
Drishyam Hollywood Remake: ಹಾಲಿವುಡ್‌ಗೆ ರಿಮೇಕ್ ಆಗುತ್ತಿದೆ ರವಿಚಂದ್ರನ್ ಸಿನಿಮಾ..ಯಾವುದು ಆ ಚಿತ್ರ ಗೊತ್ತಾ ?
ನಟ ರವಿಚಂದ್ರನ್ ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ ರಿಮೇಕ್ ಆಗುತ್ತಿದೆಯಂತೆ.
ನಟ ರವಿಚಂದ್ರನ್ (Ravichandran) ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ(Hollywood) ರಿಮೇಕ್ ಆಗುತ್ತಿದೆಯಂತೆ. ಇದಕ್ಕಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆಯಂತೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗಿದ್ದು, ಮಲಯಾಳಂ, ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದೆ. ಇದು ಮೂಲ ಮಲಯಾಳಂ ಸಿನಿಮಾವಾಗಿದ್ದು, ಮೋಹನ್ಲಾಲ್, ಮೀನಾ ಮುಂತಾದವರು ನಟಿಸಿದ್ದರು. ‘ದೃಶ್ಯಂ’(Drishyam) ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಬಳಿಕ ಇದೇ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಯಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಗುಡ್ ನ್ಯೂಸ್ ಕೊಟ್ಟ ದೀಪಿಕಾ- ರಣವೀರ್ ! ಅಪ್ಪ ಅಮ್ಮನಾಗುತ್ತಿರೋ ಸುದ್ದಿ ಡಿಫರೆಂಟಾಗಿ ಅನೌನ್ಸ್ ಮಾಡಿದ ಸ್ಟಾರ್ ದಂಪತಿ!