ಇದೇನಾ ಸ್ತ್ರೀ ವಾದ: ದೀಪಿಕಾ ಮೇಲೆ ಸಂದೀಪ್ ರೆಡ್ಡಿ ವಂಗಾ ಕಿಡಿ, ಸ್ಪಿರಿಟ್ ಚಿತ್ರದ ಕಥೆ ಲೀಕ್ ಮಾಡಿದ್ರಾ ದೀಪಿಕಾ?

ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಿಂದ ದೀಪಿಕಾ ಪಡುಕೋಣೆ ಹೊರಬಿದ್ದ ನಂತರ, ಚಿತ್ರದ ಕಥೆಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ದೀಪಿಕಾ ವಿರುದ್ಧ ಕಿಡಿ ಕಾರಿದ್ದಾರೆ. 

Share this Video
  • FB
  • Linkdin
  • Whatsapp

ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಔಟ್ ಆದ ಬೆನ್ನಲ್ಲೇ ಆಕೆ ಮೇಲೆ ದೊಡ್ಡದೊಂದು ಆರೋಪ ಕೇಳಿಬಂದಿದೆ. ಸಿನಿಮಾ ಕೈ ತಪ್ಪಿದ ಕೋಪದಲ್ಲಿ ದೀಪಿಕಾ ಸಿನಿಮಾ ಕಥೆಯನ್ನ ಲೀಕ್ ಮಾಡಿದ್ದಾರಂತೆ. ಈ ಬಗ್ಗೆ ಗರಂ ಆಗಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದೇನಾ ನಿನ್ನ ಸ್ತ್ರೀ ವಾದ.. ಅಂತ ದೀಪಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಸ್ಪಿರಿಟ್ ವಾರ್..? ಆ ಕುರಿತ ಸ್ಟೋರಿ ಇಲ್ಲಿದೆ ನೊಡಿ..

ಯೆಸ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ದೀಪಿಕಾ ಪಡುಕೋಣೆ ಮೇಲೆ ಕಿಡಿ ಕಾರಿದ್ದಾರೆ. ಕನ್ನಡತಿ ದೀಪಿಕಾ ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ನಂಬರ್ 1 ನಟಿಯಾಗಿ ಮೆರೆದಾಕೆ. ಇತ್ತ ಸಂದೀಪ್ ರೆಡ್ಡಿ ವಂಗಾ ಏನೂ ಕಮ್ಮಿ ಅಲ್ಲ. ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಮತ್ತು ಅನಿಮಲ್ ನಂತಹ ಬ್ಲಾಕ್ ಬಸ್ಟರ್ ಹಿಟ್​ಗಳನ್ನ ಕೊಟ್ಟ ಸ್ಟಾರ್ ನಿರ್ದೇಶಕ. ಸದ್ಯ ಸ್ಟಾರ್ ಡೈರೆಕ್ಟರ್ ಸ್ಟಾರ್ ನಟಿ ಡಿಪ್ಪಿ ಮೇಲೆ ಗರಂ ಆಗಿದ್ದಾರೆ.

ಅಸಲಿಗೆ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಜೊತೆಗೆ ಸ್ಪಿರಿಟ್ ಅನ್ನೋ ಸಿನಿಮಾ ಮಾಡ್ತಾ ಇದ್ದಾರೆ. ಈ ಬಹುನಿರೀಕ್ಷೆಯ ಸಿನಿಮಾಗೆ ದೀಪಿಕಾ ನಾಯಕಿಯಾಗಿ ಆಯ್ಕೆ ಆಗಿದ್ರು. ದೀಪಿಕಾ ಪ್ರಗ್ನೆನ್ಸಿ ಕಾರಣಕ್ಕೆ ಚಿತ್ರತಂಡ ಕೆಲ ತಿಂಗಳು ವೇಟ್ ಕೂಡ ಮಾಡಿತ್ತು. ಆದ್ರೆ ಕೊನೆ ಹಂತದಲ್ಲಿ ನಿರ್ದೇಶಕ ವಂಗಾ ಮತ್ತು ದೀಪಿಕಾ ನಡುವೆ ಕ್ಲ್ಯಾಶ್ ಆಗಿದೆ. ದೀಪಿಕಾ ಹಾಕಿದ್ದ ಷರತ್ತುಗಳನ್ನ ಕೇಳಿ ಗರಂ ಆಗಿದ್ದ ವಂಗಾ ದೀಪಿಕಾರನ್ನ ಚಿತ್ರದಿಂದ ಕಿತ್ತು ಹಾಕಿದ್ರು.

