ಇದೇನು..? ಬಿಗ್‌ ಬಾಸ್‌ ಹೋಸ್ಟ್ ಸಲ್ಮಾನ್ ಖಾನ್ ಬಗ್ಗೆಯೇ ಹೊಸ ನ್ಯೂಸ್? ನಿಜನಾ ಸುಳ್ಳಾ?

ಈ ವಿಡಿಯೋಗಳು ವೈರಲ್ ಆಗ್ತಾ ಇದ್ದು, ಇದನ್ನ ನೋಡಿದವರು ಸಲ್ಮಾನ್ ಟೈಟ್ ಆಗಿ ವೇದಿಕೆ ಏರಿದ್ದಾರೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಸಲ್ಲು ಬಾಡಿ ಲ್ಯಾಂಗ್ವೇಜ್‌ ನೋಡಿದ ಹಲವರು ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಬಂದು ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ ಅಂತ ಹುಯಿಲೆಬ್ಬಿಸಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್​ನ ಬಾಕ್ಸಾಫೀಸ್ ಸುಲ್ತಾನ ಖಾನ್ ಹವಾ ಇತ್ತೀಚಿಗೆ ಕಮ್ಮಿಯಾಗಿದೆ. ಆದ್ರೆ ಬಿಗ್ ಸ್ಕ್ರೀನ್​ನಲ್ಲಿ ಸಲ್ಲು ಮೋಡಿ ಕಡಿಮೆಯಾದ್ರೂ ಕಿರುತೆರೆ ಬಿಗ್​ಬಾಸ್​​ ನಲ್ಲಿ ಅವರ ಖದರ್ ಮುಂದುವರೆದಿದೆ. ಆದ್ರೆ ಕಳೆದ ವಾರಾಂತ್ಯದ ಎಪಿಸೋಡ್​ನಲ್ಲಿ ಸಲ್ಲುಮಿಯಾನ ಅವತಾರ ನೋಡಿದವರು ಒಂದು ದೊಡ್ಡ ಆರೋಪ ಮಾಡ್ತಾ ಇದ್ದಾರೆ. ಏನದು..? ಈ ಸ್ಟೋರಿ ನೋಡಿ.

ಯೆಸ್ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಈಗ ಮೊದಲಿನ ಫಾರ್ಮ್​​ನಲ್ಲಿ ಇಲ್ಲ. ಇತ್ತೀಚಿಗೆ ಬಂದ ಸಲ್ಲುಮಿಯಾ ನಟನೆಯ ಸಾಲು ಸಾಲು ಸಿನಿಮಾಗಳು ನೆಲಕಚ್ಚಿವೆ. ಒಂದೊಮ್ಮೆ ಬಾಕ್ಸಾಫೀಸ್ ಸುಲ್ತಾನ್ ಅನ್ನಿಸಿಕೊಂಡಿದ್ದ ಸಲ್ಮಾನ್ ಈಗ ಆ ಪಟ್ಟ ಕಳೆದುಕೊಂಡಿದ್ದಾರೆ.

ಬಿಗ್ ಸ್ಕ್ರೀನ್​ನಲ್ಲಿ ಸಲ್ಮಾನ್ ಖದರ್ ಕಡಿಮೆಯಾದರೂ ಸ್ಮಾಲ್ ಸ್ಕ್ರೀನ್​ನಲ್ಲಿ ಮಾತ್ರ ಇವರ ಮ್ಯಾಜಿಕ್ ಮುಂದುವರೆದಿದೆ. ಕಳೆದ 15 ವರ್ಷಗಳಿಂದಲೂ ಬಿಗ್​ಬಾಸ್ ಹೋಸ್ಟ್ ಮಾಡ್ತಾ ಬಂದಿರೋ ಸಲ್ಮಾನ್, ಈ ಸಾರಿನೂ ಬಿಗ್​ಬಾಸ್ ಹಿಂದಿ ಶೋ ನಡೆಸಿಕೊಡ್ತಾ ಇದ್ದಾರೆ.

