Asianet Suvarna News Asianet Suvarna News

ಮಾಧ್ಯಮದ ಮುಂದೆ ಆಲಿಯಾ ಭಟ್: ತಾಯಿಯಾದರೂ ಮಗುವಿನಂತೆ ಕಾಣೋ ಬಿ-ಟೌನ್ ನಟಿ

ಒಂದು ಮಗುವಿನ ತಾಯಿಯಾದರೂ ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಚಾರ್ಮ್‌ ಅನ್ನು ಕಳೆದುಕೊಳ್ಳದೇ ಅಷ್ಟೇ ಸುಂದರವಾಗಿದ್ದಾರೆ. ಅಂದಹಾಗೆ ಕಳೆದ ನವೆಂಬರ್‌ನಲ್ಲಿ ಆಲಿಯಾ ಭಟ್‌ ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗುವಾಗಿತ್ತು.

ಒಂದು ಮಗುವಿನ ತಾಯಿಯಾದರೂ ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಚಾರ್ಮ್‌ ಅನ್ನು ಕಳೆದುಕೊಳ್ಳದೇ ಅಷ್ಟೇ ಸುಂದರವಾಗಿದ್ದಾರೆ. ಅಂದಹಾಗೆ ಕಳೆದ ನವೆಂಬರ್‌ನಲ್ಲಿ ಆಲಿಯಾ ಭಟ್‌ ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗುವಾಗಿತ್ತು. ಮಗುವಿನ ಲಾಲನೆ ಪಾಲನೆ ಜೊತೆಗೆ ಆಲಿಯಾ ಮತ್ತೆ ಫಿಟ್‌ನೆಸ್ ಬಗ್ಗೆ ಒತ್ತುಕೊಟ್ಟಿದ್ದು ವ್ಯಾಯಾಮವನ್ನು ಪ್ರಾರಂಭಿಸಿ ಸಖಟ್ ಫಿಟ್‌ ಆಗಿದ್ದಾರೆ. ಈ ಮೂಲಕ ಮತ್ತೆ ಚಿತ್ರರಂಗಕ್ಕೆ ತಾನು ಮರಳುತ್ತೆನೆಂದು ಉತ್ತರ ಕೊಟ್ಟಿದ್ದಾರೆ. ಇನ್ನು ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು.  ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

Video Top Stories