ಸಂಭಾವನೆಯಲ್ಲಿ ವಿಜಯ್-ರಜನಿಕಾಂತ್‌ ಮಧ್ಯೆ ಬಿಗ್ ಫೈಟ್! ದಳಪತಿ ಮೊದಲ ಸಿನಿಮಾ ಸಂಭಾವನೆ ಎಷ್ಟು ?

ದಳಪತಿ ವಿಜಯ್.. ಕಾಲಿವುಡ್‌ನ ಟ್ರೆಂಡಿಗ್ ಸೂಪರ್ ಸ್ಟಾರ್.. ಅರೆ ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್ ಅಲ್ವಾ ಅಂತ ನೀವ್ ಹೇಳ್ಬಹುದು. ಅದು ನಿಜಾ ಕೂಡ. ಆದ್ರೆ ಈ ಸೂಪರ್ ಸ್ಟಾರ್ ಪಟ್ಟಕ್ಕಾಗಿ ವಿಜಯ್ ಫ್ಯಾನ್ಸ್ ರಜನಿ ಕಾಂತ್ ಫ್ಯಾನ್ಸ್ ಜೊತೆ ಕಿತ್ತಾಡಿದ್ರು. ಯಾಕಂದ್ರೆ ತಲೈವಾ ರಜನಿಗಿಂತು ಹೆಚ್ಚು ಕಲೆಕ್ಷನ್ ಮಾಡೋ ಸಿನಿಮಾಗಳನ್ನ ವಿಜಯ್ ಕೊಡುತ್ತಿದ್ದಾರೆ. ಹೀಗಾಗಿ ಸೂಪರ್ ಸ್ಟಾರ್ ವಿಜಯ್ ಅಂತ ಕರೆಯೋಕೆ ಶುರು ಮಾಡಿದ್ರು ಫ್ಯಾನ್ಸ್.

Share this Video
  • FB
  • Linkdin
  • Whatsapp

ಈಗ ಕಾಲಿವುಡ್ ಸೂಪರ್ ಸ್ಟಾರ್ ಅಂತ ಫ್ಯಾನ್ಸ್‌ಗಳಿಂದ ಕರೆಸಿಕೊಳ್ತಿರೋ ವಿಜಯ್(Dalpati Vijay) ತನ್ನ ಮೊದಲ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ರು ಗೊತ್ತಾ.? ಜೆಸ್ಟ್ 500 ರೂಪಾಯಿ. ವಿಜಯ್ ವೆಟ್ರಿ ಸಿನಿಮಾದಿಂದ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ವೆಟ್ರಿ ಸಿನಿಮಾದಲ್ಲಿ ವಿಜಯ್‌ಗೆ ಸಿಕ್ಕಿದ್ದು ಬರೀ 500 ರೂಪಾಯಿ ಸಂಭಾವನೆ(Remuneration) ಅಷ್ಟೆ. ಆದ್ರೆ ಇಂದು ಇಂದು ಇದೇ ವಿಜಯ್ ಸಂಭಾವನೆ 100 ಕೋಟಿ ದಾಟಿದೆ. ಕಾಲಿವುಡ್‌ನಲ್ಲಿ ಈಗ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ಸ್ ದಳಪತಿ ವಿಜಯ್. ಆದ್ರೆ ಈ ವಿಷಯದಲ್ಲಿ ರಜನಿಕಾಂತ್‌(Rajinikanth) ಹಾಗೂ ವಿಜಯ್ ಮಧ್ಯೆ ಆಗಾಗ ಕಾಂಪಿಟೇಷನ್ ಆಗ್ತಾನೆ ಇರುತ್ತೆ. ವಿಜಯ್ ವಾರಿಸು ಸಿನಿಮಾಗೆ 125 ಕೋಟಿ ಸಂಭಾವನೆ ಪಡೆದಿದ್ರು. ಆದ್ರೆ ಈಗ ಬಿಡುಗಡೆಗೆ ಸಿದ್ಧವಾಗಿರೊ ಲೀಯೋ ಸಿನಿಮಾಗೆ 120 ಕೋಟಿ ಸಂಭಾವನೆ ಪಡೆದಿದ್ದಾರೆಂತೆ ವಿಜಯ್. ಈ ಕಡೆ ತಲೈವ ರಜನಿಕಾಂತ್ ಜೈಲರ್ ಸಿನಿಮಾದಿಂದ ಮತ್ತೆ ಮೇಲುಗೈ ಸಾಧಿಸಿದ್ದಾರೆ. ರಜನಿ ಜೈಲರ್ಗಾಗಿ ಮೊದಲು ಪಡೆದಿದ್ದು 100 ಕೋಟಿ ಸಂಭಾವನೆ. ಆದ್ರೆ ಈ ಮೂವಿ ಮೆಘಾ ಹಿಟ್ ಆಗಿದ್ದಕ್ಕೆ ನಿರ್ಮಾಪಕರು ರಜನಿ ಜೋಳಿಗೆಗೆ ಎಕ್ಸ್ಟ್ರಾ 50 ಕೋಟಿ ಸೇರಿಸಿದ್ದಾರೆ. ಹೀಗೆ ಒಮ್ಮೆ ರಜನಿ ಮತ್ತೊಮ್ಮೆ ವಿಜಯ್ ಮಧ್ಯೆ ಸಂಭಾವನೆ ವಿಷಯದಲ್ಲಿ ಪೈಪೋಟಿ ಏರ್ಪಡ್ತಾನೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಟಾಲಿವುಡ್ ಡಾರ್ಲಿಂಗ್ ಇನ್ಸ್ಟಾ ಮಾಯ ! ಹ್ಯಾಕ್ ಆಗಿತ್ತಾ ಬಾಹುಬಲಿಯ ಇನ್ಸ್ಟಾಗ್ರಾಮ್ ಖಾತೆ?

Related Video