Gangubai Kathiawadi ಚಿತ್ರದಲ್ಲಿ ನಟಿಸೋಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದರು. ಈ ಪಾತ್ರದಲ್ಲಿ ನಟಿಸೋಕೆ ಅವರು ಪಡೆದ ಸಂಭಾವನೆ ಬಗ್ಗೆ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. 

First Published Mar 4, 2022, 6:40 PM IST | Last Updated Mar 4, 2022, 6:40 PM IST

ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಅಭಿನಯದ ಸಂಜಯ್ ಲೀಲಾ ಬನ್ಸಾಲಿಯವರ (Sanjay Leela Bansali) ಕನಸಿನ ಯೋಜನೆಯಾದ 'ಗಂಗೂಬಾಯಿ ಕಥಿಯಾವಾಡಿ' ದೇಶಾದ್ಯಂತ  ಫೆಬ್ರವರಿ 25 ರಂದು ಬಿಡುಗಡೆಯಾಗಿ ಅಭಿಮಾನಿಗಳು ಮತ್ತು ವಿಮರ್ಶಕರಿಂದ  ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. 'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದರು. ಈ ಪಾತ್ರದಲ್ಲಿ ನಟಿಸೋಕೆ ಅವರು ಪಡೆದ ಸಂಭಾವನೆ ಬಗ್ಗೆ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. 

Alia Bhatt: 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಸುತ್ತ ವಿವಾದಗಳ ಸರಮಾಲೆ!

ಮೂಲಗಳ ಪ್ರಕಾರ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್​ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಇದು ಆಲಿಯಾ ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ಚಿತ್ರವಾಗಿದೆ. ಹಾಗೂ ಚಿತ್ರದ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ ಪಾತ್ರದಲ್ಲಿ ಅಜಯ್​​ ದೇವಗನ್​ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಜಯ್​ ದೇವಗನ್​ ಅವರು 12 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಹರಿದಾಡುತ್ತಿದೆ. ಮುಖ್ಯವಾಗಿ 100 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ 'ಗಂಗೂಬಾಯಿ ಕಥಿಯಾವಾಡಿ' ಚಿತ್ರವನ್ನು ನಿರ್ಮಿಸಲಾಗಿತ್ತು. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories