Asianet Suvarna News Asianet Suvarna News

'ಚಾಂಪಿಯನ್' ಆಡಿಯೋ ರಿಲೀಸ್ ಮಾಡಿದ ಸನ್ನಿ: ಸ್ಟೇಜ್ ಮೇಲೆ ಬೆಚ್ಚಿ ಬಿದ್ದ ಪಡ್ಡೆ ಹುಡುಗರ ಸೇಸಮ್ಮ!

ಕಳೆದ ರಾತ್ರಿ ಬೆಂಗಳೂರು ವೆದರ್ ಕೂಲ್ ಕೂಲಾಗಿತ್ತು. ಚುಮು ಚುಮು ಮಳೆಯ ಮಧ್ಯೆ ಚಳಿಯ ತಂಗಾಳಿ ಬೀಸುತ್ತಿತ್ತು. ಆದ್ರೆ ಸಿಲಿಕಾನ್ ಸಿಟಿಯಲ್ಲಿರೋ ಫೈವ್ ಸ್ಟಾರ್ ಹೋಟೆಲ್ ಒಂದು ಫುಲ್ ಹಾಟ್ ವೆದರ್ನಿಂದ ತುಂಬಿತ್ತು. 

ಕಳೆದ ರಾತ್ರಿ ಬೆಂಗಳೂರು ವೆದರ್ ಕೂಲ್ ಕೂಲಾಗಿತ್ತು. ಚುಮು ಚುಮು ಮಳೆಯ ಮಧ್ಯೆ ಚಳಿಯ ತಂಗಾಳಿ ಬೀಸುತ್ತಿತ್ತು. ಆದ್ರೆ ಸಿಲಿಕಾನ್ ಸಿಟಿಯಲ್ಲಿರೋ ಫೈವ್ ಸ್ಟಾರ್ ಹೋಟೆಲ್ ಒಂದು ಫುಲ್ ಹಾಟ್ ವೆದರ್ನಿಂದ ತುಂಬಿತ್ತು. ಯಾಕಂದ್ರೆ ಆ ಹೊಟೇಲ್‌ಗೆ ಬಾಲಿವುಡ್ ಹಾಟ್ ಬಾಂಬ್, ಬೇಬಿ ಡಾಲ್, ಪಡ್ಡೆ ಹುಡುಗರ ಸೇಸಮ್ಮ ಸನ್ನಿ ಲಿಯೋನ್ ಬಂದಿದ್ರು. ಬೇಬಿ ಡಾಲ್ ಸನ್ನಿ ಲಿಯೋನ್ ಏಳು ವರ್ಷಗಳ ನಂತರ ಮತ್ತೊಮ್ಮೆ ಕನ್ನಡ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸಚಿನ್ ದನಪಾಲ್ ಹಾಗು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಚಾಂಪಿಯನ್ ಸಿನಿಮಾದ ಡಿಂಗ್ರಿಬಿಲ್ಲಿ ಹಾಡಿನಲ್ಲಿ ಸೇಸಮ್ಮ ಮೈ ಬಳುಕಿಸಿದ್ದಾರೆ. ಈ ಹಾಡನ್ನ ಸನ್ನಿಯೇ ರಿಲೀಸ್ ಮಾಡಿದ್ದಾರೆ. ಚಾಂಪಿಯನ್ ಸಿನಿಮಾದ ಸ್ಪೆಷಲ್ ಹಾಡಿಗೆ ಸ್ಪೆಷಲ್ ಡಾನ್ಸ್ ಮಾಡಿರೋ ಸನ್ನಿ ಲಿಯೋನ್, ಈ ಸಿನಿಮಾ ಕಾರ್ಯಕ್ರಮಕ್ಕೆ ಬಂದಾಗ ಸ್ಟೇಜ್ ಮೇಲೆ ಬೆಚ್ಚಿ ಬಿದ್ದಿದ್ರು. 

