ರಣ್ ಬೀರ್ ಕಪೂರ್ ಸಿನಿಮಾನ ಮಿಸ್ ಮಾಡ್ಕೊಂಡ ಸೌತ್ ಸ್ಟಾರ್..ಅನಿಮಲ್ ಚಿತ್ರ ಮಹೇಶ್ ಬಾಬು ಯಾಕೆ ಮಾಡಲಿಲ್ಲ ?

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅನಿಮಲ್ ಸಿನಿಮಾವನ್ನೂ ಕೈ ಬಿಟ್ಟಿರುವುದು ನೆಟ್ಟಿಗರು ಶಾಕ್ ಆಗಿದ್ದಾರೆ.
 

Share this Video
  • FB
  • Linkdin
  • Whatsapp

ರಣ್‌ಬೀರ್‌ ಕಪೂರ್‌(Ranbir Kapoor) ಮಾಡಿರುವ ಅನಿಮಲ್‌ ಸಿನಿಮಾವನ್ನು(Animal Movie) ಸೌತ್‌ ಸ್ಟಾರ್ ಮಹೇಶ್‌ ಬಾಬು(Mahesh Babu) ಮಾಡಬೇಕಿತಂತೆ. ಅವರಿಗಾಗಿಯೇ ಸ್ಕ್ರಿಪ್ಟ್‌ನನ್ನು ನಿರ್ದೇಶಕರು ರೆಡಿ ಮಾಡಿದ್ದರಂತೆ. ಆದ್ರೆ ಕಥೆಯನ್ನು ಕೇಳಿದ ಮಹೇಶ್‌ ಬಾಬು ನೋ ಎಂದಿದ್ದರಂತೆ. ಬಹುಶಃ ಮಹೇಶ್‌ ಬಾಬು ಅವರಿಗೆ ಹಿಂದಿಯಲ್ಲಿ ನಟಿಸಲು ಇಷ್ಟ ಇಲ್ಲದ ಕಾರಣ ಹೀಗೆ ಹೇಳಿದ್ದಾರೆ ಎನ್ನಲಾಗ್ತಿದೆ. ಡಿಸೆಂಬರ್ 1 ರಂದು ಸಿನಿಮಾ ಬಿಡುಗಡೆಯಾಗಲಿದೆ. ಪ್ರಚಾರದ ಭಾಗವಾಗಿ ಈಗಾಗಲೇ ಹಲವು ಪ್ರಚಾರ ಕಾರ್ಯಕ್ರಮ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಟಾಲಿವುಡ್ ನ ಆ ಸ್ಟಾರ್ ಹೀರೋ ಈ ಸಿನಿಮಾ ಮಿಸ್ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಅವರ ಅಭಿಮಾನಿಗಳು ಈಗ ಯಾಕೆ ಇಷ್ಟು ಒಳ್ಳೆ ಸಿನಿಮಾ ಬಿಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Weekly Horoscope: ಈ ರಾಶಿಯವರಿಗೆ ಹೆಚ್ಚಿನ ವ್ಯಯವಾಗಲಿದ್ದು, 12 ರಾಶಿಗಳ ವಾರದ ಭವಿಷ್ಯ ಹೇಗಿದೆ ಗೊತ್ತಾ?

Related Video