Asianet Suvarna News Asianet Suvarna News

ಡಂಕಿ ಸಿನಿಮಾ ನೋಡಲು ವಿದೇಶದಿಂದ ಬರ್ತಿದ್ದಾರೆ ಜನ: ಶಾರುಕ್ ಖಾನ್ ಸಿನಿಮಾದಲ್ಲಿ ಅಂಥಾದ್ದೇನಿದೆ?

ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಗಳಿಗೆ ಜವಾನ್ ಮತ್ತು ಪಠಾಣ್ ಹಿಟ್ ಆದ್ಮೇಲೆ ಕ್ರೇಜ್ ಇನ್ನೂ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಡಂಕಿ ಸಿನಿಮಾ ಫ್ಯಾನ್ಸ್ ನಿರೀಕ್ಷೆ ಹೆಚ್ಚಿದೆ. ಇದನ್ನ ನೋಡಲು ಎಲ್ಲರೂ ಸಜ್ಜಾಗಿದ್ದಾರೆ.

ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಗಳಿಗೆ ಜವಾನ್ ಮತ್ತು ಪಠಾಣ್ ಹಿಟ್ ಆದ್ಮೇಲೆ ಕ್ರೇಜ್ ಇನ್ನೂ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಡಂಕಿ ಸಿನಿಮಾ ಫ್ಯಾನ್ಸ್ ನಿರೀಕ್ಷೆ ಹೆಚ್ಚಿದೆ. ಇದನ್ನ ನೋಡಲು ಎಲ್ಲರೂ ಸಜ್ಜಾಗಿದ್ದಾರೆ. ಆದರೆ ವಿದೇಶದಲ್ಲಿರೋ ಫ್ಯಾನ್ಸ್ ಕೂಡ ಈ ಚಿತ್ರ ನೋಡೋಕೆ ಕಾತರಿಸುತ್ತಿದ್ದಾರೆ. ಡಂಕಿ ಸಿನಿಮಾದ ಕ್ರೇಜ್ ಜೋರಾಗುತ್ತಿದೆ. ಇದನ್ನ ನೋಡಲೇಬೇಕು ಅಂತ ಫ್ಯಾನ್ಸ್ ವಿದೇಶದಿಂದಲೂ ಬರ್ತಿದ್ದಾರೆ. ಡಿಸೆಂಬರ್ -21 ರ ಮುಂಚೇನೆ ಬಂದು ಇಂಡಿಯಾದಲ್ಲಿ ಈ ಚಿತ್ರ ನೋಡಲಿದ್ದಾರೆ. ಹಾಗೆ ಕೆನಡಾ, ಯುಎಸ್ಎ, ಯುಎ ಹಾಗೂ ನೇಪಾಳದಿಂದಲೂ ಈ ಚಿತ್ರ ನೋಡೋಕೆ ನೂರಾರು ಫ್ಯಾನ್ಸ್ ಬರ್ತಿದ್ದಾರೆ. ಡಂಕಿ ..ಕಾನೂನು ಬಾಹಿರವಾಗಿ ವಿದೇಶಕ್ಕೆ ಹೋದ್ರೆ ಏನಾಗುತ್ತದೆ ಅನ್ನೋದೇ ಒಟ್ಟು ಕಥೆ . ರಾಜಕುಮಾರ್ ಹಿರಾನಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಶಾರೂಖ್ಗೆ ತಾಪ್ಸಿ ಜೋಡಿಯಾಗಿದ್ದಾರೆ. ಈ ಚಿತ್ರದ ಟ್ರೈಲರ್ ಹೆಚ್ಚು ಗಮನ ಸೆಳೆದಿದೆ. ಪಠಾಣ್, ಜವಾನ್ ನಂತರ ಡಂಕಿ ಮೂಲಕ ಶಾರುಖ್ ಖಾನ್ ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದ್ದಾರೆ.

Video Top Stories