Asianet Suvarna News Asianet Suvarna News

ಟ್ರೋಲ್ ಆದ ಜವಾನ್ ಡೈರೆಕ್ಟರ್ ಅಟ್ಲಿ..! ಹಾಗಾದ್ರೆ ಯಾರು ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್..?

ತಮಿಳು ಡೈರೆಕ್ಟರ್ ಶಾರುಖ್‌ ಖಾನ್ ಜವಾನ್ ಸಿನಿಮಾ ನಿರ್ದೇಶಕ ಅಟ್ಲಿ ಯಶ್, ಅಲ್ಲು ಅರ್ಜುನ್, ವಿಜಯ್ ಹೆಸರನ್ನು ತೆಗೆದುಕೊಂಡಿದ್ದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಇತ್ತೀಚೆಗೆ  ನಿರ್ದೇಶಕ ಅಟ್ಲಿ ABP ವಾಹಿನಿ ಸಮಿಟ್‌ನಲ್ಲಿ ಭಾಗವಹಿಸಿ ಚಿತ್ರರಂಗದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹಾಲಿವುಡ್ ಸಿನಿಮಾ ಮಾಡುತ್ತೀನಿ ಎಂದು ಭರವಸೆಯಿಂದ ಹೇಳಿದ್ದಾರೆ. ಬಾಲಿವುಡ್ ಸಿನಿಮಾ ಮಾಡಲು 10 ವರ್ಷ ಸಮಯ ಬೇಕಾಯಿತು. ಅದೇ ರೀತಿ ಹಾಲಿವುಡ್ ಸಿನಿಮಾ ಮಾಡಲು ಇನ್ನೈದು ವರ್ಷ ಬೇಕಾಗಬಹುದು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಯಶ್(Yash), ಅಲ್ಲು ಅರ್ಜುನ್(Allu Arjun) ಹಾಗೂ ದಳಪತಿ ವಿಜಯ್(Dalapathy Vijay) ಹೆಸರುಗಳನ್ನು ಅಟ್ಲಿ(Director Atlee) ಪ್ರಸ್ತಾಪಿಸಿದ್ದಾರೆ. 'KGF' ಎಲ್ಲಾ ಕಡೆ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಬರುವವರೆಗೂ ಯಶ್ ಯಾರು ಎಂದು ಹಿಂದಿ ಭಾಷಿಕರಿಗೆ ಗೊತ್ತಿರಲಿಲ್ಲ. 'KGF' ಬಳಿಕ ಯಶ್ ಇಂಡಿಯನ್ ಸೂಪರ್ ಸ್ಟಾರ್ ಆಗಿದ್ದಾರೆ. ಅದೇ ರೀತಿ 'ಪುಷ್ಪ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಹಾಗೂ 'ಲಿಯೋ' ಸಿನಿಮಾ ಮಾಡಿ ವಿಜಯ್ ಸರ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ಸ್ ಆಗಿದ್ದಾರೆ ಎಂದು ಅಟ್ಲಿ ಹೇಳಿದ್ದಾರೆ. ಯಶ್ ಹಾಗೂ ಅಲ್ಲು ಅರ್ಜುನ್ ಓಕೆ  ವಿಜಯ್ ಯಾಕೆ ..? ದಳಪತಿ ವಿಜಯ್ ಕಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಇರಬಹುದು. ಆದರೆ ಪ್ಯಾನ್ ಇಂಡಿಯಾ ಸ್ಟಾರ್ ಇನ್ನು ಆಗಿಲ್ಲ. ಅದರಲ್ಲೂ 'ಲಿಯೋ' ಸಿನಿಮಾ ಉತ್ತರ ಭಾರತದಲ್ಲಿ ಗೆಲ್ಲಲೇಯಿಲ್ಲ. ಅದು ಹೇಗೆ ವಿಜಯ್ನ ನ್ಯಾಷನಲ್ ಸ್ಟಾರ್ ಲಿಸ್ಟ್ನಲ್ಲಿ ಸೇರಿಸಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Mandya: ಮತ್ತೆ ಶುರುವಾಯ್ತು ಸಕ್ಕರೆ ನಾಡು ಚುನಾವಣೆ ಹೀಟು..! ಈ ಭಾರಿ ಮತ್ತೆ ಮಂಡ್ಯಕ್ಕೆ ಬರುತ್ತಾರಾ ಜೋಡೆತ್ತು..?