ಆದ್ರೆ ಕಳೆದ ವೀಕೆಂಡ್ ಎಪಿಸೋಡ್​ನಲ್ಲಿ ಸಲ್ಲುಮಿಯಾನ ನೋಡಿದವರು ಒಂದು ಆರೋಪ ಮಾಡ್ತಾ ಇದ್ದಾರೆ. ಸಲ್ಮಾನ್​ಗೆ ಇತ್ತೀಚಿಗೆ ಯಾವುದರಲ್ಲೂ ಆಸಕ್ತಿ ಉಳಿದಿಲ್ಲ. ಬಿಗ್ ಬಾಸ್ ಹೋಸ್ಟ್ ಮಾಡ್ಲಿಕ್ಕೆ ಅವರು ಮಧ್ಯಪಾನ ಮಾಡಿ ಬಂದಿದ್ದಾರೆ ಅಂತ ಆರೋಪ ಮಾಡ್ತಾ ಇದ್ದಾರೆ.

ಎಂದಿನಂತೆ ಕಳೆದ ವಾರ ಕೂಡ ಸಲ್ಮಾನ್ ಖಾನ್ ''ವೀಕೆಂಡ್ ಕಾ ವಾರ್'' ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದರು. ಕಿರಿಕ್ ಮಾಡಿದ ಸ್ಫರ್ಧಿಗಳಿಗೆ ಬೆಂಡೆತ್ತಿದರು. ಆದರೆ, ಇದೇ ಸಮಯದಲ್ಲಿ ಅವರ ಹಾವ ಭಾವದಲ್ಲಿ ಬದಲಾವಣೆ ಕಂಡು ಬಂದಿತ್ತು. ಮುಖ ಊದಿಕೊಂಡಿತ್ತು. ಕಣ್ಣುಗಳಲ್ಲಿ ಆಯಾಸ ಕಂಡು ಬಂದಿತ್ತು. ಸಲ್ಮಾನ್ ಖಾನ್ ಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಈ ವಿಡಿಯೋಗಳು ವೈರಲ್ ಆಗ್ತಾ ಇದ್ದು, ಇದನ್ನ ನೋಡಿದವರು ಸಲ್ಮಾನ್ ಟೈಟ್ ಆಗಿ ವೇದಿಕೆ ಏರಿದ್ದಾರೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಸಲ್ಲು ಬಾಡಿ ಲ್ಯಾಂಗ್ವೇಜ್‌ ನೋಡಿದ ಹಲವರು ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಬಂದು ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ ಅಂತ ಹುಯಿಲೆಬ್ಬಿಸಿದ್ದಾರೆ.

ಅಸಲಿಗೆ ಈ ಶೋಗೂ ಮುನ್ನ ನಿರಂತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಲ್ಮಾನ್ ಸುಸ್ತಾಗಿ ಹೋಗಿದ್ರು. ಪಂಕಜ್ ಧೀರ್ ಅಗಲಿದಾಗ ಅಂತ್ಯಕ್ರಿಯೆಗೆ ಹೋಗಿದ್ದ ಸಲ್ಮಾನ್ ಖಾನ್‌ ಆ ನಂತರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾಗವಹಿಸಿದ್ದರು. ಅಲ್ಲಿಂದ ನೇರವಾಗಿ ಬಿಗ್​ಬಾಸ್ ಶೋಗೆ ಬಂದಿದ್ದಾರೆ. ಅದಕ್ಕೆ ಈರೀತಿ ಕಾಣಿಸಿಕೊಂಡಿದ್ದಾರೆ ಅಂತ ಸಲ್ಲು ಆಪ್ತಮೂಲಗಳು ಹೇಳ್ತಾ ಇವೆ.

ಆದ್ರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಟೈಟಾದ ಸಲ್ಲು ಅಂತ ಸುದ್ದಿ ಟ್ರೆಂಡ್ ಆಗ್ತಾ ಇದೆ. ಬಹುಶಃ ಈ ಬಗ್ಗೆ ಮುಂದಿನ ವೀಕೆಂಡ್ ನಲ್ಲಿ ಖುದ್ದು ಸಲ್ಮಾನ್ ಉತ್ತರ ಕೊಟ್ಟರೂ ಕೊಡಬಹುದು. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video