ಏಜ್‌ಲುಕ್ ಬಂದಿದೆ, ಕಾಸ್ಟ್ಯೂಮ್ ಸರಿ ಹೋಗ್ತಾ ಇಲ್ಲ, ಐಶ್ವರ್ಯಾ ರೈ ಕಾಲೆಳೆದ ನೆಟಿಜನ್ಸ್..!

ಭೂಲೋಕ ಸುಂದರಿ, ನಟಿ ಐಶ್ವರ್ಯಾ ರೈ ಇತ್ತೀಚಿಗೆ ಅಜ್ಜಿ ತರ ಕಾಣಿಸ್ತಾರಂತೆ! ಇದನ್ನ ನಾವು ಹೇಳ್ತಿಲ್ಲ ರೀ, ನೆಟಿಜನ್ಸ್ ಕಮೆಂಟ್ ಮಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಭೂಲೋಕ ಸುಂದರಿ, ನಟಿ ಐಶ್ವರ್ಯಾ ರೈ (Aishwarya Rai) ಇತ್ತೀಚಿಗೆ ಅಜ್ಜಿ ತರ ಕಾಣಿಸ್ತಾರಂತೆ! ಇದನ್ನ ನಾವು ಹೇಳ್ತಿಲ್ಲ ರೀ, ನೆಟಿಜನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes film festival) ಭಾಗವಹಿಸಿದ್ರು. ಕಾಸ್ಟ್ಯೂಮ್ ಢಿಫರೆಂಟಾಗಿರಲಿ ಅಂತ ಬೇರೆ ಬೇರೆ ರೀತಿಯ ಹೂವುಗಳನ್ನು ಸುತ್ತಿಕೊಂಡು ಬಂದಿದ್ರು. ಆದರೆ ಐಶ್ ಬೇಬಿಯನ್ನು ನೋಡಿದವರು ಮಾತ್ರ, ನಿಮಗೆ ವಯಸ್ಸಾದಂತೆ ಕಾಣಿಸ್ತೀರಿ, ನೋಡೊಕೆ ಆಗ್ತಾ ಇಲ್ಲ, ಕಾಸ್ಟ್ಯೂಮ್ ಯಾಕೋ ಸರಿಯಾಗಿ ಕಾಣಿಸ್ತಾ ಇಲ್ಲ, ಏಜ್ ಲುಕ್ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲಾರೀ ಮದುವೆಯಾಗಿ ಮಗುವಾಗಿ 40 + ಆಗಿದೆ. ಈಗಲೂ 20 + ತರ ಇರಬೇಕು ಅಂದ್ರೆ ಹೇಗ್ರೀ ಅಂತ ಇನ್ನೊಂದಿಷ್ಟು ಜನ ಹೇಳಿದ್ದಾರೆ. ಯಾರೇನೇ ಹೇಳಲಿ, ನನ್ನ ಕೆಲಸ ನಾನು ಮಾಡಿಕೊಂಡು ಹೋಗ್ತೀನಿ ಅಂತ ಐಶ್ ಬ್ಯುಸಿಯಾಗಿದ್ದಾರೆ. 

'ಚಾಂಪಿಯನ್' ಅಡಿಯೋ ರಿಲೀಸ್ ಮಾಡಿದ ಸನ್ನಿ:ಸ್ಟೇಜ್ ಮೇಲೆ ಬೆಚ್ಚಿ ಬಿದ್ದ ಪಡ್ಡೆ ಹುಡಗರ ಸೇಸಮ್ಮ!

Related Video