ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸೌತ್ ನಟ !
ರಜಿನಿಕಾಂತ್ ,ಶಾರುಖಾನ್ ,ಸಲ್ಮಾನ್ , ವಿಜಯ್ ಅಲ್ಲ..ಅಲ್ಲು ಅರ್ಜುನ್ ಮಹಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನ್ನುವ ಬಿರುದಿಗೆ ಪಾತ್ರರಾಗಲಿದ್ದಾರೆ. ನಟ ರಜನಿಕಾಂತ್ ಪಡೆದ ಸಂಭಾವನೆ ಮೀರಿಸಿ ಅಲ್ಲು ಖಜಾನೆ ತುಂಬಿಸಿಕೊಳ್ಳಲು ನಿಂತಿದ್ದಾರೆ.
ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಸೌತ್ ಸಿನಿಮಾಗಳಿಗೆ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ. ಪುಷ್ಪ(Pushpa 2) ಅಲ್ಲು ಅರ್ಜುನ್(Allu Arjun) ಎನ್ನುವ ಟಾಲಿವುಡ್ ನಟನನ್ನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸ್ಟಾರ್ ಮಾಡಿದ ಸಿನಿಮಾ. ದಕ್ಷಿಣ ಭಾರತದಲ್ಲಿ ಇಂಥ ಕಲಾವಿದ ಇದ್ದಾನೆಂದು ತೋರಿಸಿದ ಸಿನಿಮಾ. ಅಲ್ಲು ಅರ್ಜುನ್‌ಗೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ. ಇದೀಗ ಪುಷ್ಪ ನಟ ಸಂಭಾವನೆ(Remuneration) ವಿಷಯದಲ್ಲಿ ಧಗಧಗಿಸುತ್ತಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ ಖಜಾನೆ ತುಂಬಿಸಿಕೊಳ್ಳುತ್ತಿರುವ ಮೊತ್ತ 330 ಕೋಟಿ ರೂಪಾಯಿ. ಭಾರತೀಯ ಚಿತ್ರರಂಗ ಆಕಾಶ ನೋಡುತ್ತಿದೆ. ಪುಷ್ಪ ಸಿನಿಮಾಗೆ ಸಂಭಾವನೆ ಪಡೆಯುತ್ತಿಲ್ಲ ಬದಲಿಗೆ ಶೇರ್ ಪಡೆಯುತ್ತಿದ್ದಾರೆ. ಅದು 330 ಕೋಟಿ.. ಸಿನಿಮಾ ಬಿಡುಗಡೆ ಮುನ್ನ ಮಾಡುವ ಬ್ಯುಸಿನೆಸ್ ಶೇ.33ರಷ್ಟು ಹಣ ಅಲ್ಲು ಸಂಭಾವನೆಯಾಗಿ ಕೇಳಿದ್ದಾರೆ. ಸ್ಯಾಟ್‌ಲೈಟ್, ಆಡಿಯೋ, ಡಿಜಿಟಲ್, ಥಿಯರಿಟಿಕಲ್, ಡಬ್ಬಿಂಗ್ ಹಕ್ಕು ಸೇರಿ ಸಾವಿರ ಕೋಟಿ ಬಿಜಿನೆಸ್ ಪಕ್ಕಾ. ಅದರ ಪ್ರಕಾರ 330 ಕೋಟಿ ಹಣ ಅಕೌಂಟ್‌ಗೆ ಜಮೆ ಮಾಡಲಿದ್ದಾರೆ. ರಜನಿಯ ಹೆಸರಿಡದ ಹೊಸ ಚಿತ್ರಕ್ಕೆ 210 ಕೋಟಿ ಪಡೆದಿದ್ದರು. ತಲೈವಾಗೆ ಅಲ್ಲು ಸೆಡ್ಡು ಹೊಡೆದಿದ್ದಾರೆಂದು ಚರ್ಚೆಯಾಗುತ್ತಿದೆ.
ಇದನ್ನೂ ವೀಕ್ಷಿಸಿ: ಮೋಹಕ ತಾರೆ ನಟಿ ರಮ್ಯಾ ಬರ್ತ್ ಡೇ : ಅಭಿಮಾನಿಗಳಿಗೆ ಕೊಡ್ತಾರಾ ಸರ್ಪ್ರೈಸ್?