Pushpa Movie: 'ಪುಷ್ಪ' ಚಿತ್ರವನ್ನು ಈ ಐದು ಕಲಾವಿದರು ರಿಜೆಕ್ಟ್ ಮಾಡಿದ್ರು!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರವು ಬಿಡುಗಡೆಯಾಗಿ ಈಗಾಗಲೇ ಯಶಸ್ಸು ಗಳಿಸಿದೆ. ಈ ಸಿನಿಮಾದ ಕಥೆ ರೆಡಿಯಾದ ಬಳಿಕ 5 ಕಲಾವಿದರ ಬಳಿ ಮೊದಲು ಹೋಗಿತ್ತು. ಆದರೆ ಕೆಲ ಕಾರಣಗಳಿಂದ ಆ ಪಾತ್ರಗಳನ್ನು ಈ ಕಲಾವಿದರು ರಿಜೆಕ್ಟ್​ ಮಾಡಿದ್ದರಂತೆ. 

Share this Video
  • FB
  • Linkdin
  • Whatsapp

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪ' (Pushpa) ಚಿತ್ರವು ಬಿಡುಗಡೆಯಾಗಿ ಈಗಾಗಲೇ ಯಶಸ್ಸು ಗಳಿಸಿದ್ದು, ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ ಅಮೇಜಾನ್ ಪ್ರೈಮ್‌ನಲ್ಲಿಯೂ 'ಪುಷ್ಪ' ಚಿತ್ರ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಕಥೆ ರೆಡಿಯಾದ ಬಳಿಕ 5 ಕಲಾವಿದರ ಬಳಿ ಮೊದಲು ಹೋಗಿತ್ತು. ಆದರೆ ಕೆಲ ಕಾರಣಗಳಿಂದ ಆ ಪಾತ್ರಗಳನ್ನು ಈ ಕಲಾವಿದರು ರಿಜೆಕ್ಟ್​ ಮಾಡಿದ್ದರಂತೆ. ಹೌದು! ಟಾಲಿವುಡ್ ನಟ ಮಹೇಶ್​ ಬಾಬು ಪುಷ್ಪರಾಜ್​ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಕೆಲ ಕಾರಣಗಳಿಂದ ಈ ಕಥೆಯನ್ನು ಮಹೇಶ್​ ಬಾಬು ರಿಜೆಕ್ಟ್​ ಮಾಡಿದ್ದರಂತೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶನ Pan India ಚಿತ್ರದಲ್ಲಿ ಶಿವರಾಜ್‌ಕುಮಾರ್!

ಶ್ರೀವಲ್ಲಿ ಪಾತ್ರದಲ್ಲಿ ಸಮಂತಾ ನಟಿಸಬೇಕಿತ್ತು. ಆದರೆ ಅವರು ಈ ಪಾತ್ರವನ್ನು ಒಪ್ಪದೇ ಚಿತ್ರದ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡು ಸಖತ್​ ಸೌಂಡ್​ ಮಾಡಿದ್ದರು. 'ಊ ಅಂಟಾವಾ' ಹಾಡಿಗೆ ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ನೋರಾ ಫತೇಹಿ ಅವರಿಗೂ ಆಫರ್​ ನೀಡಲಾಗಿತ್ತು. ಆದರೆ, ಇಬ್ಬರು ಕೂಡ ಈ ಆಫರ್​ ಅನ್ನು ರಿಜೆಕ್ಟ್​ ಮಾಡಿದ್ದರು​. ಮುಖ್ಯವಾಗಿ ಚಿತ್ರದ ಮತ್ತೊಂದು ಹೈಲೆಟ್​ ಅಂದರೆ, ಅದು ಮಲಯಾಳಂ ಸ್ಟಾರ್​ ನಟ ಫಹಾದ್ ಫಾಸಿಲ್ ಪಾತ್ರ. ಈ ಪಾತ್ರಕ್ಕೆ ಮೊದಲು ಕಾಲಿವುಡ್‌ ನಟ ವಿಜಯ್​ ಸೇತುಪತಿ ಅವರಿಗೆ ಆಫರ್​ ನೀಡಲಾಗಿತ್ತು. ಆದರೆ, ಡೇಟ್​ ಸಮಸ್ಯೆಯಿಂದ ವಿಜಯ್​ ಸೇತುಪತಿ ಈ ಪಾತ್ರವನ್ನು ಕೈ ಬಿಟ್ಟಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video