Asianet Suvarna News Asianet Suvarna News

Kiara Advani: ಯಶ್ ನಟನೆಯ ಟಾಕ್ಸಿಕ್‌ನಲ್ಲಿ ಕಿಯಾರಾ..ಇದು ನಿಜಾನ..? ಮತ್ತೆ ಮುಂದಕ್ಕೆ ಹೋಯ್ತು ಟಾಕ್ಸಿಕ್ ಶೂಟಿಂಗ್ ಟೇಟ್..!

ಸ್ಟಾರ್ ನಟರ ಸಿನಿಮಾಗಳೇ ಹಂಗೆ. ಸಿನಿಮಾ ಸೆಟ್ಟೇರಿದ ದಿನದಿಂದ ತೆರೆಕಾಣೋ ವರೆಗೂ ಚಿತ್ರ ಪ್ರೇಮಿಗಳನ್ನ ಕಾಡುತ್ತೆ. ಈಗ ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕಾಡಿತ್ತಿರೋ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಅನೌನ್ಸ್ ಆದ ದಿನದಿಂದ ರಾಕಿ ಪ್ಯಾನ್ಸ್ಗೆ ಟಾಕ್ಸಿಕ್ ಅಪ್ಡೇಡ್ ಸಿಗ್ತಾನೆ ಇದೆ. ಈಗ ಟಾಕ್ಸಿಕ್ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್ ಬಂದಿದೆ. 

First Published Apr 20, 2024, 10:03 AM IST | Last Updated Apr 20, 2024, 10:04 AM IST

ಟಾಕ್ಸಿಕ್ ಪ್ಯಾನ್ ವರ್ಲ್ಡ್ ಸಿನಿಮಾ. ಅಷ್ಟೆ ಅಲ್ಲ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ (Yash) ಸಿನಿಮಾ ಆಗಿರೋದ್ರಿಂದ ಟಾಕ್ಸಿಕ್ ಫಿವರ್ ದೇಶಾದ್ಯಂತ ಇದೆ. ಟಾಕ್ಸಿಕ್ ಗಮಲನ್ನ ವರ್ಲ್ಡ್ ವೈಡ್ ಹಬ್ಬಿಸೋ ಹುಮ್ಮಸ್ಸಿನಲ್ಲಿ ಯಶ್ ಇದ್ದಾರೆ. ಹೀಗಾಗಿ ಟಾಕ್ಸಿಕ್‌ಗೆ(Toxic Movie) ಪ್ಯಾನ್ ವಲ್ಡ್‌ನಲ್ಲಿ ಫೇಮ್ ಇರೋ ಹೀರೋಯಿನ್ಸ್ ಅನ್ನ ಸೆಲೆಕ್ಟ್ ಮಾಡುತ್ತಿದ್ದಾರೆ. ಇದೀಗ ಟಾಕ್ಸಿಕ್‌ಗೆ ಬಾಲಿವುಡ್‌ನ ಮತ್ತೊಬ್ಬ ಬ್ಯೂಟಿಫುಲ್ ಗರ್ಲ್ ಎಂಟ್ರಿ ಕೊಟ್ಟಿದ್ದಾರೆ ಅವರೇ ಕಿಯಾರಾ ಅಡ್ವಾಣಿ(Kiara Advani). ಟಾಕ್ಸಿಕ್‌ನಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅನ್ನೋದ ಟಾಕ್ ಆಫ್ ದಿ ಟೌನ್ ಆಗಿತ್ತು. ಕರೀನಾ ಕೂಡ ನಾನು ನಾನು ಸೌನ್ನ ಬಿಗ್ ಸಿನಿಮಾದಲ್ಲಿ ನಟಿಸುತ್ತೇನೆ ಅಂದಿದ್ರು. ಅದು ನಿಜ ಕೂಡ ಯಶ್ರ ಟಾಕ್ಸಿಕ್ನಲ್ಲಿ ಕಿರೀನಾ ಕಪೂರ್ ರೋಲ್ ಇದೆ. ಇದರ ಜೊತೆ ಸೌತ್ ನಟಿ ಶೃತಿ ಹಾಸನ್ ಕೂಡ ನಟಿಸುತ್ತಾರೆ. ಈ ವಿಷಯವನ್ನ ಟಾಕ್ಸಿಕ್ ಟೀಂ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ಕೊಟ್ಟಿತ್ತು. ಈಗ ಟಾಕ್ಸಿಕ್‌ಗೆ ಕಿಯಾರ ಕೂಡ ಬಂದಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಆದ್ರೆ ಅಫೀಷಿಯಲಿ ಅನೌನ್ಸ್ ಆಗಬೇಕಿದೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಏಪ್ರಿಲ್ 15 ರ ನಂತರ ಶುರುವಾಗುತ್ತೆ ಅಂತ ಹೇಳಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಯೂ ಆಗಿತ್ತು. ಆದ್ರೆ ಸೆಟ್ ವರ್ಕ್ ಮಾತ್ರ ಮುಗಿದಿಲ್ಲ. ಇದರ ಜೊತೆ ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇರೋದ್ರಿಂದ ಅವರ ಡೇಟ್ಸ್ ಹೊಂದಿಸೋಕೆ ತಡವಾಗುತ್ತಿದೆ. ಹೀಗಾಗಿ ಟಾಕ್ಸಿಕ್ ಶೂಟಿಂಗ್ ಮತ್ತೆ ಮುಂದಕ್ಕೆ ಹೋಗಿದೆ ಅಂತ ಯಶ್ ಆಪ್ತ ಬಳಕ ಮಾಹಿತಿ ಕೊಟ್ಟಿದೆ.  

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Video Top Stories