ಹೊಟ್ಟೆ ಕಿಚ್ಚಿನಿಂದ ಚಿತ್ರದ ಕಥೆ ಲೀಕ್ ಮಾಡಿದ್ರಾ ದೀಪಿಕಾ..?
ಯೆಸ್ ತಮ್ಮನ್ನ ಚಿತ್ರದಿಂದ ಕಿತ್ತು ಹಾಕಿದ ನಿರ್ದೇಶಕನ ವಿರುದ್ದ ದೀಪಿಕಾ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗ್ತಾ ಇದೆ. ದೀಪಿಕಾ ಪಡುಕೋಣೆ ಸ್ಪಿರಿಟ್ ಚಿತ್ರದ ಕಥೆಯನ್ನ ಲೀಕ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳು ಇದ್ದು, ಸಿನಿಮಾಗೆ ಎ ಸರ್ಟಿಫಿಕೇಟ್ ಸಿಗುತ್ತೆ ಅಂತ ದೀಪಿಕಾ ಆಪ್ತ ವಲಯದಲ್ಲಿ ರಿವೀಲ್ ಮಾಡಿದ್ದಾರಂತೆ. ಚಿತ್ರದ ಕಥೆಯನ್ನು ಕೂಡ ಹೇಳಿದ್ದಾರೆ. ದೀಪಿಕಾ ಆಪ್ತರು ಇದನ್ನ ಇನ್ನಷ್ಟು ಮಂದಿಗೆ ಹೇಳಿದ್ದು, ಚಿತ್ರದ ಪ್ರಮುಖ ವಿಷಯಗಳೇ ಸೋರಿಕೆ ಆಗಿದೆ.

ತಮ್ಮ ಸಿನಿಮಾದ ಕಥೆ ದೀಪಿಕಾಳಿಂದಲೇ ಲೀಕ್ ಆಗಿದೆ ಅನ್ನೋದನ್ನ ಅರಿತುಕೊಂಡಿರೋ ಸಂದೀಪ್ ರೆಡ್ಡಿ ವಂಗಾ ಆಕ್ರೋಶದಿಂದ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ನೇರವಾಗಿ ದೀಪಿಕಾ ಹೆಸರು ಹೇಳದೇ ಇದ್ದರೂ ಇದೇನಾ ನಿನ್ನ ಸ್ತ್ರೀವಾದ ಅಂತ ಬರೆದಿರೋದನ್ನ ನೋಡಿದ್ರೆ ಇದು ಸ್ತ್ರೀವಾದಿ ದೀಪಿಕಾಗಲ್ಲದೇ ಬೇರ್ಯಾರಿಗೂ ಹೇಳಿದ್ದಲ್ಲ ಅನ್ನೋದು ಜಗಜ್ಜಾಹೀರಾಗಿದೆ.

ಸಂದೀಪ್ ರೆಡ್ಡಿ ವಂಗಾ ಪೋಸ್ಟ್ : 
ನಾನು ಓರ್ವ ಕಲಾವಿದನಿಗೆ ಕಥೆ ಹೇಳುವಾಗ ಸಂಪೂರ್ಣ ನಂಬಿಕೆ ಇಡುತ್ತೇನೆ. ಯಾರಿಗೂ ಕಥೆಯನ್ನು ಹೇಳಬಾರದು ಎಂಬ ಒಪ್ಪಂದ ಇರುತ್ತದೆ. ಆದರೆ ನೀವು ನಿಯಮ ಮುರಿಯುವ ಮೂಲಕ ನಿಮ್ಮ ಸಣ್ಣತನವನ್ನು ನೀವು ಬಹಿರಂಗಪಡಿಸಿದ್ದೀರಿ. . ಕಿರಿಯ ಕಲಾವಿದರನ್ನು ಕೆಳಕ್ಕೆ ಹಾಕಿದ್ದಲ್ಲದೆ, ನನ್ನ ಕಥೆಯನ್ನು ರಿವೀಲ್ ಮಾಡಿದ್ದೀರಿ 
ಇದೇನಾ ನಿಮ್ಮ ಸ್ತ್ರೀವಾದ? ಒಬ್ಬ ನಿರ್ದೇಶಕನಾಗಿ ನಾನು ಸಾಕಷ್ಟು ಶ್ರಮ ಹಾಕಿರುತ್ತೇನೆ. ನಿಮಗೆ ಇದು ಅರ್ಥ ಆಗಿಲ್ಲ, ಆಗುವುದೂ ಇಲ್ಲ. ಮುಂದಿನ ಬಾರಿ ಪೂರ್ತಿ ಕಥೆಯನ್ನೇ ಹೇಳಿ. ನನಗೆ ಏನೂ ಫರಕ್ ಆಗುವುದಿಲ್ಲ.

ಯೆಸ್ ಸಂದೀಪ್ ರೆಡ್ಡಿ ವಂಗಾ ಇಂಥದ್ದೊಂದು ಪೋಸ್ಟ್ ಹಾಕುವುದರೊಂದಿಗೆ ಸಿನಿಲೋಕದಲ್ಲಿ ಸಂಚಲನ ಶುರುವಾಗಿದೆ. ದೀಪಿಕಾ ಮೇಲೆ ಕಿಡಿ ಕಾರಿರೋ ಸಂದೀಪ್​ ಬೆಂಬಲಕ್ಕೆ ಅನೇಕರು ನಿಂತುಕೊಂಡಿದ್ದಾರೆ. ಇನ್ನೂ ಈ ಆರೋಪದ ಬಗ್ಗೆ ದೀಪಿಕಾ ಏನ್ ಹೇಳ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. 

Related Video