Adipurush Movie: ಬರೋಬ್ಬರಿ 20 ಸಾವಿರ ಚಿತ್ರಮಂದಿರಗಳಲ್ಲಿ ಪ್ರಭಾಸ್‌ ಸಿನಿಮಾ ರಿಲೀಸ್​!

ಬಾಹುಬಲಿ ಚಿತ್ರದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾಗಿರುವ ಪ್ರಭಾಸ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ 'ಆದಿಪುರುಷ್‌' ಚಿತ್ರದಲ್ಲಿ ರಾಮನ ಅವತಾರ ತಾಳಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್‌ ಆಕ್ಷನ್ ಕಟ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬಾಹುಬಲಿ ಚಿತ್ರದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾಗಿರುವ ಪ್ರಭಾಸ್‌ (Prabhas) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ 'ಆದಿಪುರುಷ್‌' (Adipurush) ಚಿತ್ರದಲ್ಲಿ ರಾಮನ ಅವತಾರ ತಾಳಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್‌ (Om Raut) ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಬರೋಬ್ಬರಿ 400 ಕೋಟಿ ರೂ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್‌ ಅಭಿನಯಿಸುತ್ತಿರುವ ಈ ಚಿತ್ರದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಹೌದು! ಈ ಚಿತ್ರ ವಿಶ್ವದ 20 ಸಾವಿರ ಚಿತ್ರಮಂದಿರಗಳಲ್ಲಿ 15 ಭಾಷೆಗಳಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Pushpa Movie: 'ಪುಷ್ಪ' ಚಿತ್ರವನ್ನು ಈ ಐದು ಕಲಾವಿದರು ರಿಜೆಕ್ಟ್ ಮಾಡಿದ್ರು!

'ಆದಿಪುರುಷ್‌' ಚಿತ್ರ ಪೌರಾಣಿಕ ಕಥೆಯಾದ ರಾಮಾಯಣ ಆಧಾರಿತ ಸಿನಿಮಾವಾಗಿದ್ದು, 15 ಭಾಷೆಗಳಲ್ಲಿ ವಿಶ್ವದ 20 ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದು, ಸೀತೆ ಪಾತ್ರದಲ್ಲಿ ಕೃತಿ ಸನೂನ್ (Kriti Sanon) ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan) ಅಭಿನಯಿಸಿದ್ದು, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ಭಾರತದ ಯಾವುದೇ ಸಿನಿಮಾಗಳೂ ಬಿಡುಗಡೆ ಆಗದಷ್ಟು ಹೆಚ್ಚು ಸಂಖ್ಯೆಯ ಸ್ಕ್ರೀನ್‌ಗಳಲ್ಲಿ 'ಆದಿಪುರುಷ್' ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಸಜ್ಜಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video