
Weekly Horoscope: ಈ ರಾಶಿಯವರಿಗೆ ಹೆಚ್ಚಿನ ವ್ಯಯವಾಗಲಿದ್ದು, 12 ರಾಶಿಗಳ ವಾರದ ಭವಿಷ್ಯ ಹೇಗಿದೆ ಗೊತ್ತಾ?
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಈ ವಾರದ ವಿಶೇಷ ನೋಡೋದಾದ್ರೆ, ನವೆಂಬರ್ 26 ಅಂದರೇ ಭಾನುವಾರ ಬುಧಗ್ರಹ ಧನಸ್ಸು ಸಂಕ್ರಮಣ ಇದೆ. ನವೆಂಬರ್ 27, ಸೋಮವಾರ ಕಾರ್ತೀಕ ಪೌರ್ಣಮಿ ಇದ್ದು, ನವೆಂಬರ್ 29 - ಬುಧವಾರ - ಶುಕ್ರಗ್ರಹ ತುಲಾ ಸಂಕ್ರಮಣ ಇದೆ. ನವೆಂಬರ್ 30 ಅಂದರೆ ಗುರುವಾರ ಕನಕದಾಸರ ಜಯಂತಿ ಇದೆ. ಇನ್ನೂ ತುಲಾ ರಾಶಿಯವರಿಗೆ ವಾರಾದಿಯಲ್ಲಿ ಶತ್ರುಗಳ ಭಯ ಕಾಡಲಿದ್ದು, ಮಕ್ಕಳಿಂದ ಅಸಮಾಧಾನ, ಆಗಂತುಕ ತೊಡಕುಗಳು, ನಷ್ಟವೂ ಸಂಭವಿಸಲಿದೆ. ವಾರ ಮಧ್ಯದಲ್ಲಿ ದೇಹಬಲ ಹೆಚ್ಚಲಿದೆ. ವಸ್ತ್ರ-ವಾಹನ ಲಾಭ
ಪ್ರಯಾಣದಲ್ಲಿ ತೊಂದರೆ ಇದ್ದು, ಬಂಧುಗಳ ವಿಚಾರದಲ್ಲಿ ಎಚ್ಚರವಹಿಸಿ. ವೃತ್ತಿಯಲ್ಲಿ ಅನುಕೂಲವಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಗಂಟಲ ಬಾಧೆ, ಆಹಾರದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಪರಿಹಾರಕ್ಕೆ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: 200 ಕೋಣಗಳ ಜೋಡಿ..7 ಲಕ್ಷ ಜನ ಭಾಗಿ..! ಹೇಗಿತ್ತು ಫಸ್ಟ್ ಡೇ ಕಂಬಳೋತ್ಸವ..?