Mandya: ಮತ್ತೆ ಶುರುವಾಯ್ತು ಸಕ್ಕರೆ ನಾಡು ಚುನಾವಣೆ ಹೀಟು..! ಈ ಭಾರಿ ಮತ್ತೆ ಮಂಡ್ಯಕ್ಕೆ ಬರುತ್ತಾರಾ ಜೋಡೆತ್ತು..?
ಕಳೆದ ಲೋಕಸಭೆ ಚುನಾವಣೆ ವೇಳೆ ಇಡೀ ದೇಶದ್ದು ಒಂದು ಚರ್ಚೆ ಆದ್ರೆ, ಮಂಡ್ಯ ಕ್ಷೇತ್ರದ್ದು ಮಾತ್ರ ಬೇರೆ ಲೆವೆಲ್ನಲ್ಲಿತ್ತು. ಯಾಕಂದ್ರೆ ಅಂದು ನಟಿ ಸುಮಲತಾ ಸ್ವಾಭಿಮಾನದ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ರು. ಇವರ ಜೊತೆ ನಟ ದರ್ಶನ್, ಯಶ್ ಕೂಡ ಸುಮಕ್ಕನನ್ನ ಗೆಲ್ಲಿಸಿ ಅಂತ ಮತದಾರರಲ್ಲಿ ಬೇಡಿದ್ರು.
ಮಂಡ್ಯ ಲೋಕಸಭೆ ಬಿಸಿ ನಿಧಾನಕ್ಕೆ ಹೆಚ್ಚಾಗ್ತಿದೆ. ಮಂಡ್ಯ ಸಂಸದೆ ಸುಮಲತಾಗೆ(Sumalatha) ಬಿಜೆಪಿ ಪಕ್ಷದಿಂದ ಮಂಡ್ಯದಲ್ಲೇ ಸ್ಪರ್ಧೆ ಮಾಡಿ ಅಂತ ಬೆಂಬಲಿಗರು ಬೆನ್ನಿಗೆ ಬಿದ್ದಿದ್ದಾರೆ. ಸುಮಲತಾ ಕೂಡ ನಾನು ಮಂಡ್ಯ(Mandya) ಬಿಟ್ಟು ಹೋಗಲ್ಲ. ಈ ಭಾರಿ ಬಿಜೆಪಿ(BJP) ಪಕ್ಷದಿಂದ ಮಂಡ್ಯ ಕ್ರೇತ್ರ ಪ್ರತಿನಿಧಿಸೋ ಆಸೆ ಇದೆ. ಹೀಗಾಗಿ ಟಿಕೆಟ್(Ticket) ಕೇಳುತ್ತಿದ್ದೇನೆ ಎಂದಿದ್ದಾರೆ. ಸುಮಕ್ಕ ಮಂಡ್ಯದಲ್ಲಿ ಗೆಲುವಿನ ಸಕ್ಕೆರೆ ಸವಿಯೋಕೆ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಂತೆ ಆ ಕಡೆ ಮತ್ತೆ ಜೋಡೆತ್ತುಗಳ ಗುಟುರು ಕೇಳಿಸುತ್ತಿದೆ. ಈ ಭಾರಿ ಮತ್ತೆ ಮಂಡ್ಯಕ್ಕೆ ಬರುತ್ತಾರಾ ಜೋಡೆತ್ತುಗಳು ಅನ್ನೋ ಟಾಕ್ ಶುರುವಾಗಿದೆ. ಕರ್ನಾಟಕದಲ್ಲಿ ರಾಜ್ಯದ ಜನರ ಚಿತ್ತ ಮತ್ತೊಮ್ಮೆ ಮಂಡ್ಯದತ್ತ ಹರಿದಿದೆ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಭರ್ಜರಿ ಪೈಪೋಟಿ ನಡೆದು ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದ ಸುಮಲತಾ ಜಯಭೇರಿ ಭಾರಿಸಿದ್ರು. ಇದಕ್ಕೆ ಕಾರಣ ಆಗಿದ್ದು ಜೋಡೆತ್ತುಗಳಾದ ಯಶ್ ಮತ್ತು ದರ್ಶನ್. ಸುಮಲತಾ ಪರ ಅಬ್ಬರದ ಪ್ರಚಾರ ಮಾಡಿದ್ದ ದರ್ಶನ್(Darshan) ಯಶ್(Yash) ಮಂಡ್ಯ ಜನರ ಮುಂದೆ ಸುಮಕ್ಕನ ಪರ ಭರ್ಜರಿ ಡೈಲಾಗ್ ಹೊಡೆದಿದ್ರು. ಈ ಭಾರಿಯೂ ನಟ ದರ್ಶನ್ ಸುಮಲತಾ ಪರ ನಿಂತಿದ್ದಾರೆ. ಹೀಗಾಗೆ ನಟ ದರ್ಶನ್ ಜೆಪಿ ನಗರದಲ್ಲಿರೋ ಸುಮಲತಾ ಮನೆಗೆ ಭೇಟಿ ನೀಡಿ ಎಲೆಕ್ಷನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಭಾರಿಯೂ ನಟ ದರ್ಶನ್ ನನ್ನ ಜತೆ ಪ್ರಚಾರಕ್ಕೆ ಬರುತ್ತಾರೆ ಅಂತ ಸುಮಲತಾ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಆದ್ರೆ ಯಶ್ ಜತೆ ಇನ್ನೂ ಚರ್ಚಿಸಿಲ್ಲ. ಅವರನ್ನೂ ಕರೆದುಕೊಂಡು ಬರೋ ಪ್ಲಾನ್ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: Umapati VS Darshan: ದರ್ಶನ್, ಉಮಾಪತಿ ಮಧ್ಯೆ ನಿಲ್ಲದ ವಾರ್! ಉಮಾಪತಿ ಕ್ಷೇತ್ರದಲ್ಲೇ ರ‍್ಯಾಲಿಗೆ ಸಿದ್ಧರಾಗಿದ್ದ ಫ್ಯಾನ್ಸ್!