Asianet Suvarna News Asianet Suvarna News

ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್? ಅಭಿಮಾನಿಗಳ ಬಹು ದಿನಗಳ ಕನಸು ಈಡೇರುತ್ತಾ..?

ಬಿಟೌನ್ ತ್ರಿ ಖಾನ್ ಸ್ಟಾರ್ಸ್ ಶಾರುಖ್ ಖಾನ್‌, ಸಲ್ಮಾನ್ , ಅಮೀರ್ ಖಾನ್ ಫ್ಯಾನ್ಸ್‌ಗೆ ದೊಡ್ಡ ಆಸೆಯೊಂದಿದೆ. ಈ ತ್ರಿವಳಿ ಖಾನ್‌ಗಳು ಒಂದೇ ಸಿನಿಮಾದಲ್ಲಿ ನಟಿಸಬೇಕು. ಆ ಫ್ರೇಮ್ಅನ್ನ ನಾವು ಕಣ್ತುಂಬಿಕೊಳ್ಳಬೇಕು ಅನ್ನೋದು. ಹೀಗಾಗಿ ಸಲ್ಲು ಶಾರುಖ್ ಅಮೀರ್ ಆದಷ್ಟು ಬೇಗ ಒಂದೇ ಸಿನಿಮಾದಲ್ಲಿ ತೆರೆ ಮೇಲೆ ಬನ್ನಿ ಅನ್ನೋ ಬೇಡಿಕೆ ಹಲವು ವರ್ಷಗಳಿಂದ ಇದೆ. 

ಈಗ ಆ ಬೇಡಿಕೆ ಮತ್ತಷ್ಟು ಗಟ್ಟಿಯಾಗಿದೆ. ಈ ತ್ರಿ ಸ್ಟಾರ್ಸ್ ಅಭಿಮಾನಿಗಳ ಬಹು ದಿನದ ಬೇಡಿಕೆ ಈಡೇರಿಸೋದಕ್ಕೆ ಸ್ಟಾರ್ ಡೈರೆಕ್ಟರ್ ಒಬ್ಬರಿಗೆ ಫ್ಯಾನ್ಸ್ ದುಂಬಾಲು ಬೀಳುತ್ತಿದ್ದಾರೆ. ಭಾರತೀಯ ಚಿತ್ರರಂಗದ ಜಕ್ಕಣ ರಾಜಮೌಳಿ(Rajamouli) ಈಗ ಇಂಡಿಯಾದ ಟಾಪ್ ಡೈರೆಕ್ಟರ್. ಇವರು ಮನಸ್ಸು ಮಾಡಿದ್ರೆ ಎಂತಾ ಸಿನಿಮಾ ಬೇಕಾದ್ರು ಮಾಡ್ತಾರೆ. ಇದನ್ನ ಅರಿತಿರೋ ಸಿನಿ ಭಕ್ತರು ಬಿಟೌನ್ನ ಟಾಪ್ ಸ್ಟಾರ್ಗಳಾದ ಶಾರುಖ್ ಖಾನ್( Shah Rukh Khan), ಅಮಿರ್ ಖಾನ್(Aamir Khan), ಸಲ್ಮಾನ್ ಖಾನ್(Salman Khan) ರನ್ನ ಒಟ್ಟಿಗೆ ತೆರೆ ಮೇಲೆ ತನ್ನಿ ಅದಕ್ಕೆ ನೀವೇ ಸರಿ ಅಂತ ರಾಜಮೌಳಿ ಮುಂದೆ ಬೇಡಿಕೆ ಇಡುತ್ತಿದ್ದಾರೆ. ನಿರ್ದೇಶಕ ರಾಜಮೌಳಿ ಈಗ ಪ್ಯಾನ್ ಇಂಡಿಯಾ ಸಿನಿಮಾ(Pan India Cinema) ಕನಸು ಬಿಟ್ಟಿದ್ದಾರೆ. ಆರ್ಆರ್ಆರ್ ಸಿನಿಮಾದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಮೇಲೆ  ಮೌಳಿಯದ್ದು ಗ್ಲೋಬಲ್ ಸಿನಿ ಇಂಡಸ್ಟ್ರಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿರೋ ರಾಜಮೌಳಿ ಆ ಸಿನಿಮಾವನ್ನ ಗ್ಲೋಬಲ್ ಮಟ್ಟದಲ್ಲಿ ತೆರೆ ಮೇಲೆ ತರೋ ಚಿಂತನೆಯಲ್ಲಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಗ್ಲೋಬಲ್ ಮಟ್ಟದಲ್ಲಿ ಗುರುತಿಸಿಕೊಂಡಿರೋ ಶಾರುಖ್, ಸಲ್ಮಾನ್, ಅಮೀರ್ಖಾನ್ರನ್ನ ಮೌಳಿ ಕರೆಸಿದ್ರು ಆಶ್ಚರ್ಯವಿಲ್ಲ. ಈ ಐಡಿಯಾವನ್ನ ರಾಜಮೌಳಿಯ  ಫಾಲೋರ್ಸೇ ಕೊಡುತ್ತಿದ್ದಾರೆ. ಈ ಚಿತ್ರರಂಗದಲ್ಲಿ ಕಾಂಪಿಟೇಷನ್ ಹೆಚ್ಚಾಗಿದೆ. ಎಲ್ಲಾ ಸಿನಿ ಇಂಡಸ್ಟ್ರಿಯಲ್ಲೂ ಮಲ್ಟಿ ಸ್ಟಾರ್ಸ್ ಸಿನಿಮಾ ಬರುತ್ತಿವೆ. ಕಲ್ಕಿಯಲ್ಲಿ ಬಿಗ್ ಸ್ಟಾರ್ಸ್ ಇದ್ದಾರೆ ಕಾಂತಾರ 2ಗೆ ದೊಡ್ಡ ಕಲಾವಿಧರ ದಂಡು ಸೇರುತ್ತಾರೆ. ಟಾಕ್ಸಿಕ್ನಲ್ಲಿ ಬಿಗ್ ಸ್ಟಾರ್ ನಟಿಸುತ್ತಾರೆ. ಇದನ್ನೆಲ್ಲಾ ನೋಡಿದ್ರೆ ರಾಜಮೌಳಿ ಯಾರು ಮಾಡದ ಡಿಫ್ರೆಂಟ್ ಕ್ಯಾರೆಕ್ಟರ್ಗಳನ್ನ ತನ್ನ ಸಿನಿಮಾದಲ್ಲಿ ತೋರಿಸೋ ಸಾಹಸಕ್ಕೆ ಕೈ ಹಾಕಿದ್ರು ಆಶ್ಚರ್ಯವೇನಿಲ್ಲ. ಬಟ್ ಇದೆಲ್ಲಾ ಸಾಧ್ಯವಾಗೋದು ಯಾವಾಗ ಅನ್ನೋದೇ ಈಗಿರೋ ಕುತೂಹಲ.

ಇದನ್ನೂ ವೀಕ್ಷಿಸಿ:  Puneeth Rajkumar : ಅಪ್ಪು ನಿಧನಕ್ಕೆ ಕೋವಿಡ್ ಲಸಿಕೆ ಕಾರಣವಾಯ್ತಾ? ಫೋಟೋ ಶೇರ್‌ ಮಾಡಿ ಫ್ಯಾನ್ಸ್ ಮತ್ತೆ ಆಕ್ರೋಶ!