Shruti Haasan ಹುಟ್ಟುಹಬ್ಬಕ್ಕೆ ಬಿಗ್​ ಗಿಫ್ಟ್ ಕೊಟ್ಟ 'ಸಲಾರ್' ಚಿತ್ರತಂಡ

'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಈಗಾಗಲೇ ದೇಶಾದ್ಯಂತ ಕುತೂಹಲ ಸೃಷ್ಟಿಸಿದೆ. ಪ್ರಭಾಸ್ ನಟನೆಯ ಈ ಚಿತ್ರದಲ್ಲಿ ನಾಯಕನ ಪಾತ್ರದ ಲುಕ್ ​ಅನ್ನು ಚಿತ್ರತಂಡ ಈ ಹಿಂದೆ ರಿವೀಲ್ ಮಾಡಿತ್ತು. ಇದೀಗ ಚಿತ್ರತಂಡ ಶ್ರುತಿ ಹಾಸನ್ ಪಾತ್ರವನ್ನು ರಿವೀಲ್ ಮಾಡಿದೆ. 

Share this Video
  • FB
  • Linkdin
  • Whatsapp

'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಸಲಾರ್' (Salaar) ಸಿನಿಮಾ ಈಗಾಗಲೇ ದೇಶಾದ್ಯಂತ ಕುತೂಹಲ ಸೃಷ್ಟಿಸಿದೆ. ಪ್ರಭಾಸ್ (Prabhas) ನಟನೆಯ ಈ ಚಿತ್ರದಲ್ಲಿ ನಾಯಕನ ಪಾತ್ರದ ಲುಕ್ ​ಅನ್ನು ಚಿತ್ರತಂಡ ಈ ಹಿಂದೆ ರಿವೀಲ್ ಮಾಡಿತ್ತು. ಬಹುಭಾಷಾ ನಟಿ ಶ್ರುತಿ ಹಾಸನ್ (Shruti Haasan) 'ಸಲಾರ್​'ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಕುರಿತು ಚಿತ್ರತಂಡ ಗುಟ್ಟು ಕಾಯ್ದುಕೊಂಡಿತ್ತು. ಇದೀಗ ಚಿತ್ರತಂಡ ಶ್ರುತಿ ಹಾಸನ್ ಪಾತ್ರವನ್ನು ರಿವೀಲ್ ಮಾಡಿದೆ. ಹೌದು! ಶ್ರುತಿ ಹುಟ್ಟುಹಬ್ಬಕ್ಕೆ (Birthday) 'ಸಲಾರ್‌' ಸಿನಿಮಾದ ಫಸ್ಟ್‌ ಲುಕ್‌ (FirstLook) ಬಿಡುಗಡೆ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Tamannaah Bhatia: ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟ ಮಿಲ್ಕಿ ಬ್ಯೂಟಿ

ಆದ್ಯ ಎಂಬ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದು, 'ಸೌಂದರ್ಯ ಮತ್ತು ಸೊಬಗನ್ನು ಯಾವಾಗಲೂ ಉನ್ನತಮಟ್ಟದಲ್ಲಿ ತೋರ್ಪಡಿಸುವ ಪ್ರತಿಭಾವಂತ ನಟಿ ಆದ್ಯ' ಎಂದು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಶ್ರುತಿ ಹಾಸನ್ ಅವರು 'ಸಲಾರ್'​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​ವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ನನ್ನ ಮನರಂಜಿಸುವ ನಾಯಕಿ, ಸೆಟ್‌ಗೆ ಮತ್ತಷ್ಟು ಖುಷಿ ತಂದ ಶ್ರುತಿ ಹಾಸನ್‌ ಅವರಿಗೆ ಜನ್ಮದಿನದ ಶುಭಾಶಯಗಳು! ಎಂದು ಪ್ರಭಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ಕೋರಿದ್ದಾರೆ. 'ಸಲಾರ್' ಚಿತ್ರದಲ್ಲಿ ಪ್ರಭಾಸ್​ಗೆ ಎದುರಾಗಿ ಜಗಪತಿ ಬಾಬು ನಟಿಸುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video