರುವುದು ಪಾಕ್ ನಟಿಯ ವಿಚಾರಕ್ಕೆ. ಹೌದು ಪಾಕ್ ನಟಿ ಸಜಲ್ ಅಲಿ, ಶಾರುಖ್ ಖಾನ್ ಪುತ್ರನ ಫೋಟೋ ಶೇರ್ ಮಾಡಿ ಅಚ್ಚರಿ ಮಾಡಿಸಿದ್ದಾರೆ. ಈ ನಟಿ ಪಾಕಿಸ್ತಾನ ಮಾತ್ರವಲ್ಲದೇ ಭಾರತದಲ್ಲೂ ಖ್ಯಾತಿಗಳಿಸಿದ್ದಾರೆ. ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಸಜಲ್ ಅಲಿ, ಆರ್ಯನ್ ಖಾನ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ. ಆರ್ಯನ್ ಫೋಟೋ, ಸಜಲ್ ಇನ್ಸ್ಟಾಗ್ರಾಮ್ ನಲ್ಲಿ ನೋಡುತ್ತಿದ್ದಂದೆ ಅಭಿಮಾನಿಗಳು ಬೇರೆಯದ್ದೆ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಗುಸು ಗುಸು ಪ್ರಾರಂಭವಾಗಿದೆ. ಒಟ್ನಲ್ಲಿ ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಕಿಂಗ್ ಖಾನ್ ಪುತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

Related Video