
ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
41 ವರ್ಷದ ನಟಿ ಕತ್ರಿನಾ ಕೈಫ್ 20ರ ಹರೆಯದ ಯುವತಿಯಂತೆ ಕಾಣುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವರ್ಕೌಟ್ ಮತ್ತು ಡಯಟ್ ಸೀಕ್ರೆಟ್ಗಳನ್ನು ಹಂಚಿಕೊಳ್ಳುತ್ತಾರೆ. ಕಠಿಣ ವ್ಯಾಯಾಮದ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ.
ಬಾಲಿವುಡ್ ಬ್ಯೂಟಿ , ಮಾದಕ ನಟಿ ಕತ್ರಿನಾ ಕೈಫ್ಗೆ ಈಗ 41 ವರ್ಷ ವಯಸ್ಸು. ಮದುವೆ ನಂತರವೂ ನಟನೆ ಮುಂದುವರೆಸಿರೋ ಕ್ಯಾಟ್ ಈಗಲೂ 20ರ ತರುಣಿಯಂತೆ ಕಾಣ್ತಾಳೆ. ಕತ್ರಿನಾ ಮೈಮಾಟ-ಮಾದಕ ನೋಟ ಈಗಲೂ ಪಡ್ಡೆ ಹೈಕಳಿಗೆ ನಿದ್ದೆ ಗೆಡಿಸುತ್ತೆ. ಒಂದು ರೀತಿ ಎಣ್ಣೆ ಹೊಡೆಯದೇ ನಶೆ ಏರಿಸೋ ಮೈಮಾಟ ಈ ಬ್ಯೂಟಿದು.ಲ್ಲಾ ನಟಿಮಣಿಯರು ಹೇಳುವಂತೆ ಕತ್ರಿನಾ ಕೂಡ ತನ್ನ ಬ್ಯೂಟಿ ಹಿಂದಿನ ಸೀಕ್ರೆಟ್ ವರ್ಕೌಟ್ ಮತ್ತು ಡಯಟ್ ಅಂತಾಳೆ. ಕತ್ರಿನಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಡಯಟ್ ಸೀಕ್ರೆಟ್ನ ಶೇರ್ ಮಾಡೋದ್ರ ಜೊತೆಗೆ ವರ್ಕೌಟ್ ವಿಡಿಯೋಸ್ನೂ ಶೇರ್ ಮಾಡ್ತಾ ಇರ್ತಾರೆ. ಕತ್ರಿನಾ ಸಪೂರ ಮೈಕಟ್ಟು ನೋಡಿದವರು ಈಕೆ ಇಂಥಾ ಕಠಿಣಾತಿಕಠಿಣ ವರ್ಕೌಟ್ ಮಾಡ್ತಾಳೆ ಅಂದ್ರೆ ನಂಬೋದೇ ಕಷ್ಟ. ಅಷ್ಟು ಟಫ್ ವರ್ಕೌಟ್ ಮಾಡೋ ಈ ಚೆಲುವೆ ಜಿಮ್ ನಲ್ಲಿ ಅನುದಿನ ಬೆವರಿಳಿಸ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್ ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಕಿಚ್ಚು ಹಚ್ಚಿ ನಿಗಿ ನಗಿ ಮಿನುಗ್ತಾ ಇರುತ್ವೆ.
Add Asianetnews Kannada as a Preferred Source
