Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್ ! ಧರ್ಮಕ್ಕಾಗಿ ಯುದ್ದ ಮಾಡುವ ನಟ!

‘ಹರಿಹರ ವೀರ ಮಲ್ಲು' ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಪವನ್‌ ಕಲ್ಯಾಣ್‌ ಸಖತ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan)ಸದ್ಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ‘ಹರಿಹರ ವೀರ ಮಲ್ಲು' ಚಿತ್ರದ(Hari Hara Veera Mallu) ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ(Teaser) ಸಖತ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಧರ್ಮಕ್ಕೋಸ್ಕರ ಯುದ್ಧ ಮಾಡಲು ಪವನ್ ಸಜ್ಜಾಗಿದ್ದಾರೆ.17ನೇ ಶತಮಾನದ ಮೊಘಲರು ಆಳ್ವಿಕೆಯಲ್ಲಿ ನಡೆದ ಒಂದಿಷ್ಟು ನೈಜ ಕಥೆಯನ್ನಿಟ್ಟು ಸಿನಿಮಾ ಮಾಡಲಾಗಿದ್ದು, ಇದರ ಝಲಕ್‌ ಅನ್ನು ಟೀಸರ್‌ನಲ್ಲಿ ತೋರಿಸಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಬರಲಿದೆ. 5 ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ರಾಜರು, ನವಾಬರು ಜನರ ಡುಡಿಮೆಯನ್ನು ಕಿತ್ತುಕೊಳ್ಳಲು ಬಂದರೆ ಅವರಿಂದ ಕಾಪಾಡಲು ದೇವರು ಒಂದಲ್ಲ ಒಂದು ರೂಪದಲ್ಲಿ ಬರುತ್ತಾನೆ ಎಂದು ಹಿನ್ನೆಲೆ ಧ್ವನಿ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಅದರಲ್ಲಿ ಪವನ್ ಕಲ್ಯಾಣ್ ಎಂಟ್ರಿ ಮತ್ತು ಮೊಘಲ್ ಚಕ್ರವರ್ತಿ ಆಗಿರುವ ಬಾಬಿ ಡಿಯೋಲ್ ಆಗಮನ ಖಡಕ್ ಆಗಿದೆ. ಸ್ಟಾರ್ ಕಲಾವಿದರ ದಂಡೆ ಇರುವ ಈ ಚಿತ್ರವು ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಚುನಾವಣೆ ಪ್ರಚಾರ ಜೋರಾಗಿದೆ. ಈ ಹೊತ್ತಲ್ಲಿ ಅಭಿಮಾನಿಗಳ ಗಮನ ಸೆಳೆಯಲು ಚಿತ್ರದ ಟೀಸರ್ ರಿಲೀಸ್ ಮಾಡಿ ತಂತ್ರ ರೂಪಿಸಿದ್ದಾರೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿದ್ದು , ಎ ಎಮ್ ರತ್ನಂ ನಿರ್ಮಾಣ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್? ಅಭಿಮಾನಿಗಳ ಬಹು ದಿನಗಳ ಕನಸು ಈಡೇರುತ್ತಾ..?

Related Video