Gangubai Kathiawadi: ಪ್ರಮೋಷನ್ ವೇಳೆ 'ಗಂಗೂಬಾಯಿ' ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಆಲಿಯಾ

ಬಾಲಿವುಡ್ ನಟಿ ಆಲಿಯಾ ಭಟ್​ಗೆ 'ಗಂಗೂಬಾಯಿ ಕಾಠಿಯಾವಾಡಿ' ದೊಡ್ಡ ಯಶಸ್ಸನ್ನು ತಂದುಕೊಡುತ್ತಿದೆ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರವು ಒಳ್ಳೆಯ ಪ್ರದರ್ಶನ ಕಾಣುತ್ತಿದೆ. 

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ಆಲಿಯಾ ಭಟ್​ಗೆ (Alia Bhatt) 'ಗಂಗೂಬಾಯಿ ಕಾಠಿಯಾವಾಡಿ' (Gangubai Kathiawadi) ದೊಡ್ಡ ಯಶಸ್ಸನ್ನು ತಂದುಕೊಡುತ್ತಿದೆ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರ (Sanjay Leela Bhansali) ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರವು ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ವಿಶೇಷವಾಗಿ ಆಲಿಯಾ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ತಮ್ಮ ಪಾತ್ರಗಳ ಆಯ್ಕೆಯಿಂದಲೇ ಆಲಿಯಾ ಬಾಲಿವುಡ್​ನಲ್ಲಿ ಭದ್ರವಾಗಿ ಬೇರೂರುತ್ತಿದ್ದಾರೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ. ಇದೆಲ್ಲದರಿಂದ ಆಲಿಯಾ ಖುಷಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Gangubai Kathiawadi ಚಿತ್ರದಲ್ಲಿ ನಟಿಸೋಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡ ಪ್ರಚಾರ ಕಾರ್ಯವನ್ನು ನಿಲ್ಲಿಸಿಲ್ಲ. ವಿವಿಧ ರೂಪದಲ್ಲಿ ಪ್ರಚಾರ ನಡೆಯುತ್ತಲೇ ಇದೆ. ಪ್ರಸ್ತುತ ಆಲಿಯಾ ಮುಂಬೈನಲ್ಲಿ ಡಬಲ್ ಡೆಕ್ಕರ್​ ಬಸ್​ನಲ್ಲಿ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದೆ. ಹೌದು! ಆಲಿಯಾ ಸಿನಿ ಪ್ರಚಾರದ ವೇಳೆ 'ಗಂಗೂಬಾಯಿ' ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಸಿನಿಮಾದ ಹಾಗೆ ಬ್ಯೂಟಿ ಕೂಡಾ ಅಷ್ಟೇ ಕಿಕ್ ಕೊಡುತ್ತಿದೆ. ಆಲಿಯಾ ಬಂದಲೆಲ್ಲಾ ಹೋಳಿ ಹಬ್ಬದಂತೆ ಕಾಣುತ್ತಿದೆ. ಆಲಿಯಾ ಕ್ಯೂಟ್ ಬ್ಯೂಟಿ ಸೆರೆಯಾಗಿರೋ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video