ಟಾಲಿವುಡ್ ಡಾರ್ಲಿಂಗ್ ಇನ್ಸ್ಟಾ ಮಾಯ ! ಹ್ಯಾಕ್ ಆಗಿತ್ತಾ ಬಾಹುಬಲಿಯ ಇನ್ಸ್ಟಾಗ್ರಾಮ್ ಖಾತೆ?

ಹ್ಯಾಕ್ ಆಗಿತ್ತಾ ಬಾಹುಬಲಿಯ ಇನ್ಸ್ಟಾ ಖಾತೆ?
ಪ್ರಭಾಸ್‌ಗಿದ್ದಾರೆ 10 ಮಿಲಿಯನ್ಸ್ ಫಾಲೋವರ್ಸ್!
ಪ್ರಭಾಸ್ ಇನ್ಸ್ಟಾ 2 ದಿನ ಮಾಯವಾಗಿದ್ದೇಕೆ..?

First Published Oct 17, 2023, 10:23 AM IST | Last Updated Oct 17, 2023, 10:23 AM IST

ಸ್ಟಾರ್ ಹೀರೋಗಳಿಗೆ ಫ್ಯಾನ್ಸ್ ಜೊತೆ ಕಮ್ಯೂನಿಕೇಷನ್‌ಗೆ ಈಗ ಹೆಚ್ಚು ಬಳಕೆ ಆಗ್ತಿರೋ ಫ್ಲಾಟ್ ಫಾರ್ಮ್ ಇನ್ಸ್ಟಾಗ್ರಾಮ್(Instagram). ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್(Prabhas) ಕೂಡ  ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟವರೇ. ಪ್ರಭಾಸ್‌ಗೆ ಇನ್ಸ್ಟಾದಲ್ಲಿ ಬರೋಬ್ಬರಿ 10.5 ಮಿಲಿಯನ್ಸ್ ಫಾಲೋವರ್ಸ್ ಇದ್ದಾರೆ. ಆದ್ರೆ ಕಳೆದ ಎರಡು ದಿನ ಪ್ರಭಾಸ್ ಇನ್ಸ್ಟಾ ಖಾತೆ ಕಣ್ಮರೆಯಾಗಿತ್ತು. ಇದ್ದಕ್ಕಿದ್ದಂತೆ ಪ್ರಭಾಸ್ ಇನ್ಸ್ಟಾದಲ್ಲಿ ಮಾಯ ಆಗಿದ್ರು. ಇದ್ರಿಂದ ತಲೆ ಕೆಡಿಸಿಕೊಂಡಿದ್ದ ಫ್ಯಾನ್ಸ್, ಪ್ರಭಾಸ್ ಅಕೌಂಟ್ ಹ್ಯಾಕ್(Hack) ಆಗಿದೆ ಅಂತ ಬಾಯ್ ಬಡ್ಕೊಂಡಿದ್ರು. ಆದ್ರೆ ಎರಡು ದಿನದ ಬಳಿಕ ಪ್ರಭಾಸ್ ಮತ್ತೆ  ಇನ್ಸ್ಟಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಪ್ರಭಾಸ್ ಬೇಕು ಅಂತಲೇ ಇನ್ಸ್ಟಾ ಖಾತೆಯನ್ನ ಹೈಡ್ ಮಾಡಿದ್ರಾ ? ಅಥವಾ ಪ್ರಭಾಸ್  ಇನ್ಸ್ಟಾದಿಂದ ಅನ್‌ಯಾಕ್ಟೀವ್ ಆಗ್ತಾರಾ.? ಇದು ಹ್ಯಾಕರ್ ಕೈಚಳ ಇರಬಹುದಾ.? ಅಂತ ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಘೋಸ್ಟ್ ಸುದ್ದಿಗೋಷ್ಠಿಯಲ್ಲಿ ಅಮ್ಮನ ನೆನಪಲ್ಲಿ ಶಿವಣ್ಣ! ಹ್ಯಾಟ್ರಿಕ್‌ ಹಿರೋ ಆನಂದ್ ಲುಕ್ ಹೇಗೆ ಸೃಷ್ಟಿಯಾಯ್ತು ?