ಸನ್ನಿ ಸ್ಟೇಜ್ ಹತ್ತಿ ಮಾತು ಶುರುಮಾಡುತ್ತಿದ್ದಂತೆ ಕಲರ್ ಪಟಾಕಿಯನ್ನ ಬ್ಲಾಸ್ಟ್ ಮಾಡಿದ್ರು. ಇದು ಗೊತ್ತಿಲ್ಲದ ಸನ್ನಿ ಬೆಚ್ಚಿ ಬೆರಗಾದ್ರು. ಸನ್ನಿ ಲಿಯೋನ್ ಹುಟ್ಟುಹಬ್ಬವನ್ನ ಇತ್ತೀಚೆಗಷ್ಟೆ ಆಚರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಸೇಸಮ್ಮನ ಹುಟ್ಟುಹಬ್ಬವನ್ನ ಊರ ಹಬ್ಬದ ಹಾಗೆ ಮಂಡ್ಯದಲ್ಲಿರೋ ಸನ್ನಿಯ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ರು. ಈ ಬಗ್ಗೆಯೂ ಗಂಡ್ ಹೈಕ್ಳ ಹಾಟಿ ಸನ್ನಿ ಮಾತನಾಡಿದ್ದಾರೆ. ಸೋಷಿಯಲ್ ವರ್ಕ್ ಮಾಡೋದಕ್ಕೆ ಯಾರ ಇನ್ಸ್ಪರೇಷನ್ ಅಗತ್ಯ ಇಲ್ಲ ಅನ್ನಿಸುತ್ತೆ. ಸಹಾಯ ಮಾಡ್ಬೇಕು ಅಂತ ನನಗನ್ನಿಸಿದ್ರೆ ನಾನು ಯಾರಿಗೆ ಬೇಕಾದ್ರು ಹೆಲ್ಪ್ ಮಾಡುತ್ತೇನೆ. ಬೇರೆಯವರಿಗೆ ಸಹಾಯ ಮಾಡೋದಕ್ಕೆ  ಮನುಷತ್ವ ಇದ್ರೆ ಸಾಕು ಸಹಾಯ ಮಾಡಬಹುದು. ಸನ್ನಿ ಮೇಲಿನ ಅಭಿಮಾನ ಹೇಗಿದೆ ಅಂದ್ರೆ ಸನ್ನಿ ಲಿಯೋನ್ ಅಭಿಮಾನಿ ಅಂತ ಹೇಳಿದ್ರೆ ಮಟನ್ ಸ್ಟಾಲ್ನಲ್ಲಿ 20 % ಡಿಸ್ಕೌಂಟ್ ಕೊಡೋ ಮಟನ್ ಸ್ಟಾಲ್ಗಳು ಇವೆ. 

ಊರ ಹಬ್ಬದಂತೆ ಸನ್ನಿ ಬರ್ತಡೇ ಸೆಲಬ್ರೇಟ್ ಮಾಡಿದ ಫ್ಯಾನ್ಸ್

ಈ ಬಗ್ಗೆ  ಸನ್ನಿ ಸನ್ನಿಲಿಯೋನ್ ಮಾತನಾಡಿದ್ದಾರೆ. ನಾನು ಸಸ್ಯಹಾರಿ. ಪ್ರಾಣಿಗಳನ್ನ ಕೊಲ್ಲೋದು ತಪ್ಪು. ಆದ್ರೆ ಕೆಲವರ ಊಟ ಅದೇ ಆಗಿದ್ದಾಗ ಪರವಾಗಿಲ್ಲ ಅದಕ್ಕೆ ಏನು ಮಾಡೋದಕ್ಕೆ ಆಗಲ್ಲ. ಸನ್ನಿ ಲಿಯೋನ್ ಬ್ಯೂಟಿ ಬಗ್ಗೆ ಅವ್ರ ಅಭಿಮಾನಿ ಬಳಗದಲ್ಲಿ ದೊಡ್ಡ ಕುತೂಲಹ ಇದೆ. ಸನ್ನಿ ಬ್ಯೂಟಿಯನ್ನ ಹೇಗೆ ಕಾಪಾಡಿಕೊಳ್ತಾರೆ ಅನ್ನೋ ಪ್ರಶ್ನೆ ಹಲವರಲ್ಲಿದೆ ಇದಕ್ಕೆ ಬೇಬಿ ಡಾಲ್ ಉತ್ತರ ಕೊಟ್ಟಿದ್ದಾರೆ. ನಾನು ಏನು ತಿಂತೀನಿ ಅಂತ ಕರೆಕ್ಟ್ ಆಗಿ ಹೇಳೋದು ಕಷ್ಟ. ಆದ್ರೆ ನಾನು ವರ್ಕೌಟ್ ಮಾಡುತ್ತೇನೆ. ನನೆಗೆ ಏನು ಇಷ್ಟ ಆಗೊತ್ತೋ ಅದನ್ನ ತಿನ್ನುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಹೆಲ್ದಿ ಲೈಫ್ ಸ್ಟೈಲ್ ಫಾಲೋ ಮಾಡ್ತೇನೆ. ನಾನು ಕೇಕ್ ಜಾಸ್ತಿ ತಿನ್ನುತ್ತೇನೆ. ಕಾರ್ಯಕ್ರಮಕ್ಕೆ ಮನದನ್ನೆ ಸನ್ನಿ ಲಿಯೋನ್ ಬರ್ತಾರೆ ಅಂತ ತಿಳಿದು ಅಭಿಮಾನಿಯೊಬ್ಬ ಕಾರ್ಯಕ್ರಮಕ್ಕೆ ಬಂದಿದ್ದ. ಸನ್ನಿ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಆ ಅಭಿಮಾನಿ ಎದೆ ಮೇಲೆ ಸೇಸಮ್ಮ ಸಹಿ ಹಾಕಿ ಕಳುಹಿಸಿದ್ರು. ಹೋಗಿ ಕೂಲ್ ಕೂಲ್ ವೆದರ್ನ ಸಿಲಿಕಾನ್ ಸಿಟಿ ಇಂದಿನಿಂದ ಹಾಟ್ ಹಾಟ್ ಆಗಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories