Actress Malaika Arora: ಹೈ ಹೀಲ್ಸ್ ಧರಿಸಿ ಜಾರಿದ ಬಾಲಿವುಡ್ ನಟಿ
ನಟಿ ಮಲೈಕಾ ಅರೋರಾ ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅನೇಕ ಐಟಂ ಸಾಂಗ್ಗಳಲ್ಲಿ ಮಲೈಕಾ ಅರೋರಾ ಮಿಂಚು ಹರಿಸಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ನಟಿ ಮಲೈಕಾ ಅರೋರಾ (Malaika Arora) ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ (Bollywood) ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅನೇಕ ಐಟಂ ಸಾಂಗ್ಗಳಲ್ಲಿ ಮಲೈಕಾ ಅರೋರಾ ಮಿಂಚು ಹರಿಸಿದ್ದಾರೆ. ಜೊತೆಗೆ ಫಿಟ್ನೆಸ್ ಬಗ್ಗೆ ಮಲೈಕಾ ಹೆಚ್ಚು ಕಾಳಜಿ ವಹಿಸುತ್ತಾರೆ. ಜಿಮ್ನಲ್ಲಿ ವರ್ಕೌಟ್ ಮಾಡುವ ಅವರು, ಯೋಗಾಸನದಲ್ಲೂ ಪಳಗಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೋಲ್ (Troll) ಆಗಿದ್ದಾರೆ. ಹೌದು! ಇತ್ತೀಚೆಗಷ್ಟೇ ಮಲೈಕಾ ಕಾರಿನಿಂದ ಇಳಿಯುವಾಗ ಕೊಂಚ ಇಳಿಜಾರು ಇದ್ದ ಕಾರಣ ಜಾರಿದರು. ಮೊದಲೇ ಹೈ ಹೀಲ್ಸ್ ಶೂ ಧರಿಸಿದ್ದರಿಂದ ಮಲೈಕಾ ಅರೋರಾ ಜಾರಿಬಿಟ್ಟರು.
Aamir Khan Wedding: 3ನೇ ಮದುವೆ ಆದ್ರಾ ಮಿ.ಪರ್ಫೆಕ್ಷನಿಸ್ಟ್?
ಆಗ ಪಕ್ಕದಲ್ಲೇ ಇದ್ದ ಒಬ್ಬರು ಮಲೈಕಾರನ್ನು ಹಿಡಿದುಕೊಂಡರು. ಈ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಾರಿನಿಂದ ಇಳಿಯುವಾಗ ಮಲೈಕಾ ಅರೋರಾ ಜಾರಿದ ವಿಡಿಯೋ ನೋಡುತ್ತಿದ್ದಂತೆಯೇ, ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಇನ್ನು ಈ ಸಮಯದಲ್ಲಿ ಮಲೈಕಾ ಹಸಿರು ಬಣ್ಣದ ಮಿನಿ ಶಾರ್ಟ್ಸ್ ಹಾಗೂ ಜ್ಯಾಕೆಟ್ ಅನ್ನು ಧರಿಸಿದ್ದರು. ಜೊತೆಗೆ ಬಿಳಿ ಬಣ್ಣದ ಹೈ ಹೀಲ್ಸ್ ಶೂವನ್ನೂ ಹಾಕಿಕೊಂಡಿದ್ದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment